Auto Meter Price: ಆಟೋ ಪ್ರಯಾಣಿಕರೇ ಎದುರಾಯ್ತು ಸಂಕಷ್ಟ – ಇನ್ಮುಂದೆ ವರ್ಷಂಪ್ರತಿ ಇಷ್ಟಿಷ್ಟು ಏರುತ್ತೆ ಮೀಟರ್ ದರ!!!
Karnataka news Bengaluru auto passengers demanding to increase autometer price once in a year latest news
Auto Meter Price: ಕಳೆದ ಹತ್ತು ವರ್ಷದಿಂದ ಆಟೋ ಮೀಟರ್ ದರವನ್ನ ಕೇವಲ ಎರಡು ಬಾರಿ ಏರಿಕೆ ಮಾಡಲಾಗಿದೆ. ಸದ್ಯ ಇದಕ್ಕೆಲ್ಲಾ ಮುಕ್ತಿ ಕೊಟ್ಟು ವರ್ಷಕ್ಕೊಮ್ಮೆ ಆಟೋಗಳ ಮೀಟರ್ ದರ ಏರಿಕೆ ಮಾಡಿ ಎಂದು ಬೆಂಗಳೂರು ಆಟೋ ಡ್ರೈವರ್ಸ್ ಯೂನಿಯನ್ ಬೇಡಿಕೆ ಎತ್ತಿದೆ.
ಹೌದು. ಆಟೋ ಮೀಟರ್ ದರ (Auto Meter Price) ಪರಿಷ್ಕರಣೆ ಮಾಡುವಂತೆ ಆಟೋ ಯೂನಿಯನ್‌ಗಳು ಪಟ್ಟು ಹಿಡಿದಿವೆ. ಪ್ರತಿ ವರ್ಷ ಮೀಟರ್ ದರ ಏರಿಕೆ ಮಾಡುವಂತೆ ಆಟೋ ಡ್ರೈವರ್ಸ್ ಯೂನಿಯನ್ ಸಾರಿಗೆ ಸಚಿವರಿಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಹೇಳಿರುವಂತೆ, ಬೆಂಗಳೂರಿನಲ್ಲಿ ಸುಮಾರು ಒಂದೂವರೆ ಲಕ್ಷಕ್ಕೂ ಅಧಿಕ ಆಟೋರಿಕ್ಷಾಗಳಿವೆ. ಆದರೂ ಜನರಿಗೆ ಆಟೋರಿಕ್ಷಾಗಳು ಸಿಗುವುದೇ ಕಷ್ಟವಾಗಿ ಹೋಗಿದೆ, ಜೊತೆಗೆ ಆಟೋ ಚಾಲಕರ ಅಸಮರ್ಪಕರ ಸಹಕಾರದಿಂದ ಜನರಿಗೆ ಸರಿಯಾಗಿ ಆಟೋ ಸಿಗ್ತಿಲ್ಲ, ಸರ್ಕಾರ ನಿಗದಿ ಪಡಿಸಿದ ಮೀಟರ್ ದರಕ್ಕೆ ಹಲವು ಚಾಲಕರು ಬಾಡಿಗೆ ಮಾಡ್ತಿಲ್ಲ.
ಜೊತೆಗ ಆಟೋ ಚಾಲಕರು ಅವರಿಷ್ಟಕ್ಕೆ ಬಂದಷ್ಟು ಹಣ ಕೇಳ್ತಿದ್ದಾರೆ, ಜೊತೆಗೆ ಕರೆದಲ್ಲಿಗೂ ಬರ್ತಿಲ್ಲ. ಇದಕ್ಕೆಲ್ಲ ಕಾರಣ ಬೆಲೆ ಏರಿಕೆ ಅನುಸರ ಆಟೋ ಮೀಟರ್ ದರ ಏರುತ್ತಿಲ್ಲ. ಕಳೆದ 10 ವರ್ಷದಿಂದ ಎರಡು ಬಾರಿ ಮಾತ್ರ ಆಟೋ ಮೀಟರ್ ದರ ಏರಿಕೆ ಮಾಡಲಾಗಿದೆ. ಅದರ ಬದಲು ದರ ಏರಿಕೆಗೆ ತಕ್ಕಂತೆ ಪ್ರತಿ ವರ್ಷ ಮೀಟರ್ ದರ ಪರಿಷ್ಕರಣೆ ಮಾಡುವಂತೆ ಆಟೋ ಯೂನಿಯನ್ ಬರೆದ ಪತ್ರದಲ್ಲಿ ಬೇಡಿಕೆ ಇಟ್ಟಿದ್ದಾರೆ.
ಇನ್ನೂ ಸೆಕ್ಷನ್ 67(ಐ) ಎಂವಿ ಆ್ಯಕ್ಟಿನ್ ಅಡಿ ಆಟೋ ದರ ಕಾಲಕಾಲಕ್ಕೆ ನಿಗದಿಪಡಿಸುವಂತೆ ಸೂಚಿಸಲಾಗಿದೆ. ಆದರೆ ಕಾಲಕಾಲಕ್ಕೆ ಎಂಬ ಪದ ನಿರ್ದಿಷ್ಟ ಸಮಯ ಅಂತ ಅನುಸಾರವಾಗಿ ಸೂಚಿಸಿಲ್ಲ. ಇದೇ ಕಾರಣಕ್ಕೆ ಅಧಿಕಾರಿಗಳು, ತಮ್ಮ ಮನಕ್ಕೆ ಬಂದಂತೆ ದರಗಳ ವಿಷಯದಲ್ಲಿ ಗಮನ ಹರಿಸ್ತಾರೆ ಅಂತ ಆಟೋ ಯುನಿಯನ್ ಗಳು ಆರೋಪ ಮಾಡ್ತೀವೆ.
ಇನ್ನು ಕೇಂದ್ರ ಸರ್ಕಾರದಿಂದ 2020ರಲ್ಲಿ ಮೋಟರ್ ಅಗ್ರಿಗೇಟರ್ ಗೈಡ್ಲೈನ್ಸ್ ಜಾರಿ ಮಾಡಿದ್ದು, ಅದರ ಅಡಿ ದರ ಹೋಲ್ ಸೆಲ್ ಪ್ರೈಸ್ ಇಂಡೆಕ್ಸ್ ಗೆ ಅನುಗುಣವಾಗಿ ನಿಗದಿಗೆ ಸೂಚಿಸಿದೆ. ಆದರೆ ಕಾಲಕಾಲಕ್ಕೆ ಬದಲು ಪ್ರತಿ ವರ್ಷ ಹೋಲ್ ಸೇಲ್ ಪ್ರೈಸ್ ಇಂಡೆಕ್ಸ್ ಅನುಗುಣ ತಿದ್ದುಪಡಿಗೆ ಆಟೋ ಯೂನಿಯನ್ ಆಗ್ರಹಿಸಿದೆ. ಒಟ್ಟಾರೆ ಆಟೋ ಮೀಟರ್ ದರ ಏರಿಕೆ ಪ್ರಸ್ತಾಪ ಸರ್ಕಾರದಕ್ಕೆ ತಲುಪಿದೆ. ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತೆ ಎಂದು ಕಾದುನೋಡಬೇಕಿದೆ.
ಇದನ್ನೂ ಓದಿ: ವಾಹನ ಸವಾರರೇ ಗಮನಿಸಿ- ನಿಮ್ಮ ವಾಹನಗಳಿಗೆ ಇದರ ಅಳವಡಿಕೆ ಕಡ್ಡಾಯ, ಸರ್ಕಾರದ ಮಹತ್ವದ ಆದೇಶ