Home Jobs Gram Panchayat Employees: ಗಾ.ಪಂ ನೌಕರರಿಗೆ ಸರ್ಕಾರದಿಂದ ಭರ್ಜರಿ ಗಿಫ್ಟ್- 11, 543 ನೌಕರರ ನೇಮಕಾತಿಗೆ...

Gram Panchayat Employees: ಗಾ.ಪಂ ನೌಕರರಿಗೆ ಸರ್ಕಾರದಿಂದ ಭರ್ಜರಿ ಗಿಫ್ಟ್- 11, 543 ನೌಕರರ ನೇಮಕಾತಿಗೆ ಸಿಕ್ತು ಅಸ್ತು !!

Gram Panchayat Employees

Hindu neighbor gifts plot of land

Hindu neighbour gifts land to Muslim journalist

Gram Panchayat Employees: ಅಭದ್ರತೆಯಲ್ಲಿ ಕೆಲಸ ಮಾಡುತ್ತಿದ್ದ, ರಾಜ್ಯದ ಗ್ರಾಮಪಂಚಾಯಿತಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮಪಂಚಾಯಿತಿ ನೌಕರರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ (Gram Panchayat Employees) ನೀಡಿದೆ. ಹೌದು, ರಾಜ್ಯದ ಗ್ರಾಮಪಂಚಾಯಿತಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 11,543 ಸಿಬ್ಬಂದಿಗಳಿಗೆ ಸೇವಾ ಭದ್ರತೆ ಒದಿಗಿಸಲು ಮುಂದಾಗಿದೆ.

ಸದ್ಯ ಸದಾ ಅಭದ್ರತೆಯಲ್ಲೇ ಕೆಲಸ ಮಾಡುತ್ತಿದ್ದ ಗ್ರಾಮ ಪಂಚಾಯಿತಿಗಳ ನೌಕರರ ನೇಮಕಾತಿಗೆ ಅನುಮೋದನೆ ನೀಡಿ ಐತಿಹಾಸಿಕ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಸಚಿವ ಪ್ರಿಯಾಂಕ್ ಖರ್ಗೆ ಅವರ ಸೇವಾ ಭದ್ರತೆಯನ್ನು ಒದಗಿಸುವ ಈ ನಿರ್ಧಾರದಿಂದ 11, 543 ನೌಕರರಿಗೆ ಜೀವನ ಭದ್ರತೆ ಸಿಕ್ಕಂತಾಗಿದೆ.

2017 ನೇಮಕಗೊಂಡು ಮುಂಚಿತವಾಗಿ ಗ್ರಾಮಪಂಚಾಯಿತಿಗಳಲ್ಲಿ ಜವಾನ, ನೀರಗಂಟಿ, ಸ್ವಚ್ಛತಾಗಾರರಾಗಿ ಕೆಲಸ ಮಾಡುತ್ತಿರುವ ಜಿಲ್ಲಾ ಪಂಚಾಯಿತಿಯಿಂದ ಅನುಮೋದನೆ ನೀಡಲಾಗುತ್ತಿದ್ದು, 2017 ಕ್ಕೂ ಮೊದಲು ಕರವಸೂಲಿಗಾರರು, ಕ್ಲರ್ಕ್ ಕಂ ಡೇಟಾ ಎಂಟ್ರಿ ಆಪರೇಟ‌ರ್, ವಾಟರ್ ಆಪರೇಟ‌ರ್, ಸ್ವಚ್ಛತಾಗಾರರು, ಅಟೆಂಡ‌ರ್ ಸೇರಿದಂತೆ 18,672 ಸಿಬ್ಬಂದಿ ನೇಮಕಗೊಂಡು ನಾನಾ ಕಾರಣಗಳಿಗಾಗಿ ಅನುಮೋದನೆ ಸಿಕ್ಕಿರಲಿಲ್ಲ. ಈ ಪೈಕಿ 11,543 ಸಿಬ್ಬಂದಿ ಕನಿಷ್ಟ ವಿದ್ಯಾರ್ಹತೆ ಹೊಂದಿಲ್ಲ ಎಂಬ ಕಾರಣ ನೀಡಲಾಗಿತ್ತು. ಹೀಗಾಗಿ ಇದೀಗ ಸರ್ಕಾರವ ಈ ಸಿಬ್ಬಂದಿಗಳಿಗೆ ಸೇವಾ ಭದ್ರತೆಯನ್ನು ನೀಡಲು ಮುಂದಾಗಿದೆ.

ಇದನ್ನೂ ಓದಿ: ಸದ್ಯದಲ್ಲೇ 6 ಮತ್ತು 7ನೇ ವೇತನ ಆಯೋಗದನ್ವಯ ವೇತನ, ಹಿಂಬಾಕಿ ಪಾವತಿ – ಹೈಕೋರ್ಟ್ ನಿಂದ ಮಹತ್ವದ ಆದೇಶ !!