Anganwadi Workers: ಅಂಗನವಾಡಿ ಕಾರ್ಯಕರ್ತೆಯರಿಗೆ ಹೊಡೀತು ಲಾಟ್ರಿ- ಸರ್ಕಾರದಿಂದ ಹೊಸ ಭಾಗ್ಯ ಘೋಷಣೆ!!
Karnataka government news good news for anganwadi workers get mobile currency
Anganwadi Workers: ರಾಜ್ಯ ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರಿಗೆ(Anganwadi Workers) ಸಿಹಿಸುದ್ದಿ ನೀಡಿದ್ದು,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar)ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ರಾಜ್ಯ ಸರ್ಕಾರ ತಿಂಗಳಾಂತ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಮೊಬೈಲ್ ಗೆ ಕರೆನ್ಸಿ ನೀಡಲು ಮುಂದಾಗಿದೆ.
ಪೋಷಣ್ ಅಭಿಯಾನದಡಿಯಲ್ಲಿ ಗರ್ಭಿಣಿಯರ ದಾಖಲಾತಿ, ಆರೋಗ್ಯ, ಮಕ್ಕಳ ದಾಖಲಾತಿ, ಆರೋಗ್ಯ, ಆಹಾರ ವಿತರಣೆ ಮಾಹಿತಿ ಅಪ್ ಲೋಡ್ ಮಾಡಬೇಕಾಗುತ್ತದೆ. ಕೇಂದ್ರ ಸರ್ಕಾರದ ಪೋಷನ್ ಅಭಿಯಾನದಡಿ ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಿರುವ ಸ್ಮಾರ್ಟ ಫೋನ್ ಗಳಿಗೆ ಕಳೆದ ನಾಲ್ಕು ತಿಂಗಳುಗಳಿಂದ ಹಣ ಬಿಡುಗಡೆಯಾಗಿಲ್ಲ. ಹೀಗಾಗಿ, ಮೊಬೈಲ್ ಗೆ ಕರೆನ್ಸಿಯಿಲ್ಲದೆ ನಾಲ್ಕೈದು ತಿಂಗಳಿಂದ ಸಮಸ್ಯೆ ಎದುರಿಸುವಂತಾಗಿತ್ತು. ಈಗ ತಿಂಗಳಾಂತ್ಯದಲ್ಲಿ ಹಣ ಬಿಡುಗಡೆ ಮಾಡಲಾಗುವ ಕುರಿತು ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Gruha Lakshmi Yojana: ‘ಗೃಹಲಕ್ಷ್ಮೀ’ ವಿಚಾರದಲ್ಲಿ ಹೊಸ ಟ್ವಿಸ್ಟ್- ಇನ್ಮುಂದೆ ಗಂಡನ ಖಾತೆಗೆ ಬರುತ್ತೆ ಹಣ !!