Work From Home: ಉದ್ಯೋಗ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ – ವರ್ಕ್ ಫ್ರಮ್ ಹೋಮ್ ಬದಲು ಬರ್ತಿದೆ ಹೊಸ ಟ್ರೆಂಡ್ !!

Job news after work from home coffee badging is new workplace Trend

Work From Home: ಇತ್ತೀಚೆಗೆ ವರ್ಕ್ ಫ್ರಂ ಹೋಮ್‌ಗೆ ಹೊಂದಿಕೊಂಡಿರುವ ಮಂದಿ ಆಫೀಸಿಗೆ ಹೋಗಲು ಮನಸ್ಸೇ ಮಾಡುತ್ತಿಲ್ಲ. ಕೊರೋನಾ ಬಂದು ಕೆಲಸ ಮಾಡುವ ರೀತಿಯನ್ನೇ ಬದಲಾಯಿಸಿದೆ. ಒಂದು ವೇಳೆ ಆಫೀಸಿಗೆ ಹೋದರೂ ಸ್ವಲ್ಪ ಹೊತ್ತು ಸಹೋದ್ಯೋಗಿಗಳೊಂದಿಗೆ ಕಾಫಿ ಕುಡಿದು ಮರಳೋದು ಕಾಮನ್ ಆಗುತ್ತಿದೆ.

ಆಫೀಸಿಗೇ ಹೋಗದೇ ಮನೆಯಿಂದಾನೇ ಕೆಲಸವನ್ನು (Work From Home) ಎಫೆಕ್ಟಿವ್ ಆಗಿ ಮಾಡಬಹುದು ಎಂದು ಹೇಳಿಕೊಟ್ಟ ಕ್ರೆಡಿಟ್ ಕೊರೋನಾ ಗೆ ಸಲ್ಲಬೇಕು. ಮನೆ ಚಿಂತೆ ಇಲ್ಲದೇ ಮನೆಯಲ್ಲಿಯೇ ಕೂತು ಕೈ ತುಂಬಾ ದುಡೀಬಹುದು ಎಂಬುದನ್ನು ಇದರಿಂದ ಅರಿವಿಗೆ ಬಂತು. ಆದರೆ, ಹೊಸ ನಾರ್ಮಲ್ ಲೈಫ್ ಶುರುವಾದ ನಂತರ ವಿವಿಧ ಕಾರಣಗಳಿಂದ ಕಂಪನಿಗಳು ಮತ್ತೆ ವರ್ಕ್ ಫ್ರಂ ಆಫೀಸ್ ಮಾಡಬೇಕೆಂದು ಕರೆ ನೀಡಿತು. ಹೈಬ್ರಿಡ್ ಮೋಡ್ ಅಂದ್ರೆ ವಾರದಲ್ಲಿ ಕೆಲ ದಿನ ಆಫೀಸ್ ಮತ್ತು ಕೆಲ ದಿನ ಮನೆಯಿಂದ ಕೆಲಸ ಮಾಡುವ ಸಂಸ್ಕೃತಿಯೂ ಹುಟ್ಟಿಕೊಂಡಿತು.

ಈ ಎಲ್ಲ ಬೆಳವಣಿಗೆಗೆ ನಡುವೆ ಮೂನ್‌ಲೈಟಿಂಗ್ ಸಹ ಕೆಲ ಕಾಲ ಸದ್ದು ಮಾಡಿತು. ಒಂದು ಕಂಪನಿಗೆ ಕೆಲಸ ಮಾಡುತ್ತಿರುವಾಗಲೇ ಮತ್ತೊಂದು ಕಂಪನಿಗೆ ಬಿಡುವಿನ ಸಮಯದಲ್ಲಿ ಅಥವಾ ವರ್ಕಿಂಗ್ ಅವರ್ಸ್‌ನಲ್ಲಿಯೋ ಕೆಲಸ ಮಾಡಿದವರು ಸಿಕ್ಕಿ ಹಾಕಿ ಕೊಂಡರು.

Return to Office (RTO) ಕಂಪಲ್ಸರಿ ಮಾಡಿರುವ ಕೆಲವು ಕಂಪನಿಗಳು ಹೈಬ್ರಿಡ್ ಮೋಡ್‌ಗೆ ಸಹ ಅವಕಾಶ ನೀಡಿದೆ. ಆದರೆ, ಆಫೀಸಿಗೇ ಬರಲೇಬೇಕು ಎಂದು ಹೇಳುವುದರಿಂದ ಮನೆ ಬಿಟ್ಟು ಹೋಗುವ ಉದ್ಯೋಗಿಗಳು ಕೆಲ ಸಮಯ ಆಫೀಸ ಪರಿಸರದಲ್ಲಿ, ಕಾಫಿ ಹೀರುತ್ತಾ, ಕೆಲವು ಚರ್ಚೆಗಳಲ್ಲಿ ತೊಡಗಿ ಕಾಲ ಕಳೆಯೋದನ್ನು ಕಾಫಿ ಬ್ಯಾಡ್ಜಿಂಗ್ ಎನ್ನುತ್ತಾರೆ.

ಆದ್ರೆ ಆಫೀಸಿಗೆ ಹೋಗಿ, ಟ್ರಾಫಿಕ್ಕಲ್ಲಿ ಸಮಯ ಕಳೆದು, ಕೆಲಸ ಮಾಡೋದು ವೇಸ್ಟ್. ಬದಲಾಗಿ ತಮ್ಮ ನೆಚ್ಚಿನ ಜಾಗದಲ್ಲಿ ತಮ್ಮಿಷ್ಟದಂತೆ ಕೆಲಸ ಮಾಡಲು ಅವಕಾಶ ಕೊಟ್ಟರೆ ಪ್ರೊಡಕ್ಟಿವಿಟಿ ಹೆಚ್ಚುತ್ತೆ ಅನ್ನೋರು ಇದ್ದಾರೆ. ಆಫೀಸಿಗೇ ಬರಲೇ ಬೇಕು ಎಂಬ ರೂಲ್ಸ್ ಹಾಕಿದರೆ ಏನು ಮಾಡೋದು, ಹೋಗಿ ಒಟ್ಟಿಗೆ ಕಾಫಿ ಕೂತು ತುಸು ಹರಟೆ ಹೊಡೆದು ಕೊಂಡು ಬರೋದು ಅಷ್ಟೇ. ಇದು ಕೆಲವೊಮ್ಮೆ ಪಾಸಿಟಿವ್ ಆಗಲೂ ಬಹುದು, ಮತ್ತೆ ಕೆಲವೊಮ್ಮೆ ಉದ್ಯೋಗಿಗಳಲ್ಲಿ ಸ್ಪರ್ಧೆ ಹೆಚ್ಚುವಂತೆಯೂ ಮಾಡಬಹುದು ಎಂಬುವುದು ಹಲವರ ಅಭಿಪ್ರಾಯ .
ಈ ಹೊಸ ಟ್ರೆಂಡ್ ಮಹಿಳಾ ಉದ್ಯೋಗಳಿಗಿಂತ ಪುರುಷರಲ್ಲಿಯೇ ಹೆಚ್ಚಂತೆ. ಇದರಿಂದ ಕೆಲವೊಮ್ಮೆ ಹೊಸ ಹೊಸ ಐಡಿಯಾಗಳು ಶೇರ್ ಆಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.

ಅದರಲ್ಲಿಯೂ ಬೆಂಗಳೂರಿನಂಥ ನಗರಗಳಲ್ಲಿ ಆಫೀಸಿಗೆ ಹೋಗಿ ಬರುವುದು ಅಂದ್ರೆ ಟೈಮ್ ವೇಸ್ಟ್ ಅಂತ ಹೇಳುವವರೂ ಇದ್ದಾರೆ. ಅದರ ಬದಲು ವರ್ಕ್ ಫ್ರಂ ಹೋಮ್ ಬೆಸ್ಟ್ ಆಪ್ಷನ್ ಅಂತಾನೂ ಹೇಳ್ತಾರೆ. ಇನ್ನು ಮನೆಯಲ್ಲಿಯೇ ಒಂದು ರೂಮಲ್ಲಿ ಆಫೀಸ್ ಮಾಡಿಕೊಂಡು ಕೆಲಸ ಮಾಡುವ ಉದ್ಯೋಗಿಗಳು, ವಿರಾಮದ ವೇಳೆ ಮನೆ ಕಡೆಯೂ ಗಮನ ಹರಿಸುವುದರಿಂದ ಒತ್ತಡ ಮುಕ್ತ ಜೀವನ ಸುಲಭವಾಗಿದೆ. ಈ ಎಲ್ಲ ಬದಲಾವಣೆಗಳ ನಡುವೆ ಕಾಫಿ ಬ್ಯಾಡ್ಜಿಂಗ್ ಎಂಬ ಹೊಸ ಟ್ರೆಂಡ್ ಹುಟ್ಟಿಕೊಂಡಿದೆ ಎನ್ನಬಹುದು.

ಇದನ್ನೂ ಓದಿ : ಈ ದಿನದಿಂದ ಶಾಲಾ ಮಕ್ಕಳಿಗೆ ಸರಣಿ ರಜೆ !!

Leave A Reply

Your email address will not be published.