Mandya: ಸೊಸೆಯ ಸಾವಿನ ಸುದ್ದಿ ಕೇಳಿ ಅತ್ತೆ ಹೃದಯಾಘಾತದಿಂದ ಸಾವು!!!

Mandya: ಅತ್ತೆ ಸೊಸೆ ಎಂದರೆ ಎಣ್ಣೆ ಸೀಗೇಕಾಯಿ ಅನ್ನೋ ಈ ಕಾಲದಲ್ಲಿ ಸೊಸೆ ಸಾವಿನ ಸುದ್ದಿ ಕೇಳಿ ಅತ್ತೆ ಹೃದಯಾಘಾತದಿಂದ ಮೃತಪಟ್ಟ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕಾಡು ಅಂಕನಹಳ್ಳಿ ಗ್ರಾಮದಲ್ಲಿ ನಡೆದಿದೆ.

 

ಸುಶೀಲಾ (42)ಅನಾರೋಗ್ಯದಿಂದ ನಿನ್ನೆ ಸಂಜೆ ಮೃತ ಹೊಂದಿದ್ದಾರೆ. ಸೊಸೆಯ ಸಾವಿನ ಸುದ್ದಿ ಕೇಳಿ ಅತ್ತೆ ಹುಚ್ಚಮ್ಮ (75) ಅವರು ಹೃದಯಾಘಾತದಿಂದ ಮೃತ ಹೊಂದಿದ್ದಾರೆ.

ಮೃತ ಹೊಂದಿದ್ದ ಹುಚ್ಚಮ್ಮರಿಗೆ ಐವರು ಗಂಡು ಮಕ್ಕಳು. ಅವರಲ್ಲಿ ಎರಡನೇ ಮಗನ ಪತ್ನಿ ಸುಶೀಲಾ ಜೊತೆ ಬಹಳ ಪ್ರೀತಿಯಿಂದ ಇದ್ದರು ಎನ್ನಲಾಗಿದೆ. ಅತ್ತೆ ಸೊಸೆ ಸಾವಿನಿಂದ ಇಡೀ ಗ್ರಾಮವೇ ಮಮ್ಮಲ ಮರುಗಿದೆ.

ಇದನ್ನು ಓದಿ: ಕುಳ್ಳಿ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡ ಯುವತಿ!

Leave A Reply

Your email address will not be published.