Congress Manifesto: 400ರೂ ಗೆ ಸಿಗುತ್ತೆ ಸಿಲಿಂಡರ್- ಕಾಂಗ್ರೆಸ್ ನಿಂದ ಭರ್ಜರಿ ಘೋಷಣೆ
Political news Congress released manifesto for assembly election LPG cylinder at rs 400
Congress Manifesto: 2024ರ ಲೋಕಸಭೆ ಚುನಾವಣೆಯ (Lok Sabha Election 2024) ಸಲುವಾಗಿ ಮಧ್ಯಪ್ರದೇಶ, ಛತ್ತೀಸ್‌ಗಢ ಸೇರಿ ಐದು ರಾಜ್ಯಗಳಲ್ಲಿ ಬಿಜೆಪಿ, ಕಾಂಗ್ರೆಸ್ ಸೇರಿ ಎಲ್ಲ ಪಕ್ಷಗಳು ಜನರ ಮತ ಸೆಳೆಯುವ ಹಿನ್ನೆಲೆ ಬಿಜೆಪಿ ಹಾಗೂ ಕಾಂಗ್ರೆಸ್ ಉಚಿತ ಕೊಡುಗೆಗಳ ಭರವಸೆ ಮೂಲಕ ಜನರ ವಿಶ್ವಾಸ ಗಳಿಸಲು ಯತ್ನಿಸುತ್ತಿವೆ. ಅದರಂತೆ, ರಾಜಸ್ಥಾನದಲ್ಲಿ (Rajasthan Polls) ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ (Congress Manifesto) ಬಿಡುಗಡೆ ಮಾಡಿದ್ದು, ಜನರಿಗೆ ಭರಪೂರ ಭರವಸೆಗಳನ್ನು ನೀಡಿದೆ.
ಇದೀಗ ರಾಜಸ್ಥಾನ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಣಾಳಿಕೆ ಬಿಡುಗಡೆ ಮಾಡಿದರು. ರಾಜ್ಯದ ಜನರಿಗೆ ಕಾಂಗ್ರೆಸ್ ಹತ್ತಾರು ಭರವಸೆ ನೀಡಿದೆ.
ಹೌದು, ರಾಜಸ್ಥಾನ ರಾಜಧಾನಿ ಜೈಪುರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೇರಿ ಹಲವರು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದರು. “ದೇಶದ ಯಾವುದೇ ರಾಜ್ಯದಲ್ಲಿ ಜನರಿಗೆ ನೀಡುವ ಭರವಸೆಗಳನ್ನು ಈಡೇರಿಸುತ್ತದೆ ಎಂದರೆ ಅದು ಕಾಂಗ್ರೆಸ್ ಮಾತ್ರ. ರಾಜಸ್ಥಾನದಲ್ಲಿ ಕಳೆದ ಚುನಾವಣೆ ಘೋಷಿಸಿದ ಪ್ರಣಾಳಿಕೆಯ ಶೇ.90ರಷ್ಟುಭರವಸೆಗಳನ್ನು ಈಡೇರಿಸಲಾಗಿದೆ. ಮುಂದಿನ ದಿನಗಳಲ್ಲೂ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವುದೇ ನಮ್ಮ ಗುರಿಯಾಗಿದೆ” ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಮುಖ್ಯವಾಗಿ ಕಾಂಗ್ರೆಸ್ ನೀಡಿದ ಪ್ರಮುಖ ಭರವಸೆಗಳು ಇಂತಿವೆ :
ಅಡುಗೆ ಅನಿಲ ಸಿಲಿಂಡರ್‌ಅನ್ನು 500 ರೂ. ಬದಲಿಗೆ 400 ರೂ.ಗೆ ನೀಡುವುದು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯಾದ್ಯಂತ ಜಾತಿಗಣತಿ ಮಾಡಲಾಗುವುದು.
ರಾಜ್ಯದಲ್ಲಿ ಸುಮಾರು 4 ಲಕ್ಷ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವುದು.
ಸ್ವಾಮಿನಾಥನ್ ಸಮಿತಿ ವರದಿ ಅನ್ವಯ ರೈತರಿಗೆ ಕನಿಷ್ಠ ಬೆಂಬಲ ಬೆಲೆ ನೀಡಲು ಕಾನೂನು ರೂಪಿಸುವುದು.
ಆರ್‌ಟಿಇ ಅಡಿಯಲ್ಲಿ ರಾಜ್ಯಾದ್ಯಂತ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲೂ ಪಿಯುಸಿವರೆಗೆ ಉಚಿತ ಶಿಕ್ಷಣ ನೀಡಲಾಗುವುದು.
#WATCH | Rajasthan Elections | Congress president Mallikarjun Kharge, CM Ashok Gehlot, state Congress president Govind Singh Dotasara and party leader Sachin Pilot, along with others, launch the party's election manifesto in Jaipur. pic.twitter.com/hC2EFU3klq
— ANI (@ANI) November 21, 2023
ಇದನ್ನೂ ಓದಿ: Indian Railway Rules: ರೈಲ್ವೆ ಪ್ರಯಾಣಿಕರು ಇನ್ಮುಂದೆ ಇವುಗಳನ್ನು ರೈಲಲ್ಲಿ ಕೊಂಡೋಗುವಂತಿಲ್ಲ- ಇಲಾಖೆಯಿಂದ ಖಡಕ್ ಸೂಚನೆ !!