S Sreesanth vs Gautam Gambhir: ಗೌತಮ್ ಗಂಭೀರ್-ಶ್ರೀಶಾಂತ್ ಜಗಳಕ್ಕೆ ಬಿಗ್ ಟ್ವಿಸ್ಟ್- ಸೋಷಿಯಲ್ ಮೀಡಿಯದಲ್ಲಿ ರಂಪ, ರಾಡಿಯಾಯ್ತು ಟೀಂ ಇಂಡಿಯಾ ಆಟಗಾರರ ಟಾಕ್ ವಾರ್

Cricket news S Sreesanth vs Gautam Gambhir Sreesanth Lashes Out At Gambhir On Social Media

S Sreesanth vs Gautam Gambhir: ಟೀಮ್ ಇಂಡಿಯಾ ಮಾಜಿ ವೇಗದ ಬೌಲರ್‌ ಎಸ್‌ ಶ್ರೀಶಾಂತ್‌ ಅವರನ್ನು ಲೆಜೆಂಡ್ಸ್‌ ಲೀಗ್‌ ಕ್ರಿಕೆಟ್‌ ಟೂರ್ನಿಯ ಪಂದ್ಯವೊಂದರಲ್ಲಿ ಫಿಕ್ಸರ್‌ ಎಂದು ಭಾರತ ತಂಡದ ಮಾಜಿ ಆಟಗಾರ ಗೌತಮ್ ಗಂಭೀರ್‌ ಟೀಕೆ ಮಾಡಿದ್ದು, ಇದಕ್ಕೆ ಉತ್ತರ ಬರೆದಿರುವ ಕೇರಳ ಎಕ್ಸ್‌ಪ್ರೆಸ್‌ ಖ್ಯಾತಿಯ ಮಾಜಿ ವೇಗಿ ಎಸ್‌ ಶ್ರೀಶಾಂತ್‌, ಆ ದೇವರು ಕೂಡ ಕ್ಷಮಿಸೋಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.

ಹೌದು, ಲೆಜೆಂಡ್ಸ್‌ ಲೀಗ್‌ ಕ್ರಿಕೆಟ್‌ ಟೂರ್ನಿಯಲ್ಲಿ ಇಂಡಿಯಾ ಕ್ಯಾಪಿಟಲ್ಸ್‌ ಮತ್ತು ಗುಜರಾತ್‌ ಜಯಂಟ್ಸ್‌ ನಡುವಣ ಪಂದ್ಯದಲ್ಲಿ ಗೌತಮ್ ಗಂಭೀರ್‌ ಮತ್ತು ಎಸ್‌ ಶ್ರೀಶಾಂತ್‌ ನಡುವೆ( S Sreesanth vs Gautam Gambhir) ಮಾತಿನ ಚಕಮಕಿ ನಡೆದಿದೆ. ಲೆಜೆಂಡ್ಸ್‌ ಲೀಗ್‌ ಕ್ರಿಕೆಟ್‌ ಟೂರ್ನಿಯ ಎಲಿಮಿನೇಟರ್‌ ಪಂದ್ಯದಲ್ಲಿ ಗೌತಮ್ ಗಂಭೀರ್‌ ಸಾರಥ್ಯದ ಇಂಡಿಯಾ ಲೆಜೆಂಡ್ಸ್ ತಂಡ 12 ರನ್‌ಗಳ ಜಯ ದಾಖಲಿಸಿತು. ಆದರೆ, ಇಂಡಿಯಾ ಲೆಜೆಂಡ್ಸ್ ಗೆಲುವಿಗಿಂತ ಗಂಭೀರ್‌ ವರ್ತನೆ ಈಗ ಭಾರಿ ಚರ್ಚೆಯಲ್ಲಿದೆ.

ಮ್ಯಾಚ್‌ ವೇಳೆ ಗಂಭೀರ್‌ ತಮ್ಮನ್ನು ಫಿಕ್ಸರ್‌ ಎಂದು ನಿರಂತರವಾಗಿ ಸ್ಲೆಡ್ಜ್‌ ಮಾಡಿದರು ಎಂದು ಎಸ್‌ ಶ್ರೀಶಾಂತ್‌ ವಿಡಿಯೋ ಒಂದನ್ನು ಹಂಚಿಕೊಂಡರು. ಇದರ ಬೆನ್ನಲ್ಲೇ ಶ್ರೀಶಾಂತ್‌ ಅವರ ಪತ್ನಿ ಕೂಡ ಸೋಷಿಯಲ್ ಮೀಡಿಯಾ ಮೂಲಕ ಗಂಭೀರ್‌ಗೆ ಕ್ಲಾಸ್‌ ತೆಗೆದುಕೊಂಡಿದ್ದರು.

“ಒಬ್ಬ ಸ್ಪೋರ್ಟ್ಸ್‌ಮನ್‌ ಮತ್ತು ಒಬ್ಬ ಸಹೋದರನಾಗಲು ಇರಬೇಕಾದ ಎಲ್ಲೆಯನ್ನು ನೀವು ಮೀರಿದ್ದೀರಿ. ನಿಮ್ಮ ಜನರನ್ನು ನೀವು ಪ್ರತಿನಿಧಿಸುತ್ತಿರುವ ವ್ಯಕ್ತಿ. ಆದರೂ ನೀವು ಬೇರೆ ಕ್ರಿಕೆಟಿಗರೊಂದಿಗೆ ಜಗಳವಾಡುತ್ತಿದ್ದೀರಿ. ನಿಮ್ಮ ಸಮಸ್ಯೆಯಾದರೂ ಏನು? ನಿಮ್ಮ ನಡೆಗೆ ನಗುವೊಂದೇ ನನ್ನ ಉತ್ತರ. ನೀವು ನನ್ನನ್ನು ಫಿಕ್ಸರ್‌ ಎಂದು ಆರೋಪ ಮಾಡುತ್ತಿದ್ದೀರಿ? ನಿಮ್ಮನ್ನು ನೀವು ಸುಪ್ರೀಂ ಕೋರ್ಟ್‌ಗಿಂತಲೂ ಮೇಲೆಂದು ಭಾವಿಸಿದ್ದೀರ?,” ಎಂದು ಕಾಮೆಂಟ್‌ ಬಾಕ್ಸ್‌ನಲ್ಲಿ ಎಸ್‌ ಶ್ರೀಶಾಂತ್‌ ಉತ್ತರ ಬರೆದಿದ್ದಾರೆ.

“ಈ ರೀತಿ ಮಾತನಾಡಲು ನಿಮಗೆ ಯಾವುದೇ ಅಧಿಕಾರವಿಲ್ಲ. ಅಂಪೈರ್‌ಗಳನ್ನೂ ನೀವು ಬೈದಿದ್ದೀರಿ. ಇಷ್ಟೆಲ್ಲ ಮಾತನಾಡಿ ನಗುತ್ತಿದ್ದೀರಿ. ನಿಮ್ಮಲ್ಲಿ ದುರಹಂಕಾರ ತುಂಬಿದೆ. ಒಳ್ಳೆತನ ಇಲ್ಲದ ವ್ಯಕ್ತಿ ನೀವು. ನಿಮ್ಮನ್ನು ಬೆಂಬಲಿಸಿದ ಜನಕ್ಕೂ ನೀವು ಗೌರವಿಸುವುದಿಲ್ಲ. ನಿನ್ನೆಯವರೆಗೂ ನಿಮ್ಮ ಬಗ್ಗೆ ಮತ್ತು ಕುಟುಂಬದ ಬಗ್ಗೆ ನನಗೆ ಅಪಾರ ಗೌರವ ಇತ್ತು. ಆದರೂ ನೀವು ಅನಗತ್ಯ ಪದಗಳನ್ನು ಬಳಸಿದ್ದೀರಿ. ಒಂದಲ್ಲ 8 ಬಾರಿ ಫಿಕ್ಸರ್‌ ಎಂದು ಕರೆದಿದ್ದಾರೆ. ಅಂಪೈರ್‌ ಮತ್ತು ನನಗೆ ಎಫ್‌ ಪದ ಪಳಕೆ ಮಾಡಿದ್ದೀರಿ” ಎಂದು ಶ್ರೀಶಾಂತ್‌ ಜಾಡಿಸಿದ್ದಾರೆ.

“ನಿಮ್ಮ ಅಂತರಾತ್ಮಕ್ಕೆ ನೀವು ಮಾಡಿರುವುದು ತಪ್ಪು ಎಂಬುದು ತಿಳಿದಿರುತ್ತದೆ. ಆ ದೇವರು ಕೂಡ ನಿಮ್ಮನ್ನು ಕ್ಷಮಿಸುವುದಿಲ್ಲ. ಇದಾದ ಬಳಿಕ ನಿಮಗೆ ಫೀಲ್ಡ್‌ಗೆ ಬರಲು ಕೂಡ ಸಾಧ್ಯವಾಗಲಿಲ್ಲ. ಆ ದೇವರು ಎಲ್ಲವನ್ನೂ ನೋಡುತ್ತಿರುತ್ತಾನೆ,” ಎಂದು ಎಸ್‌ ಶ್ರೀಶಾಂತ್‌ ಕಾಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: Mahalakshmi-Ravindar: ರಾತ್ರಿ ನಿದ್ದೆ ಮಾಡಿದ್ರೂ ಅದಕ್ಕಾಗಿ ಎಬ್ಬಿಸ್ತಾನೆ, ಎಷ್ಟು ಬೇಡ ಅಂದ್ರೂ ಸುಮ್ಮನಾಗಲ್ಲ !! ದಢೂತಿ ಗಂಡನ ಹೊಸ ಚಾಳಿ ಹೇಳಿ ಕಣ್ಣೀರಾಕಿದ ಮಹಾಲಕ್ಷ್ಮೀ!!

Leave A Reply

Your email address will not be published.