M C Sudhakar: ಅತಿಥಿ ಉಪನ್ಯಾಸಕರ ಖಾಯಂ ಮಾಡುವ ವಿಚಾರ – ಭರ್ಜರಿ ಗುಡ್ ನ್ಯೂಸ್ ಕೊಟ್ಟ ಉನ್ನತ ಶಿಕ್ಷಣ ಸಚಿವ !!

Share the Article

M C Sudhakar: ರಾಜ್ಯದಲ್ಲಿನ ಅತಿಥಿ ಉಪನ್ಯಾಸಕರನ್ನು ಖಾಯಂ ಮಾಡುವುದನ್ನು ಸೇರಿದಂತೆ ವಿವಿಧ ಬೇಡಿಕೆಗಳನ್ನು ರಾಜ್ಯ ಸರ್ಕಾರವು ಈಡೇರಿಸುವಂತೆ ಒತ್ತಾಯಿಸಿ ರಾಜ್ಯಾದ ಅತಿಥಿ ಉಪನ್ಯಾಸಕರು ಕೆಲವು ದಿನಗಳಿಂದ ಧರಣಿ ನಡೆಸುತ್ತಿದ್ದಾರೆ. ಇದೀಗ ಈ ವಿಚಾರವಾಗಿ ಉನ್ನತ ಶಿಕ್ಷಣ ಸಚಿವರಾದ ಡಾ. ಎಂ ಸಿ ಸುಧಾಕರ್(M C Sudhakar) ಅವರು ಭರ್ಜರಿ ಗುಡ್ ನ್ಯೂಸ್ ಒಂದನ್ನು ನೀಡಿದ್ದಾರೆ.

ಹೌದು, ಅತಿಥಿ ಉಪನ್ಯಾಸಕರ ಬೇಡಿಕೆಗಳ ಬಗ್ಗೆ ಮಾತನಾಡಿದ ಸಚಿವರು ಅತಿಥಿ ಉಪನ್ಯಾಸಕರ ಬೇಡಿಕೆಗೆ ಸ್ಪಂದಿಸಲು ರಾಜ್ಯ ಸರಕಾರ ಬದ್ಧವಾಗಿದೆ. ಈ ಸಂಬಂಧ ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಒಂದು ಸುತ್ತಿನ ಮಾತುಕತೆಯೂ ನಡೆದಿದೆ. 2013-18ರ ಅವಧಿಯಲ್ಲಿ ನೀಡಲಾಗಿದ್ದ ಎಲ್ಲ ಭರವಸೆಗಳನ್ನು ಕಾಂಗ್ರೆಸ್ ಸರಕಾರ ಈಡೇರಿಸಿತ್ತು. ಹಾಗೆ ಈ ಅವಧಿಯಲ್ಲೂ ಪ್ರಣಾಳಿಕೆಯಲ್ಲಿ ಹೇಳಿರುವಂತೆ ನಾವು ನಡೆದುಕೊಳ್ಳಲು ಬದ್ಧರಾಗಿದ್ದೇವೆ ಎಂದರು.

ಇದನ್ನು ಓದಿ: Silk Smitha Biopic: ಸಿಲ್ಕ್ ಸ್ಮಿತಾ ಮತ್ತೊಂದು ಬಯೋಪಿಕ್ ಅನೌನ್ಸ್ – ಇವರೇ ನೋಡಿ ಸ್ಮಿತಾಳಂತೆ ನಟಿಸುವ, ಸೊಂಟ ಬಳುಕಿಸುವ ನಟಿ !!

ಅಲ್ಲದೆ ಅವರ ವೃತ್ತಿಯನ್ನು ಖಾಯಂ ಗೊಳಿಸುವಲ್ಲಿ ಶ್ರಮಿಸುವುದರಿಂದ ಹಿಡಿದು ಅವರ ಪ್ರತಿಯೊಂದು ಬೇಡಿಕೆಯನ್ನು ನಾವು ಈಡೇರಿಸುತ್ತೇವೆ. ಸರ್ಕಾರ ಅವರ ಕುರಿತು ಸಹಾನುಭೂತಿ ಹೊಂದಿದೆ. ನಿಮ್ಮ ಕಾರ್ಯದೊತ್ತಡ ನನಗೆ ತಿಳಿದಿದೆ. ತಮ್ಮನ್ನು ಯಾವುದೆ ಕಾರಣಕ್ಕೂ ನಿರ್ಲಕ್ಷಿಸುವುದಿಲ್ಲ. ಹೀಗಾಗಿ ದಯವಿಟ್ಟು ಎಲ್ಲಾ ಉಪನ್ಯಾಸಕರು ಧರಣಿ ಕೈ ಬಿಟ್ಟು ತರಗತಿಗೆ ಹೋಗಿ ಪಾಠ ಹೇಳಿಕೊಡಬೇಕು ಎಂದು ಮನವಿ ಮಾಡಿದರು.

ಇದನ್ನು ಓದಿ: Pensioners: ಪಿಂಚಣಿದಾರರೇ, ಬ್ಯಾಂಕ್ ಖಾತೆಗೆ ಮಿಸ್ ಮಾಡ್ದೆ ಇದನ್ನು ಲಿಂಕ್ ಮಾಡಿ !! ಇಲ್ಲಾಂದ್ರೆ ಸರ್ಕಾರ ಪಾವತಿಸುವ ವೇತನ ಕಟ್

 

Leave A Reply