Udupi Nejaru Case: ಹೆಣ್ಮಕ್ಕಳಿದ್ದ ಬಾಡಿಗೆ ಮನೆಗೆ ಭೇಟಿ ನೀಡಿದ ತಂದೆ; ಆರೋಪಿ ಚೌಗಲೆ ಸೆಂಟ್ರಲ್‌ ಜೈಲಿಗೆ ಸ್ಥಳಾಂತರಕ್ಕೆ ಚಿಂತನೆ?

Udupi Nejaru 4 members of same family murder Case Accused Praveen Chowgale moving to Central Jail

Udupi Nejaru Case: ನೇಜಾರು ಕೊಲೆ ಪ್ರಕರಣಕ್ಕೆ(Udupi Nejaru Case) ಕುರಿತಂತೆ ಆಯ್ನಾಝ್‌, ಆರೋಪಿಯ ಸ್ಕೂಟರ್‌ ಬಳಸುತ್ತಿದ್ದ ಕುರಿತು ಮಾಧ್ಯಮದಲ್ಲಿ ಸುದ್ದಿ ಪ್ರಕಟವಾಗಿದೆ. ಈ ಕುರಿತು ಮೃತ ಅಯ್ನಾಜ್‌ ತಂದೆ ನೂರ್‌ ಮುಹಮ್ಮದ್‌, ಸ್ಕೂಟರ್‌ ನ್ನು 28 ಸಾವಿರ ರೂ. ಹಣ ಕೊಟ್ಟು ಖರೀದಿ ಮಾಡಿರುವುದಾಗಿ ಹೇಳಿದ್ದಾರೆ.

ಆರೋಪಿ ಅಯ್ನಾಜ್‌ ಸೀನಿಯರ್‌ ಆಗಿರುವುದರಿಂದ ಅಪಾರ್ಟ್‌ಮೆಂಟ್‌ ಹುಡುಕಲು ಸಹಾಯ ಮಾಡಿದ್ದ. ಆತನಲ್ಲಿದ್ದ ಹಳೆಯ ಸ್ಕೂಟರನ್ನು ಹಣ ಕೊಟ್ಟು ಖರೀದಿಸಿದ್ದು, ನೋಂದಣಿ ಮಾಡಿಕೊಳ್ಳಲು ತಡವಾಗಿತ್ತು. ಈ ಸ್ಕೂಟರ್‌ ಹಾಗಾಗಿ ಆತನ ಹೆಸರಿನಲ್ಲೇ ಇತ್ತು.

ಮೃತರಾದ ಅಯ್ನಾಜ್‌ ಮತ್ತು ಅಫ್ನಾನ್‌ ಬಾಡಿಗೆ ಮನೆಗೆ ವಾಸವಿದ್ದ ನೂರ್‌ ಮುಹಮ್ಮದ್‌ ಅವರು ಅಲ್ಲಿಗೆ ಭೇಟಿ ನೀಡಿದಾಗ ಅಲ್ಲಿದ್ದ ವಸ್ತುಗಳನ್ನು ನೋಡಿ ಭಾವುಕರಾದರು.

ನ.12 ನೇಜಾರಿನಲ್ಲಿ ನಾಲ್ವರ ಹತ್ಯೆ ಹಾಡಹಗಲೇ ಭೀಕರವಾಗಿ ಕೊಲೆಗೈದಿರುವ ಘಟನೆಯೊಂದು ನಡೆದಿತ್ತು. ಆರೋಪಿ ಪ್ರವೀಣ್‌ ಚೌಗಲೆ ಯನ್ನು ಇದೀಗ ಭದ್ರತೆಯ ದೃಷ್ಟಿಯಿಂದ ಸೆಂಟ್ರಲ್‌ ಜೈಲಿಗೆ ಸ್ಥಳಾಂತರಿಸುವುದಕ್ಕೆ ಬಂಧಿಖಾನೆ ಇಲಾಖೆ ಮುಂದಾಗಿದೆ ಎಂದು ವರದಿಯಾಗಿದೆ. ಇದಕ್ಕೆ ಕೋರ್ಟ್‌ ಅನುಮತಿ ನೀಡಿದ್ದು, ಬಂಧಿಖಾನೆ ಇಲಾಖೆಯ ಡಿಜಿಪಿ ಅವರ ಅನುಮೋದನೆ ಸಿಗಲು ಬಾಕಿಯಿದೆ. ಇದೀಗ ಆರೋಪ ಪ್ರವೀನ್‌ ಚೌಗಲೆಗೆ ಹಿರಿಯಡ್ಕ ಸಬ್‌ಜೈಲಿನಲ್ಲಿದ್ದು ಇಬ್ಬರು ಪೊಲೀಸರು ಭದ್ರತೆಯಲ್ಲಿದ್ದರು.

ಇದನ್ನೂ ಓದಿ: PKL Season 10: ಪ್ರೊ ಕಬಡ್ಡಿ ಲೀಗ್ ಆರಂಭಕ್ಕೆ ಕ್ಷಣಗಣನೆ; 12 ತಂಡಗಳ ಬಲಿಷ್ಠ ನಾಯಕರ, ಮಾಲೀಕರ ಪಟ್ಟಿ ಇಲ್ಲಿದೆ !

Leave A Reply

Your email address will not be published.