Pan Card: ದೇಶಾದ್ಯಂತ ಪಾನ್ ಕಾರ್ಡ್ ಗೆ ಬಂತು ಹೊಸ ರೂಲ್ಸ್ – ಮಿಸ್ ಆದ್ರೆ 10,000 ಕಟ್ಟಬೇಕಾದೀತು ಹುಷಾರ್ !!

PAN Card: ಪ್ಯಾನ್ ಕಾರ್ಡ್(PAN Card)ಆದಾಯ ತೆರಿಗೆ ಇಲಾಖೆಯಿಂದ ನೀಡಲಾಗುವ ಪ್ರಮುಖ ದಾಖಲೆಯಾಗಿದೆ.ಬ್ಯಾಂಕ್ ಖಾತೆ ತೆರೆಯಲು, ಸಾಲ ಪಡೆಯಲು ಐಟಿಆರ್ ಸಲ್ಲಿಕೆಗೆ (ITR)ಪ್ಯಾನ್ ಕಾರ್ಡ್ ಅವಶ್ಯಕವಾಗಿದೆ. ಪ್ಯಾನ್ ಸಂಖ್ಯೆಯು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ತೆರಿಗೆ ಪಾವತಿ ಮಾಡುವವರಿಗೆ ಪ್ಯಾನ್ ಕಾರ್ಡ್ ಅತ್ಯವಶ್ಯಕವಾಗಿದ್ದು, ಪ್ಯಾನ್ ಕಾರ್ಡ್ ಇಲ್ಲದಿದ್ದರೆ, ಆದಾಯ ತೆರಿಗೆ ಪಾವತಿ ಸಂದರ್ಭ ತೊಡಕು ಉಂಟಾಗುವುದು ನಿಶ್ಚಿತ.

ಆದಾಯ ತೆರಿಗೆ ಇಲಾಖೆಯು ಈಗ ಹೊಸ ನಿಯಮ ಹೊರಡಿಸಿದ್ದು, ಈ ನಿಯಮ ಉಲ್ಲಂಘಿಸಿ ತಗಲಾಕಿಕೊಂಡರೆ 10 ಸಾವಿರ ರೂಪಾಯಿ ನಿಮ್ಮ ಜೇಬಿಗೆ ಕತ್ತರಿ ಬೀಳೋದು ಫಿಕ್ಸ್!!! ನಿಮ್ಮಲ್ಲಿ ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಇದ್ದರೆ ಗಮನಿಸಿ, ಆದಾಯ ತೆರಿಗೆ ಕಾಯ್ದೆಯಲ್ಲಿ ಇದಕ್ಕೆ ಸಂಬಂಧಿಸಿದ ನಿಯಮಗಳು ಮತ್ತು ದಂಡಗಳ ಬಗ್ಗೆ ಮಾಹಿತಿ ತಿಳಿದಿರುವುದು ಉತ್ತಮ.

ಆದಾಯ ತೆರಿಗೆ ಇಲಾಖೆಯ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಯು ಕೇವಲ ಒಂದು ಪ್ಯಾನ್ ಸಂಖ್ಯೆಯನ್ನು ಹೊಂದಿರಬೇಕಾಗಿದ್ದು, ಒಬ್ಬ ವ್ಯಕ್ತಿ ಅಥವಾ ಕಂಪನಿಯು ಒಂದಕ್ಕಿಂತ ಹೆಚ್ಚು ಪ್ಯಾನ್ ಸಂಖ್ಯೆಯನ್ನು ಹೊಂದಿರುವುದು ಕಾನೂನುಬಾಹಿರವಾಗಿದ್ದು, ಈ ವಿಚಾರದಲ್ಲಿ ಸಿಕ್ಕಿಬಿದ್ದರೆ, ಆದಾಯ ತೆರಿಗೆ ಇಲಾಖೆ ಕಾನೂನು ಕ್ರಮ ಕೈಗೊಳ್ಳುವ ಜೊತೆಗೆ ದಂಡವನ್ನು ಕೂಡ ವಿಧಿಸಬಹುದು.

* ಒಬ್ಬ ವ್ಯಕ್ತಿಯು ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಹೊಂದಿದ್ದರೆ, ಆದಾಯ ತೆರಿಗೆ ಕಾಯಿದೆ 1961 ರ ಸೆಕ್ಷನ್ 272B ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಈ ಸೆಕ್ಷನ್ ಅಡಿಯಲ್ಲಿ, ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಹೊಂದಿರುವ ವ್ಯಕ್ತಿಗೆ 10,000 ರೂ.ಗಳ ದಂಡವನ್ನು ವಿಧಿಸುವ ಸಂಭವ ಹೆಚ್ಚಿದೆ.

* ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್‌ಗಳಿದ್ದಲ್ಲಿ, ವ್ಯಕ್ತಿಯು ಎರಡನೇ ಪ್ಯಾನ್ ಕಾರ್ಡ್ ಅನ್ನು ಸರೆಂಡರ್ ಮಾಡಬೇಕಾಗುತ್ತದೆ.

ಸರೆಂಡರ್ ಮಾಡುವುದು ಹೇಗೆ?:
ಪ್ಯಾನ್ ಕಾರ್ಡ್ ಅನ್ನು ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಸರೆಂಡರ್ ಮಾಡಬಹುದು. ಆನ್‌ಲೈನ್‌ನಲ್ಲಿ ಪ್ಯಾನ್ ಕಾರ್ಡ್ ಅನ್ನು ಸರೆಂಡರ್ ಮಾಡಲು ಈ ಹಂತಗಳನ್ನು ಅನುಸರಿಸಬೇಕು.
# ಆನ್‌ಲೈನ್‌ನಲ್ಲಿ ಸರೆಂಡರ್ ಮಾಡಲು, ಆದಾಯ ತೆರಿಗೆ ಇಲಾಖೆಯ ಆನ್‌ಲೈನ್ ಪೋರ್ಟಲ್‌ಗೆ ಭೇಟಿ ನೀಡಿ ಅಥವಾ https://www.tin-nsdl.com/faqs/pan/faq-pan-cancellation.html ಕ್ಲಿಕ್ ಮಾಡಿಕೊಳ್ಳಿ.
# ಫಾರ್ಮ್‌ನ ಮೇಲ್ಭಾಗದಲ್ಲಿ ನೀವು ಪ್ರಸ್ತುತ ಬಳಸುತ್ತಿರುವ PAN ನಮೂದಿಸುವ ಮೂಲಕ PAN ಬದಲಾವಣೆ ವಿನಂತಿಯ ಅರ್ಜಿ ನಮೂನೆ ಸಲ್ಲಿಸಬೇಕು.
# ಫಾರ್ಮ್ 11 ಮತ್ತು ಸಂಬಂಧಿತ ಪ್ಯಾನ್ ಕಾರ್ಡ್‌ನ ಪ್ರತಿಯನ್ನು ಫಾರ್ಮ್‌ನೊಂದಿಗೆ ಸಲ್ಲಿಸಬೇಕು.

ಇದನ್ನು ಓದಿ: Rajasthan: ರಾಜಸ್ಥಾನದಲ್ಲಿ ಬಿಜೆಪಿಗೆ ಬಿಗ್ ಶಾಕ್- 30 ಶಾಸಕರು ಕಾಂಗ್ರೆಸ್ ಸೇರ್ಪಡೆ ?!

ಆಫ್‌ಲೈನ್ ಸರೆಂಡರ್ ಪ್ರಕ್ರಿಯೆ ಹೀಗಿದೆ.

# PAN ಅನ್ನು ಆಫ್‌ಲೈನ್‌ನಲ್ಲಿ ಸಲ್ಲಿಸಲು ಫಾರ್ಮ್ 49A ಅನ್ನು ಭರ್ತಿ ಮಾಡಬೇಕು.
# ಸರೆಂಡರ್ ಮಾಡಬೇಕಾದ ಪ್ಯಾನ್ ಸಂಖ್ಯೆಯನ್ನು ನಮೂದಿಸಿಕೊಂಡು ಫಾರ್ಮ್ ಅನ್ನು ಯುಟಿಐ ಇಲ್ಲವೇ ಎನ್‌ಎಸ್‌ಡಿಎಲ್ ಟಿನ್ ಫೆಸಿಲಿಟೇಶನ್ ಸೆಂಟರ್‌ಗೆ ಸಲ್ಲಿಸಬೇಕು.
# ನಿಮ್ಮ ಅಧಿಕಾರ ವ್ಯಾಪ್ತಿಯ ಮೌಲ್ಯಮಾಪನ ಅಧಿಕಾರಿಗೆ ಪತ್ರವನ್ನು ಬರೆದು, ನಿಮ್ಮ ಪ್ಯಾನ್ ಕಾರ್ಡ್‌ನಲ್ಲಿ ಪೂರ್ಣ ಹೆಸರು, ಹುಟ್ಟಿದ ದಿನಾಂಕದಂತಹ ನಿಮ್ಮ ವೈಯಕ್ತಿಕ ವಿವರಗಳನ್ನು ನಮೂದಿಸಬೇಕು.
# www.incometaxindiaefiling.gov.in ನಲ್ಲಿ ನಿಮ್ಮ ಅಧಿಕಾರ ವ್ಯಾಪ್ತಿಯಲ್ಲಿರುವ ಅಧಿಕಾರಿಯನ್ನು ನೀವು ಭೇಟಿ ಮಾಡಿ.
# NSDL TIN ಫೆಸಿಲಿಟೇಶನ್ ಸೆಂಟರ್‌ನಿಂದ ಸ್ವೀಕರಿಸಿದ ಸ್ವೀಕೃತಿ ಪ್ರತಿಯೊಂದಿಗೆ ನಕಲಿ PAN ನ ನಕಲನ್ನು ಲಗತ್ತಿಸಿ ಸಲ್ಲಿಸಬೇಕು.

Leave A Reply

Your email address will not be published.