Home National Kerala: ಪ್ರಿಯತಮನನ್ನು ವರಿಸಲು ಮುಸ್ಲಿಂಗೆ ಮತಾಂತರವಾಗಿದ್ದ ಹಿಂದೂ ಯುವತಿ ಬಾಳೀಗ ನರಕ !! ವೈರಲ್ ಆಯ್ತು...

Kerala: ಪ್ರಿಯತಮನನ್ನು ವರಿಸಲು ಮುಸ್ಲಿಂಗೆ ಮತಾಂತರವಾಗಿದ್ದ ಹಿಂದೂ ಯುವತಿ ಬಾಳೀಗ ನರಕ !! ವೈರಲ್ ಆಯ್ತು ಪೋಸ್ಟ್ !!

Kerala Instagram influencer Athulya

Hindu neighbor gifts plot of land

Hindu neighbour gifts land to Muslim journalist

Kerala Instagram influencer Athulya: ಸಾಕಷ್ಟು ಜನರನ್ನು ಕೆರಳಿಸಿದ ಕೆಲವು ಸಿನಿಮಾಗಳ ಪೈಕಿ ‘ದಿ ಕೇರಳ ಸ್ಟೋರಿ'(The kerala story) ಸಿನಿಮಾ ಕೂಡ ಒಂದು. ಅದರಲ್ಲೂ ಈ ಸಿನಿಮಾ ಮಹಿಳೆಯರನ್ನು ಸಾಕಷ್ಟು ಪ್ರಭಾವಿಸಿತು. ಸಿನಿಮಾ ಪ್ರೇರಣೆ ಪಡೆದು ಅನೇಕ ಘಟನೆಗಳು ನಡೆದವು. ಅಂತೆಯೇ ಅತುಲ್ಯ ಅಶೋಕನ್(Atulya ashokan) ಎನ್ನುವ ಯುವತಿಯೊಬ್ಬಳು ಪ್ರೀತಿಸಿದವನನ್ನು ವರಿಸಲು ಮುಸ್ಲಿಂಗೆ ಮತಾಂತರವಾದಳು. ಇದು ಸಾಕಷ್ಟು ಸುದ್ಧಿಯಾಗಿತ್ತು. ಆದರೀಗ ಈ ವಿಚಾರ ಮತ್ತೆ ಹೊಸ ರೀತಿಯಲ್ಲಿ ಸುದ್ದಿಮಾಡುತ್ತಿದ್ದು ಈ ಹಿಂದೂ ಯುವತಿಯ ಬಾಳಲ್ಲಿ ಈಗ ಬಿರುಗಾಳಿ ಎದ್ದಿದೆ.

ಹೌದು, ‘ದಿ ಕೇರಳ ಸ್ಟೋರಿ’ ಹಲವು ಮಹಿಳೆಯರನ್ನು ಪ್ರಭಾವಿಸಿತು. ವಿಶೇಷ ಎಂಬಂತೆ ಹಣೆಗೆ ಕುಂಕುಮವಿಟ್ಟು, ಕೈ ತುಂಬಾ ಬಳೆ ತೊಟ್ಟು ಇನ್‌ಸ್ಟಾಗ್ರಾಮ್(Instagram) ನಲ್ಲಿ ಮಿಂಚುತ್ತಿದ್ದ ಅತುಲ್ಯಾ ಅಶೋಕ್( Kerala Instagram influencer Athulya) ಎನ್ನುವವಳನ್ನು ಕೊಂಚ ಹೆಚ್ಚೇ ಪ್ರಭಾವಿಸಿತ್ತು ಎನ್ನಬಹುದು. ಯಾಕೆಂದರೆ ಈಕೆಯು ತಾನು ಪ್ರೀತಿಸಿದ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಬೇಕೆಂದು ಹಿಂದೂ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿ, ಆಲಿಯಾ ಎಂಬ ಹೆಸರೊಂದಿಗೆ ರಿಸಾಲ್ ಮನ್ಸೂರ್ ಎನ್ನುವಾತನೊಂದಿಗೆ ವಿವಾಹವಾಗಿದ್ದು, ಸಾಕಷ್ಟು ಸುದ್ಧಿಯಾಗಿತ್ತು. ಆದರೀಗ ಈ ಸಂಬಂಧ ಮುರಿದು ಬಿದ್ದಿದೆ ಎನ್ನಲಾಗಿದೆ. ಇದಕ್ಕೆಲ್ಲಾ ಅತುಲ್ಯಾ ಹಾಕಿರುವ ಆ ಒಂದು ಪೋಸ್ಟ್ ಪುಷ್ಟಿ ನೀಡುತ್ತಿದೆ.

ಅಂದಹಾಗೆ ಅತುಲ್ಯ(ಆಲಿಯಾ) “ನನಗೆ ಏನೇ ಆದರೂ ನನ್ನ ಕುಟುಂಬದಲ್ಲಿ ಯಾರೊಬ್ಬರೂ ಜವಾಬ್ದಾರರಲ್ಲ. ಅವನೇ ಕಾರಣ” ಎಂದು ತನ್ನ ಮುಸ್ಲಿಂ ಪತಿಯ ಹೆಸರನ್ನು ಉಲ್ಲೇಖಿಸಿ ಇನ್‌ಸ್ಟಾಗ್ರಾಮ್ ನಲ್ಲಿ ಸ್ಟೋರಿ ಹಾಕಿದ್ದಾರೆ. ಇದಲ್ಲದೇ ರಿಸಾಲ್ ಜೊತೆಗಿದ್ದ ಹಾಗೂ ಮದುವೆ ಸಮಯದಲ್ಲೆಲ್ಲ ತೆಗೆದ ಫೋಟೋಗಳನ್ನೆಲ್ಲ ಅವರು ಡಿಲೀಟ್‌ ಮಾಡಿದ್ದಾರೆ.

ಆದರೆ ವಿಚಿತ್ರ ಎಂಬಂತೆ ಕೆಲವೇ ಹೊತ್ತಲ್ಲಿ ಆ ಬಳಿಕ ಸ್ಟೋರಿಯನ್ನೂ ಡಿಲೀಟ್‌ ಮಾಡಿದ್ದಾರೆ. ಇದನ್ನು ನೋಡಿರುವ ಕೆಲವರು ಬಗೆ ಬಗೆಯಾಗಿ ಕಮೆಂಟಿಸುತ್ತಿದ್ದು, “ಕೇರಳ ಸ್ಟೋರಿ ನಿಜ” ಎಂದಿದ್ದಾರೆ. ಕೆಲವರು ಇದು ಅತುಲ್ಯ ಕಷ್ಟದಲ್ಲಿದ್ದಾಳೆ ಎಂಬುದನ್ನು ಸೂಚನೆಯನ್ನು ಸೂಚಿಸುತ್ತಿದೆ ಈ ಬಗ್ಗೆ ಕೇರಳ ಪೊಲೀಸರು ಕ್ರಮಕೈಗೊಳ್ಳಬೇಕೆಂದು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ : ಮಂಗಳೂರು: ಹಣ ತುಂಬಲು ಬ್ಯಾಂಕ್’ಗೆ ತೆರಳಿದ ವ್ಯಕ್ತಿ ನಾಪತ್ತೆ !!