December Bank Holiday 2023: ಅಬ್ಬಬ್ಬಾ.. ಡಿಸೆಂಬರ್ ನಲ್ಲಿ ಬರೋಬ್ಬರಿ 18 ದಿನ ಬ್ಯಾಂಕ್ ರಜೆ !! ಇಲ್ಲಿದೆ ರಜೆ ಪಟ್ಟಿ

December Bank Holiday 2023: ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್ಗಳು(Private Banks )ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರಗಳನ್ನು ಹೊರತುಪಡಿಸಿ ಭಾನುವಾರದಂದು ಕಾರ್ಯನಿರ್ವಹಿಸುವುದಿಲ್ಲ. ಅದರ ಅನ್ವಯ, ಹೊಸ ತಿಂಗಳು ಪ್ರಾರಂಭವಾಗುವ ಮುನ್ನ ಬ್ಯಾಂಕ್ ಗಳ ರಜಾ ಪಟ್ಟಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ಬಿಡುಗಡೆ ಮಾಡಲಿದ್ದು, ಇದೀಗ ಮುಂದಿನ ತಿಂಗಳು ಡಿಸೆಂಬರ್ ತಿಂಗಳ ರಜಾ ದಿನಗಳ (Bank Holidays in December 2023)ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಬಾರಿ ಡಿಸೆಂಬರ್ನಲ್ಲಿ 18 ದಿನಗಳ ಕಾಲ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

 

ಡಿಸೆಂಬರ್ 2023 ರ ಬ್ಯಾಂಕ್ ರಜಾದಿನಗಳ ಪಟ್ಟಿ ಕೆಳಗಿನಂತಿದೆ:
* ಡಿಸೆಂಬರ್ 1, 2023 (ಶುಕ್ರವಾರ) ಈ ದಿನ, ರಾಜ್ಯ ಉದ್ಘಾಟನಾ ದಿನ / ಸ್ವದೇಶಿ ನಂಬಿಕೆ ದಿನದ ಹಿನ್ನೆಲೆ ಇಟಾನಗ‌ರ್ ಮತ್ತು ಕೊಹಿಮಾದಲ್ಲಿ ಬ್ಯಾಂಕ್ ರಜೆ
* ಡಿಸೆಂಬರ್ 3, 2023 (ಭಾನುವಾರ) .
* ಡಿಸೆಂಬರ್ 4, 2023 (ಸೋಮವಾರ) ಸೇಂಟ್ ಫ್ರಾನ್ಸಿಸ್ ಕ್ಷೇವಿಯರ್ ಹಬ್ಬದ ಕಾರಣ ಪಣಜಿಯಲ್ಲಿ ಬ್ಯಾಂಕ್ ರಜೆ
* ಡಿಸೆಂಬರ್ 9, 2023 (ಶನಿವಾರ) – ಎರಡನೇ ಶನಿವಾರ ರಜೆ.
* ಡಿಸೆಂಬರ್ 10, 2023 (ಭಾನುವಾರ)
* ಡಿಸೆಂಬರ್ 12, 2023 ರಂದು (ಮಂಗಳವಾರ), ಪಾ-ಟೋಗನ್ ನೆಂಡ್ಮಿಂಜಾ ಸಂಗ್ರಾ ಕಾರಣದಿಂದಾಗಿ ಶಿಲ್ಲಾಂಗ್ನಲ್ಲಿ ಬ್ಯಾಂಕ್ ರಜೆ.
* ಡಿಸೆಂಬರ್ 13, 2023 (ಬುಧವಾರ) ಲಾಸಂಗ್ / ನಾಮ್ರಂಗ್ ಕಾರಣದಿಂದಾಗಿ ಗ್ಯಾಂಗ್ಟಾಕ್ನಲ್ಲಿ ಬ್ಯಾಂಕ್ ರಜೆ.
* ಡಿಸೆಂಬರ್ 14, 2023 (ಗುರುವಾರ)- ಲಾಸಂಗ್ / ನಾಮ್ರಂಗ್ ಕಾರಣದಿಂದಾಗಿ ಗ್ಯಾಂಗ್ಟಾಕ್ನಲ್ಲಿ ಬ್ಯಾಂಕ್ ರಜೆ.
* ಡಿಸೆಂಬರ್ 17, 2023 (ಭಾನುವಾರ)
* ಡಿಸೆಂಬರ್ 18, 2023 (ಸೋಮವಾರ) ಯು ಸೋಸೊ ಥಾಮ್ ಅವರ ಪುಣ್ಯತಿಥಿಯ ಕಾರಣ ಶಿಲ್ಲಾಂಗ್ನಲ್ಲಿ ಬ್ಯಾಂಕ್ ರಜೆ.
* ಡಿಸೆಂಬರ್ 19, 2023 (ಮಂಗಳವಾರ) ಗೋವಾ ವಿಮೋಚನಾ ದಿನದ ಹಿನ್ನೆಲೆ ಪಣಜಿಯಲ್ಲಿ ಬ್ಯಾಂಕ್ ರಜೆ.
* ಡಿಸೆಂಬರ್ 23, 2023 (ಶನಿವಾರ) – ನಾಲ್ಕನೇ ಶನಿವಾರ.
* ಡಿಸೆಂಬರ್ 24, 2023 (ಭಾನುವಾರ) ರಜೆ.
* ಡಿಸೆಂಬರ್ 25, 2023 (ಸೋಮವಾರ)ಕ್ರಿಸ್ಮಸ್ ಹಿನ್ನೆಲೆ ಬ್ಯಾಂಕ್ ರಜೆ.
* ಡಿಸೆಂಬರ್ 26, 2023 (ಮಂಗಳವಾರ) – ಕ್ರಿಸ್ಮಸ್ ಹಬ್ಬದ ಹಿನ್ನೆಲೆ ಐಜ್ವಾಲ್‌, ಕೊಹಿಮಾ ಮತ್ತು ಶಿಲ್ಲಾಂಗ್ನಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
* ಡಿಸೆಂಬರ್ 27, 2023 (ಬುಧವಾರ) – ಕೊಹಿಮಾದಲ್ಲಿ ಕ್ರಿಸ್ಮಸ್ ಹಬ್ಬದ ಹಿನ್ನೆಲೆ ಬ್ಯಾಂಕುಗಳು ರಜೆ.
* ಡಿಸೆಂಬರ್ 30, 2023 (ಶನಿವಾರ) ನಂಗ್ಟಾದಿಂದಾಗಿ ಬ್ಯಾಂಕ್ ರಜೆ.
* ಡಿಸೆಂಬರ್ 31, 2023 (ಭಾನುವಾರ)

ಇದನ್ನು ಓದಿ: Free Bus Travel: ಸರಕಾರದಿಂದ ಮಹಿಳೆಯರಿಗೆ ಮತ್ತೊಂದು ದೊಡ್ಡ ಕೊಡುಗೆ; ಈ ರೋಡ್‌ವೇಸ್‌ ಬಸ್‌ನಲ್ಲಿ ಫ್ರೀ ಪ್ರಯಾಣ!!!

Leave A Reply

Your email address will not be published.