HSRP Update: ಎಚ್‌ಎಸ್‌ಆರ್‌ಪಿ ಗೊಂದಲ ಕುರಿತು ಸರಕಾರದಿಂದ ಮಹತ್ವದ ಹೇಳಿಕೆ!!!

Karnataka Government on HSRP: ಎಚ್‌ಎಸ್‌ಆರ್‌ಪಿ (ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್‌ ಪ್ಲೇಟ್ಸ್‌) ಅಳವಡಿಕೆ ಕುರಿತು ಅರ್ಜಿದಾರರೂ ಸೇರಿ, ಸಂಬಂಧಿಸಿದವರ ಸಭೆ ನಡೆಸಿ ಮುಂದಿನ ವಾರ ತೀರ್ಮಾನ ಮಾಡಲಾಗವುದು ಎಂದು ರಾಜ್ಯ ಸರಕಾರ ಕರ್ನಾಟಕ ಹೈಕೋರ್ಟ್‌ಗೆ (Karnataka Government on HSRP) ತಿಳಿಸಿದೆ.

ಏಕಸದಸ್ಯ ಪೀಠ HSRP ಜಾರಿಗೆ ತಡೆ ನೀಡುವಂತೆ ಕೋರಿ ಸಲ್ಲಿಸಿದ ಅರ್ಜಿ ವಜಾಗೊಳಿಸದ್ದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಮೇಲ್ಮನವಿಗಳು ಸಿಜೆ ಪಿ ಬಿ ವರ್ಲೆ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದವು.

ʼಸರಕಾರ ನೀಡಿದ್ದ ಭರವಸೆಯಂತೆ ಅರ್ಜಿದಾರರೂ ಸೇರಿ ಸಭೆ ನಡೆಸಿ HSRP ಜಾರಿ ಕುರಿತು ತೀರ್ಮಾಣ ಮಾಡುವುದಾಗಿ ಕಳೆದ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಸರಕಾರ ಭರವಸೆ ನೀಡಿತ್ತು. ಆದರೆ ಸಭೆಗೆ ಕರೆದಿಲ್ಲʼ ಎಂದು ಮೇಲ್ಮನವಿದಾರರ ಪರ ವಕೀಲರು ನ್ಯಾಯಪೀಠದ ಮುಂದೆ ಆರೋಪ ಮಾಡಿದರು.

ಹೆಚ್ಚುವತಿ ಅಡ್ವೊಕೇಟ್‌ ಜನರಲ್‌ ವಿಕ್ರಂ ಹುಯಿಲಗೋಳ ಅವರು ” ಕಳೆದ ತಿಂಗಳು ಸಭೆ ನಡೆಸಿಲ್ಲ, ಮುಂದಿನ ವಾರ ಸಭೆ ನಡೆಸಲು ಉದ್ದೇಶಿಸಿದ್ದು, ಮೇಲ್ಮನವಿದಾರೂ ಸೇರಿ ಎಲ್ಲರನ್ನೂ ಆಹ್ವಾನಿಸಿ ಚರ್ಚೆ ನಡೆಸಿ ನಂತರ ತೀರ್ಮಾನ ಮಾಡಲಾಗುವುದು” ಎಂದು ಸರಕಾರ ಪರ ಪ್ರತಿಕ್ರಿಯೆ ನೀಡಿದ್ದಾರೆ. ನ್ಯಾಯಾಲಯದ ಸರಕಾರಕ್ಕೆ ಸಮಯಾವಕಾಶ ನೀಡಿ ವಿಚಾರಣೆಯನ್ನು ಡಿ.6 ಕ್ಕೆ ಮುಂದೂಡಿತು.

ಇದನ್ನು ಓದಿ: Hassan: ತಡವಾಗಿ ಶಾಲೆಗೆ ಬಂದ ಶಿಕ್ಷಕರು; ಶಾಲೆಗೆ ಎಂಟ್ರಿ ಕೊಟ್ಟಾಗ ಕಾದಿತ್ತು ಶಾಕಿಂಗ್‌ ನ್ಯೂಸ್‌!!!

Leave A Reply

Your email address will not be published.