School Children flung into air:ಲಾರಿಗೆ ಶಾಲಾ ಮಕ್ಕಳಿದ್ದ ಅಟೋ ಡಿಕ್ಕಿ – ಮಕ್ಕಳ ಸ್ಥಿತಿ ಚಿಂತಾಜನಕ
Andhra Pradesh news Schoolchildren Flung Into Air As Auto Truck Collide In visakhapatnam
SchoolChildren flung into air: ಆಂಧ್ರ ಪ್ರದೇಶದ (Andhra Pradesh) ವಿಶಾಖಪಟ್ಟಣಂ ನಗರದಲ್ಲಿ (Vishakhapatnam City) ವೇಗವಾಗಿ ಬರುತ್ತಿದ್ದ ಟ್ರಕ್‌ಗೆ (Truck) ಆಟೋರಿಕ್ಷಾ (Auto rickshaw) ಡಿಕ್ಕಿ ಹೊಡೆದ ಪರಿಣಾಮ ಅದರಲ್ಲಿದ್ದ ಶಾಲಾ ಮಕ್ಕಳು ಗಾಳಿಯಲ್ಲಿ ಹಾರಿ ಬಿದ್ದ (SchoolChildren flung into air) ದಾರುಣ ಘಟನೆ ಬುಧವಾರ ನಡೆದಿದೆ.
ವಿಶಾಖಪಟ್ಟಣಂ ಸಂಗಮ್ ಸರತ್ ಥಿಯೇಟರ್ ಜಂಕ್ಷನ್‌ನಲ್ಲಿ ವೇಗವಾಗಿ ಬರುತ್ತಿದ್ದ ಟ್ರಕ್‌ಗೆ ಶಾಲಾ ಮಕ್ಕಳಿದ್ದ ಆಟೋ ಡಿಕ್ಕಿ ಹೊಡೆದಿದೆ. ಶಾಲಾ ಮಕ್ಕಳು ಬೆಳಗ್ಗೆ 7 ಗಂಟೆಗೆ ಬೆಥನಿ ಸ್ಕೂಲ್‌ಗೆ ಆಟೋದಲ್ಲಿ ಹೊರಟಿದ್ದರು ಎನ್ನಲಾಗಿದೆ. ವಿಶಾಖಪಟ್ಟಣದ ಸಂಗಂ ಶರತ್ ಥಿಯೇಟರ್ ಜಂಕ್ಷನ್‌ನಲ್ಲಿ ಈ ಅವಘಡ ಸಂಭವಿಸಿದೆ.ಈ ಘಟನೆಯ ದೃಶ್ಯಾವಳಿಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Video Viral) ಆಗಿದ್ದು, ಆಟೋದಲ್ಲಿದ್ದ ಎಂಟೂ ಮಕ್ಕಳು ಗಾಯಗೊಂಡಿದ್ದಾರೆ.
ಬೆಳಗ್ಗೆ 7.35ಕ್ಕೆ ಫ್ಲೈಓವರ್‌ನ ಕೆಳಗೆ ಕ್ರಾಸಿಂಗ್‌ನಲ್ಲಿ ಟ್ರಕ್ ಸಮೀಪಿಸಿದ್ದು, ಎಡಭಾಗದಿಂದ ವೇಗವಾಗಿ ಬರುತ್ತಿದ್ದ ಆಟೋ ಅದರೊಳಗೆ ನುಗ್ಗಿದ್ದು, ಲಾರಿ ನಿಲ್ಲಿಸಲು ಆಗದೇ ಇದ್ದಾಗ ಶಾಲಾ ಮಕ್ಕಳು ಆಟೋದಿಂದ ಗಾಳಿಯಲ್ಲಿ ಹಾರಿ ಬಿದ್ದಿದ್ದಾರೆ. ಇವರಲ್ಲಿ 8 ಮಕ್ಕಳಿಗೆ ಗಾಯಗಳಾಗಿದ್ದು, ಒಂದು ಮಗುವಿನ ಸ್ಥಿತಿ ಚಿಂತಾಜನಕವಾಗಿದೆ. ಇವರಲ್ಲಿ ನಾಲ್ಕು ಮಕ್ಕಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, ಮೂವರು ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
#WATCH | Andhra Pradesh: Eight school children were injured in an accident when an auto collided with a lorry near Sangam Sarat Theatre in Visakhapatnam
Source: CCTV Footage from a local shop pic.twitter.com/sr9xaadUVo
— ANI (@ANI) November 22, 2023
ಇದನ್ನೂ ಓದಿ:Rahul Dravid: ಟೀಂ ಇಂಡಿಯಾ ಕೋಚ್ ಸ್ಥಾನಕ್ಕೆ ರಾಹುಲ್ ವಿದಾಯ- ಇವರೇ ನೋಡಿ ಹೊಸ ಕೋಚ್