H9N2: ಹೊಸ ಖಾಯಿಲೆಗೆ ಮತ್ತೆ ಸಾಕ್ಷಿಯಾಯ್ತು ಚೀನಾ- ಕೊರೊನಾ ರೀತಿ ಇದೂ ಹಬ್ಬುತ್ತಾ ? ಕೇಂದ್ರ ಸರ್ಕಾರದಿಂದ ಬಂದೇ ಬಿಡ್ತು ರೂಲ್ಸ್

H9N2: ಇಡೀ ಜಗತ್ತು ಕಂಡು ಕೇಳರಿಯದ ಕೊರೋನಾ(COVID 19)ಮಹಾಮಾರಿ ಸಾವು ನೋವಿನ ನಡುವೆ ಎಲ್ಲರನ್ನು ತಲ್ಲಣಗೊಳಿಸಿದ್ದು ಗೊತ್ತಿರುವ ಸಂಗತಿ. ಈ ನಡುವೆ ಚೀನಾದಲ್ಲಿ ಉಸಿರಾಟದ ಕಾಯಿಲೆಗಳ ಪ್ರಕರಣ ಏರಿಕೆ ಕಾಣುತ್ತಿದೆ. ಈ ನಡುವೆ, ಮತ್ತೊಂದು ಮಹತ್ವದ ಸಂಗತಿ ಹೊರ ಬಿದ್ದಿದೆ.

 

ಕೇಂದ್ರ ಆರೋಗ್ಯ ಸಚಿವಾಲಯ ನೆರೆಯ ದೇಶದಲ್ಲಿ ಎಚ್ 9 ಎನ್ 2 ಮತ್ತು ಮಕ್ಕಳಲ್ಲಿ ಉಸಿರಾಟದ ಕಾಯಿಲೆಯ ಕ್ಲಸ್ಟರ್ ಗಳನ್ನು ಸೂಕ್ಷ್ಮವಾಗಿ ಅವಲೋಕನ ಮಾಡುತ್ತಿದೆ. ಸಚಿವಾಲಯದ ಮೂಲಗಳ ಪ್ರಕಾರ, “ಇದು ವೈರಸ್ಗಳ ಕಾಕ್ಟೈಲ್ ಆಗಿದ್ದು, ಇದು ಚೀನಾದಲ್ಲಿ ಪ್ರಕರಣಗಳು ಹೆಚ್ಚಾಗಲು ಕಾರಣವಾಗಿದೆ. ಇದರ ಜೊತೆಗೆ ಇದು ಕರೋನವೈರಸ್ ರೀತಿ ಝೂನೋಟಿಕ್ ವೈರಸ್ ಅಲ್ಲ ಎಂಬ ವಿಚಾರ ಬಯಲಾಗಿದೆ.

ಚೀನಾದಿಂದ ವರದಿಯಾದ ಹಕ್ಕಿಜ್ವರ ಪ್ರಕರಣಗಳು ಮತ್ತು ಉಸಿರಾಟದ ಕಾಯಿಲೆಯ ಗುಂಪುಗಳಿಂದ ಭಾರತಕ್ಕೆ ಕಡಿಮೆ ಅಪಾಯ ಉಂಟು ಮಾಡಬಹುದು ಎಂದು . ಪ್ರಸ್ತುತ ಪರಿಸ್ಥಿತಿಯಿಂದ ಹೊರಹೊಮ್ಮುವ ಯಾವುದೇ ರೀತಿಯ ತುರ್ತು ಪರಿಸ್ಥಿತಿಗೆ ಭಾರತ ಅಣಿಯಾಗಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ಮಾಹಿತಿ ನೀಡಿದೆ. ಚೀನಾ ಸೇರಿದಂತೆ ದೇಶದ ಮುಖ್ಯ ನಗರಗಳಲ್ಲಿ ನ್ಯುಮೋನಿಯಾ ಏಕಾಏಕಿ ಹೆಚ್ಚಳವಾಗಿದ್ದು, ಮಕ್ಕಳಲ್ಲಿ ಉಸಿರಾಟದ ಕಾಯಿಲೆಗಳ ಹೆಚ್ಚಳದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (WHO) ಚೀನಾದಿಂದ ವಿವರವಾದ ವರದಿಯನ್ನು ಕೇಳಿದೆ.

ಇದನ್ನು ಓದಿ: Good news for women: ಗೃಹಲಕ್ಷ್ಮೀ, ಶಕ್ತಿ ಯೋಜನೆ ಬಳಿಕ ಮಹಿಳೆ ಯರಿಗೆ ಮತ್ತೆರಡು ಹೊಸ ಯೋಜನೆ ಜಾರಿ – ಸರ್ಕಾರದ ಹೊಸ ನಿರ್ಧಾರ, ಈ ದಿನದಿಂದಲೇ ಅರ್ಜಿ ಸಲ್ಲಿಸಿ

Leave A Reply

Your email address will not be published.