Ration Card: ರೇಷನ್ ಕಾರ್ಡ್ ದಾರರಿಗೆ ಮಹತ್ವದ ಸುದ್ದಿ- ರೇಷನ್ ಪಡೆಯುವಾಗ ಇದನ್ನು ಪಡೆಯುವುದು ಕಡ್ಡಾಯ !!

Karnataka news henceforth printed bill is mandatory for all those receiving ration latest news

Ration Card: ಪಡಿತರ ಚೀಟಿದಾರರೇ(Ration Card Holder)ಗಮನಿಸಿ, ನಿಮಗೊಂದು ಮುಖ್ಯ ಮಾಹಿತಿ ಇಲ್ಲಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ (Ration Card)ಪಡೆದ ಬಳಿಕ ಕೈಯಲ್ಲಿ ಬಿಲ್ ಬರೆದು ನೀಡಲಾಗುತ್ತಿದ್ದು, ಇದೀಗ ಪ್ರಿಂಟೆಡ್ ಬಿಲ್ (Printed Bill)ಕೊಡಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಅಡಿ ಕೇಂದ್ರ ಸರ್ಕಾರ ಅಕ್ಕಿ(Rice)ನೀಡುತ್ತಿರುವ ಹಿನ್ನೆಲೆ ಯೋಜನೆಯ ಬಗ್ಗೆ ಜನರಿಗೆ ತಿಳಿಸುವ ನಿಟ್ಟಿನಲ್ಲಿ ರಶೀದಿ ನೀಡುವುದನ್ನು ಕಡ್ಡಾಯ ಮಾಡಲಾಗಿದೆ. ಯೋಜನೆಯ ಹೆಸರು, ಜಿಲ್ಲೆ, ತಾಲೂಕು, ಫಲಾನುಭವಿಯ ಹೆಸರು, ಒಟ್ಟು ಸದಸ್ಯರ ಸಂಖ್ಯೆ, ಹಂಚಿಕೆಯ ದಿನಾಂಕ, ಆಹಾರ ಧಾನ್ಯದ ವಿವರ ಹಾಗೂ ಇದಕ್ಕೆ ತಗಲುವ ವೆಚ್ಚ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಾಯಧನ ಎಷ್ಟು ಎಂಬುದು ಸೇರಿದಂತೆ ಹಲವು ಮಾಹಿತಿ ಮುದ್ರಿತ ರಶೀದಿಯಲ್ಲಿ ಇರಲಿದೆ.

ಕೇಂದ್ರ ಸರ್ಕಾರ(Central Government) ಇನ್ನು ಮುಂದೆ ನ್ಯಾಯಬೆಲೆ ಅಂಗಡಿಯಲ್ಲಿ (Ration Shop)ಪ್ರಿಂಟೆಡ್ ಬಿಲ್ ಕೊಡಬೇಕು ಎಂದು ಘೋಷಣೆ ಮಾಡಿದೆ. ಪಡಿತರ ಸದಸ್ಯರು ಹಾಗೂ ಕೇಂದ್ರ ಸರ್ಕಾರದ ಅನುದಾನ ಹಾಗೂ ರಾಜ್ಯ ಸರ್ಕಾರದ ಅನುದಾನದ ವಿವರ ಕಾಣಬಹುದು. ಸದ್ಯ, ಪಡಿತರ ಚೀಟಿದಾರರಿಗೆ 5 ಕೆಜಿ ಅಕ್ಕಿ ನೀಡಲಾಗುತ್ತಿದ್ದು, ಉಳಿದ 5 ಕೆಜಿ ಅಕ್ಕಿ ಬದಲಿಗೆ ಹಣ ನೀಡಲಾಗುತ್ತಿದೆ.

ಇದನ್ನೂ ಓದಿ : School Children flung into air:ಲಾರಿಗೆ ಶಾಲಾ ಮಕ್ಕಳಿದ್ದ ಅಟೋ ಡಿಕ್ಕಿ – ಮಕ್ಕಳ ಸ್ಥಿತಿ ಚಿಂತಾಜನಕ

Leave A Reply

Your email address will not be published.