Home News Gadaga Crime News: ಏನೂ ಅರಿಯದ 9 ತಿಂಗಳ ಪುಟ್ಟ ಕಂದನಿಗೆ ಎಲೆ, ಅಡಿಕೆ ತಿನ್ನಿಸಿ...

Gadaga Crime News: ಏನೂ ಅರಿಯದ 9 ತಿಂಗಳ ಪುಟ್ಟ ಕಂದನಿಗೆ ಎಲೆ, ಅಡಿಕೆ ತಿನ್ನಿಸಿ ಕೊಲೆ ಮಾಡಿದ ಅಜ್ಜಿ, ಸೊಸೆ ಆರೋಪ!! ಕಾರಣವೇನು ಗೊತ್ತೇ?

Gadaga Crime News

Hindu neighbor gifts plot of land

Hindu neighbour gifts land to Muslim journalist

Gadaga: ಏನೂ ಅರಿಯದ ಒಂಭತ್ತು ತಿಂಗಳ ಕೂಸಿಗೆ ಅಜ್ಜಿಯೊಬ್ಬಳು ಎಲೆ, ಅಡಿಕೆ ತಿನ್ನಿಸಿ ಕೊಲೆ ಮಾಡಿರುವ ಆರೋಪದ ಹೊಂದಿರುವ ಭೀಕರ ಘಟನೆಯೊಂದು ನಡೆದಿದೆ. ಈ ಘಟನೆ ಗಜೇಂದ್ರಗಡ (Gajendragad) ತಾಲೂಕಿನ ಪುರ್ತಗೇರಿ ಗ್ರಾಮದಲ್ಲಿ ನಡೆದಿದೆ.

ನ.22 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹೆರಿಗೆಯಾಗಿ ಐದು ತಿಂಗಳ ಬಳಿಕ ನಾಗರತ್ನ ಅವರು ಗಂಡನ ಮನೆಗೆ ಬಂದಿದ್ದರು. ಈ ಸಮಯದಲ್ಲಿ ಅತ್ತೆ ಸರೋಜಾ ಅವರು ಇಷ್ಟು ಬೇಗ ಮಗು ಬೇಕಿತ್ತಾ ಎಂದು ಪ್ರಶ್ನೆ ಮಾಡಿದ್ದು, ಇದೇ ಕೋಪದಲ್ಲಿ ಮಗುವಿಗೆ ಅಡಕೆ ಹೋಳು, ಎಲೆ ತಿನ್ನಿಸಿ ಕೊಲೆ ಮಾಡಿದ್ದಾರೆ ಎಂಬ ಆರೋಪವಿದೆ.

ನ.22 ರಂದು ಮಗುವಿನ ಅಂತ್ಯಸಂಸ್ಕಾರ ನಡೆದಿತ್ತು. ಅನಂತರ ಮಗುವಿನ ತಾಯಿ ನಾಗರತ್ನ ದೂರು ನೀಡಿದ ಕಾರಣ ನ.24 ರಂದು ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿಲಾಗಿದೆ. ಘಟನಾ ಸ್ಥಳಕ್ಕೆ ಗದಗ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

ಇದನ್ನು ಓದಿ: Varthur Santosh: ಬಿಗ್ ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ರಾತ್ರೋ ರಾತ್ರಿ ಎಸ್ಕೇಪ್ !!