Liquor Sale: ಖಾಲಿಯಾದ ಸರ್ಕಾರದ ಖಜಾನೆ -ಮದ್ಯ ಮಾರಾಟ ಮಾಡಲು ಬಂತು ಹೊಸ ರೂಲ್ಸ್, ಇನ್ನು ಟಾರ್ಗೆಟ್ ಫಿಕ್ಸ್!!

Karnataka Government Fixed Target For liquor sale To Fill The Treasury latest news

Liquor Sale: ಕಾಂಗ್ರೆಸ್ ಸರ್ಕಾರ ಗ್ಯಾರಂಟೀ ಯೋಜನೆಗಳನ್ನು ಘೋಷಣೆ ಮಾಡಿದ ಬೆನ್ನಲ್ಲೇ ಈ ಯೋಜನೆಗಳಿಗೆ ಹಣ ಹೊಂದಿಸಲು ಹೊಸ ಮಾಸ್ಟರ್ ಪ್ಲಾನ್ ಮಾಡಿದೆ. ಮದ್ಯದ ಅಂಗಡಿಗಳಿಗೆ (Liquor Shops) ಟಾರ್ಗೆಟ್ ಫಿಕ್ಸ್ ಮಾಡಿದ್ದು, ಈ ಕುರಿತು ಅಬಕಾರಿ ಇಲಾಖೆಯ (Excise Department) ಉಪ ಆಯುಕ್ತರ ಮೂಲಕ ರಾಜ್ಯದ ಎಲ್ಲಾ ವಲಯಗಳ ನಿರೀಕ್ಷಕರಿಗೆ ಸೂಚನೆ ನೀಡಲಾಗಿದೆ.

ರಾಜ್ಯದಲ್ಲಿ ಮದ್ಯದ (Liquor)ಮೇಲೆ ಸುಂಕ ಹೆಚ್ಚಳದಿಂದ ಕಂಗಾಲಾಗಿರುವ ಮದ್ಯದಂಗಡಿಗಳ ಮಾಲೀಕರು, ಅಬಕಾರಿ ಇಲಾಖೆಯ ಈ ನಡೆಯಿಂದ ಕಂಗಾಲಾಗಿದ್ದಾರೆ. ಅಬಕಾರಿ ಇಲಾಖೆಯು ಕಡ್ಡಾಯವಾಗಿ ಇಂತಿಷ್ಟೇ ಬಾಕ್ಸ್ ಮದ್ಯ ಮಾರಾಟ ಮಾಡಬೇಕು. ರಾಜ್ಯದಲ್ಲಿ ಅಂಗಡಿಗಳ ಮೂರು ವರ್ಷಗಳ ಮಾರಾಟದ ಸರಾಸರಿ ತೆಗೆದು ಟಾರ್ಗೆಟ್ ನಿಗದಿ ಮಾಡಿದೆ ಎನ್ನಲಾಗಿದೆ. ರಾಜ್ಯದ ಎಲ್ಲಾ ವಲಯಗಳ ವಲಯ ನಿರೀಕ್ಷಕರಿಗೆ ಅಬಕಾರಿ ಇಲಾಖೆ ಉಪ‌ ಆಯುಕ್ತರ ಮೂಲಕ ಸೂಚನೆ ನೀಡಲಾಗುತ್ತಿದೆ.

ಅಕ್ಟೋಬರ್ ತಿಂಗಳಲ್ಲಿ ಬೆಳಗಾವಿ ಉತ್ತರ ಜಿಲ್ಲೆ ಚಿಕ್ಕೋಡಿ ವಿಭಾಗದ ಉಪ ಆಯುಕ್ತರು ಹೊರಡಿಸಿದ ಜ್ಞಾಪನಾ ಪತ್ರ ಟಿವಿ9ಗೆ ದೊರೆತಿದೆ ಎನ್ನಲಾಗಿದೆ.ಬೆಳಗಾವಿ ಉತ್ತರ ಜಿಲ್ಲೆ ಚಿಕ್ಕೋಡಿ ವಲಯದ ಐದು ತಾಲೂಕುಗಳಿಗೆ ಟಾರ್ಗೆಟ್ ನಿಗದಿ ಮಾಡಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಅಬಕಾರಿ ಇಲಾಖೆಯು ಅಕ್ಟೋಬರ್ ತಿಂಗಳಲ್ಲಿ 1 ಲಕ್ಷ 80 ಸಾವಿರ 876 ಬಾಕ್ಸ್ ಮದ್ಯ ಮಾರಾಟ ಮಾಡಲು ಟಾರ್ಗೆಟ್ ನೀಡಿದೆ ಎಂದು ತಿಳಿದುಬಂದಿದೆ. ಅಥಣಿ – 37,486, ಚಿಕ್ಕೋಡಿ – 37,594, ಗೋಕಾಕ್ – 50,795, ಹುಕ್ಕೇರಿ 28,000, ರಾಯಬಾಗ ತಾಲೂಕಿಗೆ 27,000 ಮದ್ಯದ ಬಾಕ್ಸ್ ಮಾರಾಟಕ್ಕೆ( Liquor Sale)ಟಾರ್ಗೆಟ್ ನಿಗದಿ ಮಾಡಿದೆ ಎನ್ನಲಾಗಿದ್ದು, ಈ ಕುರಿತು ಟಿವಿ 9 ಮಾಧ್ಯಮ ವರದಿ ಮಾಡಿದೆ.

ಇದನ್ನೂ ಓದಿ: Second Puc Exam Fee: 2nd ಪಿಯುಸಿ ವಿದ್ಯಾರ್ಥಿಗಳೇ ಗಮನಿಸಿ- ಎಕ್ಸಾಮ್ ಫೀಸ್ ಕಟ್ಟೋ ದಿನಾಂಕ ವಿಸ್ತರಣೆ !!

Leave A Reply

Your email address will not be published.