Vastu Tips For Prosperity: ಈ ವಸ್ತುಗಳನ್ನು ಮನೆಗೆ ತಂದಿಡಿ – ಲಕ್ಷೀದೇವಿ ಹೇಗೆ ಒಲಿದು ಬರುತ್ತಾಳೆ ನೋಡಿ !!
Astrology news lifestyle vastu tips for prosperity bring theses things to home to get goddess Lakshmi blessings
Vastu Tips For Prosperity: ವಾಸ್ತು ಶಾಸ್ತ್ರದ (Vastu Shastra)ಪ್ರಕಾರ ಮನೆ ಕಟ್ಟಿದರೆ ಆ ಮನೆಯಲ್ಲಿ ಸದಾ ಸುಖ- ಸಮೃದ್ಧಿಯಾಗುತ್ತದೆ (Vastu Tips For Prosperity)ಎಂಬುದು ಬಲ್ಲವರ ಅಭಿಪ್ರಾಯ. ಅದೇ ರೀತಿ, ಮನೆಯಲ್ಲಿ ಯಾವುದೇ ವಸ್ತುವನ್ನೇ ಆದರೂ ಕೂಡ ವಾಸ್ತು ಪ್ರಕಾರ ಇಡಬೇಕು. ಪ್ರತಿಯೊಬ್ಬರು ಕೂಡ ತಾಯಿ ಲಕ್ಷ್ಮಿಯ (lord Lakshmi)ಕೃಪೆ ಸದಾ ನಮ್ಮ ಮೇಲಿರಬೇಕು ಎಂದು ಬಯಸುವುದು ಸಹಜ. ಹೀಗಾಗಿ, ವಾಸ್ತುಶಾಸ್ತ್ರ(Vastu Tips For Prosperity)ಹಾಗೂ ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ಕುರಿತು ಸಲಹೆ ನೀಡಲಾಗಿದೆ.
ನಾವು ಮನೆಯಲ್ಲಿ ಇಡುವ ವಸ್ತುಗಳ ಸ್ಥಾನವು ನಮ್ಮ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ವಾಸ್ತು ಪ್ರಕಾರ, ಕೆಲ ಕಾರ್ಯಗಳನ್ನು ಮಾಡಿದರೆ ಲಕ್ಷ್ಮಿಯ ಕೃಪೆಯಿಂದ ವ್ಯಕ್ತಿಯ ಜೀವನದಲ್ಲಿ ಯಾವಾಗಲೂ ಹಣದ ಕೊರತೆ ಎದುರಾಗದು. (Lifestyle Tips In Kannada) ವಾಸ್ತು ಪ್ರಕಾರ, ಮನೆಯಲ್ಲಿ ತಪ್ಪು ದಿಕ್ಕಿನಲ್ಲಿ ನೀರಿನ ಟ್ಯಾಂಕ್ ಇರಿಸಿದರೆ, ಇದು ವ್ಯಕ್ತಿಯ ಆರ್ಥಿಕ ಮತ್ತು ದೈಹಿಕ ಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹೀಗಾಗಿ, ನೀರಿನ ಟ್ಯಾಂಕ್ ಅನ್ನು ಯಾವಾಗಲೂ ಈಶಾನ್ಯ ದಿಕ್ಕಿನಲ್ಲಿ ಇರಿಸಬೇಕು. ಒಂದು ವೇಳೆ ತಪ್ಪು ದಿಕ್ಕಿನಲ್ಲಿ ಇಟ್ಟಿರುವ ನೀರಿನ ಟ್ಯಾಂಕ್ ಅನ್ನು ತೆಗೆಯಲು ಆಗದೇ ಇದ್ದಲ್ಲಿ ವಾಸ್ತು ದೋಷಗಳನ್ನು ಕಡಿಮೆ ಮಾಡಲು ಅದಕ್ಕೆ ಬಿಳಿ ಬಣ್ಣವನ್ನು ಹಚ್ಚಬಹುದು.
ಹಿಂದೂ ಧರ್ಮದಲ್ಲಿ, ಕುಬೇರನನ್ನು ಸಂಪತ್ತು ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಸಂಪತ್ತಿನ ದೇವತೆಯಾದ ಲಕ್ಷ್ಮಿಯಂತೆ ಕುಬೇರನನ್ನು ಕೂಡ ಸಂಪತ್ತಿನ ಅಧಿದೇವರೆಂದು ಪರಿಗಣಿಸಲಾಗುತ್ತದೆ. ಕುಬೇರ ದೇವನ ವಿಗ್ರಹದ ಜೊತೆಗೆ ಕುಬೇರ ಯಂತ್ರವನ್ನು ಕೂಡ ಇರಿಸಬಹುದು.
ಮನೆಯಲ್ಲಿ ತಿಜೋರಿ ಅಥವಾ ಬೀರುವನ್ನು ಸರಿಯಾದ ದಿಕ್ಕಿನಲ್ಲಿ ಇಡಬೇಕು. ಮನೆಯಲ್ಲಿರುವ ತಿಜೋರಿಯನ್ನು ಅನ್ನು ಮನೆಯ ನೈಋತ್ಯ ದಿಕ್ಕಿನಲ್ಲಿ ಇಡಬೇಕು. ಆದರೆ ತಿಜೋರಿಯ ಬಾಗಿಲು ಪಶ್ಚಿಮ ಅಥವಾ ದಕ್ಷಿಣಕ್ಕೆ ತೆರೆಯದಂತೆ ಎಚ್ಚರಿಕೆ ವಹಿಸಿ. ಇಲ್ಲದಿದ್ದರೆ ವ್ಯಕ್ತಿಯು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗಬಹುದು.
ಮನೆಯ ಈಶಾನ್ಯ ದಿಕ್ಕಿನಲ್ಲಿ ಕುಬೇರ್ ಯಂತ್ರವನ್ನು ಸ್ಥಾಪಿಸಿ. ಆದರೆ, ಕುಬೇರ್ ಯಂತ್ರದ ಬಳಿ ಭಾರೀ ಪೀಠೋಪಕರಣಗಳು, ಶೌಚಾಲಯಗಳು, ಶೂಗಳನ್ನು ಇಡುವ ಕಪಾಟು, ಡಸ್ಟ್‌ಬಿನ್ ಗಳನ್ನು ಇಡಬಾರದು. ಇದರಿಂದಾಗಿ ಲಾಭದ ಬದಲಿಗೆ ನಷ್ಟ ಹೆಚ್ಚಾಗುತ್ತದೆ.
ಮನೆಯಲ್ಲಿ ಫಿಶ್ ಅಕ್ವೇರಿಯಂ ಅಥವಾ ಫೌಂಟೇನ್ ಇಡುವುದು ಕೂಡ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅಕ್ವೇರಿಯಂ ಅನ್ನು ಮನೆಯ ಈಶಾನ್ಯ ಮೂಲೆಯಲ್ಲಿ ಇಡುವುದರಿಂದ ಆರ್ಥಿಕ ಲಾಭ ಹೆಚ್ಚುತ್ತದೆ. ಇದರ ಜೊತೆಗೆ ಅಕ್ವೇರಿಯಂನಲ್ಲಿ ಯಾವಾಗಲೂ ನೀರು ಇರುವಂತೆ ವಿಶೇಷ ಗಮನ ವಹಿಸಿ. ಇದನ್ನು ನಿರ್ಲಕ್ಷಿಸಿದರೆ, ವ್ಯಕ್ತಿಯು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ.