P M Modi: 3 ರಾಜ್ಯ ಗೆದ್ದ ಬಳಿಕ ಮೊದಲ ಟ್ವೀಟ್ ಹರಿಬಿಟ್ಟ ಪ್ರಧಾನಿ ಮೋದಿ !! ಕುತೂಹಲ ಕೆರಳಿಸಿದ ಬರಹ

P M Modi: ನಿನ್ನೆ ನಡೆದ 4 ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸಗಡ ಸೇರಿ 3 ರಾಜ್ಯಗಳಲ್ಲಿ ಬಿಜೆಪಿ(BJP) ಅಭೂತಪೂರ್ವ ಗೆಲವು ದಾಖಲಿಸಿದೆ. ಈ ಮೂಲಕ ಲೋಕಸಭಾ ಚುನಾವಣೆಯಲ್ಲಿ(Parliment election)ಮೋದಿಯೇ ಗೆಲ್ಲುವದೆಂದು ಹೊಸ ಸಂದೇಶ ರವಾನಿಸಿದಂತಾಗಿದೆ. ಇದೀಗ ಈ ಗೆಲುವಿನ ಕುರಿತು ಮೊದಲ ಬಾರಿಗೆ ಪ್ರಧಾನಿ ಮೋದಿ(P M Modi) ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ.

ಹೌದು, ದೇಶದ ಮೂರು ಪ್ರಮುಖ ರಾಜ್ಯಗಳಾದ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢದಲ್ಲಿ ಬಿಜೆಪಿ ಪಕ್ಷದ ದೊಡ್ಡ ಗೆಲುವಿನ ಬಳಿಕ ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದು, ಜನತಾ ಜನಾರ್ಧನನಿಗೆ ನನ್ನ ನಮನ ಎಂದು ಹೇಳಿದ್ದಾರೆ. ಜೊತೆಗೆ ತೆಲಂಗಾಣದಲ್ಲಿ ಕಳೆದ ಕೆಲ ವರ್ಷಗಳಿಂದ ಬಿಜೆಪಿ ಸತತವಾಗಿ ಬಲವೃದ್ಧಿಸಿಕೊಳ್ಳಲು ಕಾರಣವಾದ ಕಾರ್ಯಕರ್ತರ ಶ್ರಮವನ್ನೂ ಮೋದಿ ಕೊಂಡಾಡಿದ್ದಾರೆ.

ಏನಿದೆ ಮೋದಿ ಟ್ವೀಟ್ ಅಲ್ಲಿ!!
ಜನತಾ ಜನಾರ್ಧನನಿಗೆ ನನ್ನ ನಮನ.. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದ ಚುನಾವಣಾ ಫಲಿತಾಂಶಗಳು ಭಾರತದ ಜನರು ಉತ್ತಮ ಆಡಳಿತ ಮತ್ತು ಅಭಿವೃದ್ಧಿಯ ರಾಜಕೀಯದಲ್ಲಿ ಮಾತ್ರ ನಂಬಿಕೆ ಹೊಂದಿದ್ದಾರೆಂದು ತೋರಿಸುತ್ತಿದೆ, ಅವರ ನಂಬಿಕೆ ಬಿಜೆಪಿ ಪಕ್ಷದ ಮೇಲೆ ಮಾತ್ರವೇ ಇದೆ. ಬಿಜೆಪಿಯ ಮೇಲೆ ತಮ್ಮ ಪ್ರೀತಿ, ವಿಶ್ವಾಸ ಮತ್ತು ಆಶೀರ್ವಾದವನ್ನು ಧಾರೆಯೆರೆದಿದ್ದಕ್ಕಾಗಿ ಈ ಎಲ್ಲಾ ರಾಜ್ಯಗಳ ಕುಟುಂಬ ಸದಸ್ಯರಿಗೆ, ವಿಶೇಷವಾಗಿ ತಾಯಿ, ಸಹೋದರಿಯರು, ಹೆಣ್ಣುಮಕ್ಕಳು ಮತ್ತು ನಮ್ಮ ಯುವ ಮತದಾರರಿಗೆ ನಾನು ಹೃತ್ಪೂರ್ವಕವಾಗಿ ಧನ್ಯವಾದ ಹೇಳುತ್ತೇನೆ. ಅಭಿವೃದ್ಧಿ ಹೊಂದಿದ ದೇಶದ ಗುರಿಯನ್ನು ಹೊತ್ತು ನಾವು ಮುಂದಡಿ ಇಡುತ್ತಿದ್ದೇವೆ. ಈ ಹಾದಿಯಲ್ಲಿ ನಾವು ವಿರಮಿಸುವುದಿಲ್ಲ. ಭಾರತವನ್ನು ವಿಜಯಶಾಲಿಯನ್ನಾಗಿ ಮಾಡಬೇಕು. ಈ ನಿಟ್ಟಿನಲ್ಲಿ ನಾವು ಇಂದು ಪ್ರಬಲ ಹೆಜ್ಜೆ ಇಟ್ಟಿದ್ದೇವೆ,’ ಎಂದು ನರೇಂದ್ರ ಮೋದಿ ತಮ್ಮ ಟ್ವೀಟ್​ನಲ್ಲಿ ತಿಳಿಸಿದ್ದಾರೆ.
ಎಂದು ಮೋದಿ ಬರೆದುಕೊಂಡಿದ್ದಾರೆ.

ಅಲ್ಲದೆ ತೆಲಂಗಾಣದ ಕುರಿತು ‘ತೆಲಂಗಾಣದೊಂದಿಗಿನ ನಮ್ಮ ಬಾಂದವ್ಯ ನಿಜಕ್ಕೂ ಅಬಾಧಿತವಾಗಿದೆ. ಜನರಿಗಾಗಿ ಕೆಲಸ ಮಾಡುವುದನ್ನು ನಾವು ಮುಂದುವರಿಸುತ್ತೇವೆ. ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತನ ಶ್ರಮವನ್ನೂ ನಾವು ಮೆಚ್ಚಿದ್ದೇವೆ,’ ಎಂದು ನರೇಂದ್ರ ಮೋದಿ ಪ್ರತ್ಯೇಕ ಟ್ವೀಟ್​ನಲ್ಲಿ ತಿಳಿಸಿದ್ದಾರೆ.

https://x.com/narendramodi/status/1731268188951003196?t=htKfqKdQl3nceH_nuXCZgw&s=08

ಇದನ್ನು ಓದಿ: Viral vedeio: ಕೃಷ್ಣನ ಭಜನೆ ಹಾಡಿಗೆ ನೃತ್ಯ ಮಾಡಿದ ಹಸು – ತಾಳಕ್ಕೆ ತಕ್ಕ ಹೆಜ್ಜೆ ಕಂಡು ಪುಳಕಿತರಾದ ಜನ !!

Leave A Reply

Your email address will not be published.