U.T Khader: ಸ್ಪೀಕರ್ ಸ್ಥಾನದ ಕುರಿತು ಜಮೀರ್ ಅಹ್ಮದ್ ಖಾನ್ ಹೇಳಿಕೆ: ಸ್ಪೀಕರ್ ಯು. ಟಿ ಖಾದರ್ ಕೊಟ್ರು ಶಾಕಿಂಗ್ ಹೇಳಿಕೆ!!

Muslim speaker row u.t khader remarks on speaker position for Congress leader zameer Khan

Share the Article

U.T Khader: ಸ್ಪೀಕರ್ ಸ್ಥಾನವನ್ನು ರಾಜಕೀಯ, ಜಾತಿ ಧರ್ಮದಿಂದ ನೋಡುವಂತಿಲ್ಲ ಎಂದು ಸ್ಪೀಕರ್ ಯು.ಟಿ ಖಾದರ್(U.T Khader) ಹೇಳಿದ್ದಾರೆ. ತೆಲಂಗಾಣದಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಸಂದರ್ಭ ಜಮೀರ್ ಅಹ್ಮದ್ ಖಾನ್ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸ್ಪೀಕರ್ ಸ್ಥಾನದ ಬಗ್ಗೆ ಜಮೀರ್ ಅವರ ಹೇಳಿಕೆ ಪ್ರತಿಕ್ರಿಯೆ ನೀಡಿರುವ ಸ್ಪೀಕರ್ ಯು.ಟಿ.ಖಾದರ್ ಈ ಕುರಿತು ಮಾತನಾಡಿದ್ದು, ನಾನು ಯಾರ ಹೇಳಿಕೆಗೂ ಪ್ರತಿಕ್ರಿಯೆ ನೀಡುವುದಿಲ್ಲ. ಜಾತಿ, ಧರ್ಮದ ಆಧಾರದಲ್ಲಿ ಯಾರು ಆ ಪೀಠದಲ್ಲಿ ನನ್ನನ್ನು ಕೂರಿಸಿಲ್ಲ. ಅರ್ಹತೆಗೆ ಅನುಸಾರವಾಗಿ ಸಂವಿಧಾನ ಬದ್ಧವಾಗಿ ಕೆಲಸ ನಿರ್ವಹಿಸುವ ವಿಶ್ವಾಸದಿಂದ ಆ ಸ್ಥಾನಕ್ಕೆ ಕೂರಿಸಿದ್ದಾರೆ. ನಾನು ಎಲ್ಲರಿಗೂ ಗೌರವ ಕೊಟ್ಟು ಗೌರವ ಪಡೆಯುತ್ತೇನೆ. ಎಲ್ಲರ ಸ್ಪೀಕರ್ ಆಗಿ ಕೆಲಸ ನಿರ್ವಹಿಸುತ್ತೇನೆ. ಸ್ಪೀಕರ್ ಸ್ಥಾನವನ್ನು ಜಾತಿ ಧರ್ಮ ಬಿಟ್ಟು ನೋಡಬೇಕು ಎಂದು ತಿಳಿಸಿದರು.

ಎಲ್ಲವನ್ನು ಕೂಡ ಮೆಟ್ಟಿ ನಿಂತು ನೋಡಬೇಕಾದ ಸಂವಿಧಾನ ಬದ್ಧವಾದ ಸ್ಥಾನ ಇದಾಗಿದ್ದು, ನನಗೆ ಗೌರವ ಕೊಡುವುದು ಯು.ಟಿ ಖಾದರ್ ಗೆ ಗೌರವ ನೀಡುವುದಲ್ಲ ಬದಲಿಗೆ ಸಂವಿಧಾನ ಪೀಠಕ್ಕೆ ಮತ್ತು ಸಭಾಧ್ಯಕ್ಷ ಸ್ಥಾನಕ್ಕೆ ನೀಡುವ ಗೌರವವಾಗಿದೆ. ಆ ಸ್ಥಾನದಲ್ಲಿ ಕೂರುವ ನಾವು ಆ ಗೌರವ ಉಳಿಸುವ ಕೆಲಸ ಮಾಡಬೇಕು ಎಂದು ಇದೇ ವೇಳೆ ಸ್ಪೀಕರ್ ಯು ಟಿ. ಖಾದರ್ ಹೇಳಿದ್ದಾರೆ.

ಇದನ್ನು ಓದಿ: Mitchell Marsh World Cup Viral Photo: ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟು ಫೋಸ್ ಕೊಟ್ಟ ಮಾರ್ಷ್: ಆಟಗಾರನಿಗೆ ಭಾರತೀಯರಿಂದ ಖಡಕ್ ಕ್ಲಾಸ್!

Leave A Reply

Your email address will not be published.