School Students: ಶಾಲಾ ಮಕ್ಕಳಿಗೆ ಬೊಂಬಾಟ್ ನ್ಯೂಸ್ – ಮಧ್ಯಾಹ್ನ ಊಟವಾದ ಕೂಡ್ಲೇ ನೀವಿನ್ನು ಮಲಗಬಹುದು !!

School Students: ಮಕ್ಕಳ ಗಮನವನ್ನು ಕೇಂದ್ರೀಕರಿಸಲು ಶಾಲೆಗಳು ಹೊಸ ನಿಯಮ ಒಂದನ್ನು ಜಾರಿಗೆ ತಂದಿದೆ. ಹೌದು, ಮಧ್ಯಾಹ್ನ ಊಟವಾದ್ಮೇಲೆ ಬೇಡ ಅಂದ್ರೂ ಮಕ್ಕಳಿಗೆ ಕಣ್ಣು ಕೂರುತ್ತೆ. ಮಧ್ಯಾಹ್ನ ಮಕ್ಕಳು, ಶಿಕ್ಷಕರ ಮುಂದೆ ನಿದ್ರೆ ಹೋಗಿ ಬೈಸಿಕೊಳ್ತಾರೆ. ಅದಕ್ಕಾಗಿ ಮಕ್ಕಳಿಗೆ (School Students) ಊಟದ ನಂತರ ನಿದ್ದೆ ಮಾಡಲು ಶಾಲೆಗಳು ಅವಕಾಶ ನೀಡಿವೆ.

 

ವಾಸ್ತವವಾಗಿ ಮಧ್ಯಾಹ್ನ ಒಂದೈದು ನಿಮಿಷ ನಿದ್ರೆ ಮಾಡೋದು ಬಹಳ ಒಳ್ಳೆಯದು ಎನ್ನುತ್ತಾರೆ ತಜ್ಞರು. ಅದ್ರಲ್ಲೂ ಮಕ್ಕಳಿಗೆ ಈ ಪವರ್ (Power) ನಿದ್ರೆ ಬಹಳ ಒಳ್ಳೆಯದು. ಮಕ್ಕಳನ್ನು ಈ ನಿದ್ರೆ ಮತ್ತೆ ಉತ್ಸಾಹಗೊಳಿಸುತ್ತದೆ. ರಾತ್ರಿವರೆಗೆ ಮೆದುಳು ಚುರುಕಾಗಿರಲು ನೆರವಾಗುತ್ತದೆ. ಇದು ಚೀನಾದ ಕೆಲ ಶಾಲೆಗಳು ಮನಗಂಡು, ಮಕ್ಕಳಿಗೆ ಊಟದ ನಂತ್ರ ನಿದ್ರೆ ಮಾಡಲು ಶಾಲೆಗಳು ಅವಕಾಶ ನೀಡಿವೆ. ಅಂತೆಯೇ ಸಾಮಾಜಿಕ ಜಾಲತಾಣದಲ್ಲಿ ಶಾಲಾ ಕೊಠಡಿಯ ವಿಡಿಯೋ ವೈರಲ್ ಆಗಿದ್ದು, ಬಳಕೆದಾರರು ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಸಾಮಾಜಿಕ ಜಾಲತಾಣ ಎಕ್ಸ್ ನ @ViralXfun ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಕೆಲ ಚೀನಾ ಶಾಲೆಯಲ್ಲಿ ಡಸ್ಕ್ ಕೆಲ ಸಮಯಕ್ಕೆ ಹಾಸಿಗೆಯಾಗಿ ಪರಿವರ್ತನೆಯಾಗಿದೆ. ಮಕ್ಕಳ ಮಾನಸಿಕ ಆರೋಗ್ಯ ಸುಧಾರಣೆಗೆ ಊಟದ ನಂತರ ನಿದ್ರೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಶೀರ್ಷಿಕೆ ಹಾಕಲಾಗಿದೆ.

ವೈರಲ್ ವಿಡಿಯೋದಲ್ಲಿ ಶಾಲಾ ಮಕ್ಕಳು ನಿದ್ರೆ ಮಾಡ್ತಿರೋದನ್ನು ನೀವು ನೋಡಬಹುದು. ಊಟದ ನಂತ್ರ ಪವರ್ ನಿದ್ರೆ ಮಾಡಲು ಮಕ್ಕಳಿಗೆ ಬೆಡ್ ಶೀಟ್ ಮತ್ತು ದಿಂಬನ್ನು ನೀಡಲಾಗಿದೆ. ಮಕ್ಕಳು ಆರಾಮವಾಗಿ ಮಲಗಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಇದಲ್ಲದೆ ಅಲ್ಲಿ ಒಬ್ಬ ಶಿಕ್ಷಕಿಯೂ ಇದ್ದಾರೆ. ಅವರು ಮಕ್ಕಳನ್ನು ಗಮನಿಸುತ್ತಿದ್ದಾರೆ.

ಬಳಕೆದಾರರು ವೀಡಿಯೊಗೆ ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ನಮ್ಮ ಕಾಲದಲ್ಲೂ ಈ ವ್ಯವಸ್ಥೆ ಇದ್ದಿದ್ದರೆ ಎಷ್ಟು ಚೆನ್ನಾಗಿರ್ತಿತ್ತು ಎಂದು ಒಬ್ಬರು ಬರೆದ್ರೆ ಮತ್ತೊಬ್ಬರು ಕಚೇರಿಯಲ್ಲೂ ಈ ವ್ಯವಸ್ಥೆ ಇರ್ಬೇಕಿತ್ತು ಎಂದು ಕಮೆಂಟ್ ಮಾಡಿದ್ದಾರೆ. ಅನೇಕರು ಇದು ಒಳ್ಳೆಯ ಐಡಿಯಾ ಎಂದು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

 

https://x.com/gerceklerfark/status/1727782957291622525?s=20

ಇದನ್ನು ಓದಿ: Kannada Serial Controversy: ಕನ್ನಡದ ಖ್ಯಾತ ಸೀರಿಯಲ್‌ ನಟ – ನಟಿಯ ಮಧ್ಯೆ ಅಫೇರ್? ಸೆಟ್ಟಲ್ಲಿ ನಡೆದೇ ಹೋಯ್ತು ಅವಾಂತರ !! ಹೆಂಡತಿಯಿಂದ ಬಿತ್ತು ಚಪ್ಲಿ ಏಟು

Leave A Reply

Your email address will not be published.