Son Killed Mother:ಕೈ ತುತ್ತು ಕೊಟ್ಟ ತಾಯಿ, ಅಲ್ಲೆ ಕೊಚ್ಚಿ ಬಿಸಾಕಿದ ಮಗ !! ಯಪ್ಪಾ ನಡುಕ ಹುಟ್ಟಿಸುತ್ತೆ ಕಾರಣ

Son Killed Mother: ದಿನಂಪ್ರತಿ ಅದೆಷ್ಟೋ ಕ್ರಿಮಿನಲ್ ಪ್ರಕರಣಗಳು(Crime News)ವರದಿಯಾಗುತ್ತಲೇ ಇರುತ್ತವೆ. ಇದೀಗ, ಮಹಾರಾಷ್ಟ್ರದಲ್ಲಿ ಮಗನೊಬ್ಬ ಹೆತ್ತ ತಾಯಿಯನ್ನೇ ಕೊಂದಿರುವ(Murder)ಆಘಾತಕಾರಿ ಘಟನೆ ವರದಿಯಾಗಿದೆ. ಅಷ್ಟಕ್ಕೂ ಆತ ತಾಯಿಯನ್ನು ಹತ್ಯೆ (Son Killed Mother)ಮಾಡಿದ ಕಾರಣ ಕೇಳಿದರೆ ಅಚ್ಚರಿ ಆಗುವುದು ಖಚಿತ.

 

‘ಅಮ್ಮ’ ಎಂಬ ಪದಕ್ಕೆ ಹೆಣ್ಣಿನ ಬದುಕನ್ನೇ ಸಾರ್ಥಕಗೊಳಿಸುವ ಮಾತೃ ಶಕ್ತಿ ಅಡಕವಾಗಿರುತ್ತದೆ. ಅಂತಹ ತಾಯಿಯ ಪ್ರೀತಿಗೆ ಅದೆಷ್ಟೋ ಮಂದಿ ಹಾತೊರೆಯುತ್ತಿರುತ್ತಾರೆ. ಅಮ್ಮನ (Mother) ಪ್ರೀತಿ, ಅಮ್ಮನ ಕೈತುತ್ತು ಪಡೆದವರೆ ಅದೃಷ್ಟವಂತರು.ಆದರೆ, ಮಹಾರಾಷ್ಟ್ರದಲ್ಲಿ (Maharashtra) ತಾಯಿ ಮಾಡಿದ ಅಡುಗೆ ರುಚಿಯಾಗಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕಾಗಿ ಮಗನೇ ತಾಯಿಯನ್ನು ಕೊಂದಿರುವ ಘಟನೆ ವರದಿಯಾಗಿದೆ.

ಮಹಾರಾಷ್ಟ್ರದ ಥಾಣೆ ಜಿಲ್ಲೆಯ ವೇಲು ಗ್ರಾಮದಲ್ಲಿ ನವೆಂಬರ್‌ 26(ಭಾನುವಾರ)ಸಂಜೆ ಕೊಲೆ ನಡೆದಿದೆ ಎನ್ನಲಾಗಿದೆ. ಅಡುಗೆ ರುಚಿಯಾಗಿ ಮಾಡಿಲ್ಲ ಎಂದು 55 ವರ್ಷದ ತಾಯಿಯನ್ನು ಮಗ ಕೊಂದಿದ್ದಾನೆ ಎನ್ನಲಾಗಿದೆ. ಮನೆಯಲ್ಲಿ ಅಡುಗೆ ವಿಚಾರಕ್ಕೆ ಆಗಾಗ ತಾಯಿ ಮಗನ ಮಧ್ಯೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಇದೇ ರೀತಿ, ಭಾನುವಾರ ರಾತ್ರಿ ಮನೆಗೆ ಬಂದ ಮಗನಿಗೆ ತಾಯಿ ಊಟ ಬಡಿಸಿದ್ದು, ಊಟ ರುಚಿಯಾಗಿಲ್ಲ ಎಂದು ಆತ ತಾಯಿ ಜತೆ ಜಗಳವಾಡಿದ್ದಾನೆ. ಇದರ ಜೊತೆಗೆ, ಆತನೇ ತಾಯಿಯ ಕತ್ತಿಗೆ ಕುಡುಗೋಲಿನಿಂದ ಹಲ್ಲೆ ಮಾಡಿದ್ದು, ಇದಾದ ಬಳಿಕ ಮಹಿಳೆ ಸಾವಿನ ಕದ ತಟ್ಟಿದ್ದಾರೆ ಎನ್ನಲಾಗಿದೆ.

ತಾಯಿ ಮೇಲೆ ಮಗ ಹಲ್ಲೆ ನಡೆಸುತ್ತಿರುವ ಕುರಿತು ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡುವಷ್ಟರಲ್ಲಿ ಮಹಿಳೆ ಅಸುನೀಗಿದ್ದಾರೆ. ಪೊಲೀಸರು ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ತಾಯಿಯನ್ನು ಹತ್ಯೆಗೈದ ವ್ಯಕ್ತಿಯು ನಿದ್ರೆ ಮಾತ್ರೆಗಳನ್ನು ನುಂಗಿ ಅಸ್ವಸ್ಥನಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ವ್ಯಕ್ತಿ ಗುಣಮುಖನಾದ ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಲಿದ್ದಾರೆ ಎಂದು ತಿಳಿದುಬಂದಿದೆ.

 

ಇದನ್ನು ಓದಿ: ಕೂದಲನ್ನು ಕಪ್ಪಾಗಿಸಲು ಈ ಮೂರೇ ಮೂರು ವಸ್ತು ಸಾಕು- ಜೀವಮಾನದಲ್ಲಿ ಬಿಳಿ ಕೂದಲೇ ಬರೋದಿಲ್ಲ!!

Leave A Reply

Your email address will not be published.