PKL Season 10: ಪ್ರೊ ಕಬಡ್ಡಿ ಲೀಗ್ ಆರಂಭಕ್ಕೆ ಕ್ಷಣಗಣನೆ; 12 ತಂಡಗಳ ಬಲಿಷ್ಠ ನಾಯಕರ, ಮಾಲೀಕರ ಪಟ್ಟಿ ಇಲ್ಲಿದೆ !
Sports news PKL season 10 Pro Kabaddi League 2023 Teams And Squads List Here
Pro Kabaddi League 2023: ಪ್ರೊ ಕಬಡ್ಡಿ ಲೀಗ್ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈ ವರ್ಷ ಕ್ರೀಡಾ ಪ್ರೇಮಿಗಳಿಗೆ ಹಬ್ಬ. ಒಂದೇ ವರ್ಷದಲ್ಲಿ ಎರಡೆರಡು ಮಹಾ ಮನರಂಜನೆಗೆ ಭಾರತ ರೆಡಿಯಾಗುತ್ತಿದೆ. ಮುಂಬರುವ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಒಟ್ಟು 12 ತಂಡಗಳು ಇರಲಿದ್ದು, ಅವುಗಳ ಮಾಲೀಕರು, ನಾಯಕರು, ಕೋಚ್ ಗಳು ಯಾರು? ಎಂಬ ಬಗ್ಗೆ ಇಲ್ಲಿದೆ ಸಂಪೂರ್ಣ ಪಟ್ಟಿ.
ಪ್ರೊ ಕಬಡ್ಡಿ ಲೀಗ್ (Pro Kabaddi League 2023) ಆರಂಭಕ್ಕೆ ಕೆಲವೇ ದಿನಗಳು ಬಾಕಿಯಿದೆ. ಡಿಸೆಂಬರ್ 2ರಿಂದ ಫೆಬ್ರವರಿ 21ರವರೆಗೂ ಕಬಡ್ಡಿಯ ಮಹಾಮೇಳದ ಮೂಲಕ ಕ್ರೀಡಾ ಪ್ರೇಮಿಗಳಿಗೆ ರಸದೌತನ ಸಿಗಲಿದೆ. ಈ ಪ್ರೊ ಕಬಡ್ಡಿ ಪಂದ್ಯಗಳ 10 ನೇ ಆವೃತ್ತಿಯಲ್ಲಿ ಉದ್ಘಾಟನಾ ಪಂದ್ಯವು ಅಹಮದಾಬಾದ್ನ ಟ್ರಾನ್ಸ್ಸ್ಟೇಡಿಯಾ ಸ್ಟೇಡಿಯಂನ ಪ್ರಾರಂಭವಾಗಲಿದೆ.
ಅಹಮದಾಬಾದ್, ಬೆಂಗಳೂರು, ಪುಣೆ, ಚೆನ್ನೈ, ನೋಯ್ಡಾ, ಮುಂಬೈ, ಜೈಪುರ, ಹೈದರಾಬಾದ್, ಪಾಟ್ನಾ, ದೆಹಲಿ, ಕೋಲ್ಕತ್ತಾ ಮತ್ತು ಪಂಚಕುಲ – ಹೀಗೆ 12 ಸಿಟಿಗಳಲ್ಲಿ ಲೀಗ್ ಪಂದ್ಯಗಳು ನಡೆಯಲಿವೆ. ಆದರೆ ನಾಕ್ ಔಟ್ ಪಂದ್ಯಗಳ ಪಟ್ಟಿಯ ವೇಳಾಪಟ್ಟಿಯನ್ನು ಸದ್ಯಕ್ಕೆ ಪ್ರಕಟಿಸಲಾಗಿಲ್ಲ. ನಾಕೌಟ್ ಪಂದ್ಯಗಳ ವೇಳಾಪಟ್ಟಿಯನ್ನು ಟೂರ್ನಿಯ ಮಧ್ಯ ಭಾಗದಲ್ಲಿ ಪ್ರಕಟಿಸುವ ಸಾಧ್ಯತೆಯಿದೆ.
ಒಂದು ಟ್ರೋಫಿ, 12 ತಂಡಗಳು, 250 ಕ್ಕೂ ಮಿಕ್ಕಿದ ಕ್ರೀಡಾಳುಗಳು, 3 ತಿಂಗಳ ಅವಿರತ ಕಾದಾಟ ಪ್ರೊ ಕಬಡ್ಡಿ ಸೀಸನ್ 10 ವಿಶೇಷ. ಘಟಾನುಘಟಿ ಆಟಗಾರರು ಅಖಾಡದಲ್ಲಿ ತಮ್ಮ ಪವರ್ ತೋರಿಸಲು ಸಜ್ಜಾಗಿ ನಿಂತಿದ್ದಾರೆ. ಪ್ರತಿಬಾರಿಯಂತೆ ಈ ಬಾರಿ ಕೂಡ ಯುವ ಹೊಸ ಮುಖಗಳು ತಮ್ಮ ಪ್ರತಿಭೆಯನ್ನು ಜಗತ್ತಿಗೆ ತೋರಿಸಲಿವೆ. ಅದರಲ್ಲೂ ಕಳೆದೆರಡು ಪಂದ್ಯಗಳ ಮೂಲಕ ಮಿಂಚು ಹರಿಸಿದ ಬೆಂಗಳೂರು ಬುಲ್ಸ್ ತಂಡದ ನಾಯಕ ಪವನ್ ಕುಮಾರ್ ಶೆರಾವತ್ ಮೇಲಿದೆ ಜಗತ್ತಿನ ಕಣ್ಣು.
ಆಯಾ ತಂಡಗಳನ್ನು ಮುನ್ನಡೆಸುವ ನಾಯಕರು ಯಾರು, ತರಬೇತಿ ನೀಡುವ ಕೋಚ್ಗಳು ಯಾರು, ಎನ್ನುವ ಪ್ರಶ್ನೆಗೆ ಉತ್ತರವಾಗಿ ಈ ಪೋಸ್ಟ್.
ಬೆಂಗಾಲ್ ವಾರಿಯರ್ಸ್ ತಂಡ:
ನಾಯಕ: ಮಣಿಂದರ್ ಸಿಂಗ್, ಸ್ಟಾರ್ ಆಟಗಾರ ಮತ್ತು ತಂಡದ ಅತ್ಯಂತ ಸ್ತಮಿನ ಇರುವ ಮತ್ತು ಪ್ರತಿ ಮಾತುಗಳಲ್ಲೂ ಚೆನ್ನಾಗಿ ಆಡುವ ಆಟಗಾರ
ಕೋಚ್: ಕೆ. ಭಾಸ್ಕರನ್, ಭಾಸ್ಕರನ್ ಅವರು ಚೊಚ್ಚಲ ಪ್ರೊ ಕಬಡ್ಡಿ ಪಂದ್ಯದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡವನ್ನು ಮುನ್ನಡೆಸಿ ಚಾಂಪಿಯನ್ ಪಟ್ಟ ಗಿಟ್ಟಿಸಿಕೊಟ್ಟಿದ್ದರು.
ಬೆಂಗಳೂರು ಬುಲ್ಸ್:
ವಿಕಾಶ್ ಕಂಡೋಲ (ಸಂಭವನೀಯ ಕ್ಯಾಪ್ಟನ್)
ಕೋಚ್: ರಣಧೀರ್ ಸಿಂಗ್ ಸೆಹ್ರಾವತ್, ರಂಜಿಸಿಂಗ್ ಅವರು ಬೆಂಗಳೂರು ಬುಲ್ಸ್ ತಂಡದೊಂದಿಗೆ ಕಳೆದ 10 ಸೀಜನ್ ಗಳಿಂದಲೂ ಉಳಿದ ಏಕೈಕ ಕೋಚ್ ಅನ್ನಬಹುದು. ಸೀಸನ್ ಸಿಕ್ಸ್ ನಲ್ಲಿ ಬೆಂಗಳೂರು ಬುಲ್ಸ್ ಗೆಲುವಿಗೆ ಮಾರ್ಗದರ್ಶನ ಮಾಡಿದ ಕೀರ್ತಿ ರಣಧೀರ್ ಸಿಂಗ್ ಶರಾವತ್ ರವರದ್ದು.
ದಬಾಂಗ್ ದೆಹಲಿ ಕೆಸಿ:
ನಾಯಕ: ನವೀನ್ ಕುಮಾರ್
ಕೋಚ್: ರಂಬೀರ್ ಸಿಂಗ್ ಖೋಖರ್, ದೆಹಲಿ ತಂಡಕ್ಕೆ ಹೊಸ ಕೋಚ್ ಆಗಿ ನೇಮಕವಾಗಿದ್ದಾರೆ. ಕಬಡ್ಡಿಯ ಅಂಗಳದಲ್ಲಿ ಹೆಚ್ಚಿನ ಅನುಭವ ಹೊಂದಿರುವ ಇವರ ಅನುಭವ ದೆಹಲಿಗೆ ವರದಾನ ಆಗುವ ನಿರೀಕ್ಷೆಯಿದೆ.
ಗುಜರಾತ್ ಜೈಂಟ್ಸ್:
ನಾಯಕ: ಫಝಲ್ ಅತ್ರಾಚಲಿ, ಇರಾನ್ ಮೂಲದ ವಿದೇಶಿ ಸ್ಟಾರ್ ಆಟಗಾರ.
ಕೋಚ್: ರಾಮ್ ಮೆಹರ್ ಸಿಂಗ್, ಈ ಹಿಂದೆ ಬಲಿಷ್ಠ ಪಾಟ್ನಾ ಪೈರೇಟ್ಸ್ ತಂಡ ಕಟ್ಟಿದ ಕೀರ್ತಿ ಸಿಂಗ್ ಅವರಿಗೆ ಹೋಗುತ್ತೆ. ಪಾಟ್ನಾದ ಸೀಸನ್ 5 ಗೆಲುವಿನಲ್ಲಿ ಮಹತ್ವದ ಪಾತ್ರವನ್ನು ಅವರು ವಹಿಸಿದ್ದರು.
ಹರಿಯಾಣ ಸ್ಟೀಲರ್ಸ್:
ನಾಯಕ: ಜೈದೀಪ್, ಸಂಭವನೀಯ ನಾಯಕ
ಕೋಚ್: ಮನಪ್ರೀತ್ ಸಿಂಗ್, ಆಕ್ರಮಣಕಾರಿಶೈಲಿಗೆ ಹೆಸರುವಾಸಿಯಾಗಿರುವ ಮನ್‌ಪ್ರೀತ್ ಸಿಂಗ್, ಈ ಹಿಂದೆ ಏನೂ ಇಲ್ಲದ ಗುಜರಾತ್ ಜೈಂಟ್ಸ್ ತಂಡವನ್ನು ಎರಡೆರಡು ಬರಿ ಸತತ ಫೈನಲ್ ತನಕ ಮುನ್ನಡೆಸಿದ್ದರು.
ಜೈಪುರ ಪಿಂಕ್ ಪ್ಯಾಂಥರ್ಸ್:
ನಾಯಕ: ಸುನಿಲ್ ಮಲಿಕ್
ಕೋಚ್: ಸಂಜೀವ್ ಬಲಿಯಾನ್, ಇಂಡಿಯನ್ ರೈಲ್ವೆ ತಂಡದ ಹೆಡ್ ಕೋಚ್ ಆಗಿರುವ ಇವರ ಅನುಭವವೇ ತಂಡಕ್ಕೆ ಶ್ರೀ ರಕ್ಷೆ.
ಪಾಟ್ನಾ ಪೈರೇಟ್ಸ್:
ನಾಯಕ: ನೀರಜ್ ಕುಮಾರ್, ಸಂಭವನೀಯ ನಾಯಕ
ಕೋಚ್: ನರೇಂದ್ರ ಕುಮಾರ್ ರೆಡು, ಸರ್ವಿಸಸ್ ಕಬಡ್ಡಿ ತಂಡಕ್ಕೆ ಕೋಚಿಂಗ್ ನೀಡಿದವರು. ಅಂದರೆ ಮಿಲಿಟರಿ ತಂಡಗಳಿಗೆ ಕೋಚ್ ಆದವರು ಇವರು. ಪಾಟ್ನಾ ತಂಡ ಒಟ್ಟು ಪ್ರೊ ಕಬಡ್ಡಿಯಲ್ಲಿ ಮೂರು ಬಾರಿಯ ಚಾಂಪಿಯನ್. ಹೀಗಾಗಿ ಪಾಟ್ನಾ ಮೇಲೆ ಅಪಾರ ನಿರೀಕ್ಷೆಗಳು ಮೂಡಿವೆ.
ಪುಣೇರಿ ಪಲ್ಟನ್:
ನಾಯಕ: ಅಸ್ಲಂ ಇನಾಮದಾರ
ಕೋಚ್: ಬಿ ಸಿ ರಮೇಶ್, ಕನ್ನಡಿಗರಾಗಿರುವ ಒಂದು ಕಾಲದ ರಾಷ್ಟ್ರೀಯ ತಂಡದ ಚಾಂಪಿಯನ್ ಆಟಗಾರ ಬಿ ಸಿ ರಮೇಶ್. ಮಿಂಚಿನ ರೇಡ್ ಗೆ ಹೆಸರುವಾಸಿ ಈ ಕನ್ನಡಿಗ. ಈ ಹಿಂದೆ ಬೆಂಗಾಲ್ ವಾರಿಯಸ್ ಮತ್ತು ಬೆಂಗಳೂರು ಬುಲ್ಸ್ ತಂಡಕ್ಕೂ ಕೋಚ್ ಕೂಡಾ ಆಗಿದ್ದರು.
ತಮಿಳು ತಲೈವಾಸ್:
ನಾಯಕ: ಸಾಗರ್ ರಥಿ, ಸಂಭವನೀಯ ನಾಯಕ
ಕೋಚ್: ಅಶನ್ ಕುಮಾರ್ ಸಾಂಗ್ವಾನ್, ರಾಷ್ಟ್ರೀಯ ತಂಡಗಳೊಂದಿಗಿನ ಅವರ ಅನುಭವವು ತಲೈವಾಸ್ ಗೆ ಲಾಭ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ.
ತೆಲುಗು ಟೈಟಾನ್ಸ್ :
ನಾಯಕ: ಪವನ್ ಕುಮಾರ್ ಸೆಹ್ರಾವತ್, ಸ್ಟಾರ್ ಮತ್ತು ನಂಬರ್ 1 ಆಟಗಾರ ಅಂದ್ರೂ ತಪ್ಪಾಗಲಿಕ್ಕಿಲ್ಲ.
ಕೋಚ್: ಶ್ರೀನಿವಾಸ ರೆಡ್ಡಿ, ಮೂಲತಃ ಅದೇ ಊರಿನವರು. ಶ್ರೀನಿವಾಸ್ ರೆಡ್ಡಿ ಅವರು ತೆಲುಗು ಟೈಟಾನ್ಸ್ ತಂಡಕ್ಕೆ ತರಬೇತಿ ನೀಡಲು ಸಜ್ಜಾಗಿದ್ದಾರೆ. ಅನುಭವ ಮತ್ತು ಒಳನೋಟಗಳು ಟೈಟಾನ್ಸ್‌ಗೆ ವರದಾನ ಆಗುವುದರಲ್ಲಿ ಅನುಮಾನವಿಲ್ಲ.
ಯು ಮುಂಬಾ:
ನಾಯಕ: ಸುರೀಂದರ್ ಸಿಂಗ್ ಅಥವಾ ರಿಂಕು ಸಿಂಗ್, ಸಂಭವನೀಯ ನಾಯಕರು
ಕೋಚ್: ಘೋಲಮ್ರೇಜಾ ಮಜಂದರಾಣಿ, ಈ ಹಿಂದೆ ಯು ಮುಂಬಾ ಮತ್ತು ತೆಲುಗು ಟೈಟಾನ್ಸ್‌ನೊಂದಿಗೆ ತರಬೇತಿ ನೀಡಿದ ಘೋಲಮ್ರೇಜಾ ಮಜಂದರಾಣಿ, ಪಿಕೆಎಲ್ ಸೀಸನ್ 10ರಲ್ಲೂ ಯು ಮುಂಬಾವನ್ನು ಹೊಸ ಎತ್ತರಕ್ಕೆ ಏರಿಸಬಲ್ಲ ನಿರೀಕ್ಷೆಯಿದೆ.
ಯುಪಿ ಯೋಧಾ:
ನಾಯಕ: ನಿತೇಶ್ ಕುಮಾರ್, ಸಂಭವನೀಯ ನಾಯಕ
ಕೋಚ್: ಜಸ್ವೀರ್ ಸಿಂಗ್. ಇವರು ಯೋಧರ ಮತ್ತೊಂದು ಸೀಸನ್ ರ ಕೋಚ್ ಆಗಿದ್ದಾರೆ. ತಂಡವನ್ನು ಒಟ್ಟಾಗಿ ತೆಗೆದುಕೊಂಡು ಹೋಗುವುದರಲ್ಲಿ ಸಿಂಗ್ ಪರಿಣಿತರು.
ಒಟ್ಟಾರೆ, ಹೊಸ ನಾಯಕರು ಮತ್ತು ಹೊಸ ಕೋಚ್ ಗಳ ಮಾರ್ಗದರ್ಶನದಲ್ಲಿ ಪ್ರೊ ಕಬಡ್ಡಿ ಸೀಸನ್ ಹತ್ತು ಬಹು ನಿರೀಕ್ಷೆ ಮೂಡಿಸಿದೆ. ಈಗಾಗಲೇ ತಾಲೀಮು ನಡೆಯುತ್ತಿದ್ದು, ತಮ್ಮ ತಂದಲ್ಲಿರುವ ಗುಪ್ತ ಶಕ್ತಿ ಹೊರಹೊಮ್ಮಿಸುವಲ್ಲಿ ಎಲ್ಲ ಕೋಚ್ ಗಳೂ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ.
https://www.prokabaddi.com/schedule-fixtures-results
ಇದನ್ನೂ ಓದಿ:D.K: ಅಕ್ಕಪಕ್ಕದ ಮನೆಯ ಯುವಕ-ಯುವತಿ ಒಂದೇ ದಿನ ನಾಪತ್ತೆ!