Fire accident: ಮೀನುಗಾರಿಕಾ ಬಂದರಿನಲ್ಲಿ 40 ಬೋಟ್ ಗಳು ಬೆಂಕಿಗಾಹುತಿ!! ಬೆಂಕಿ ಕಾಣಿಸಿಕೊಳ್ಳಲು ಕಾರಣ?!

Share the Article

Fire Accident: ವಿಶಾಖಪಟ್ಟಣಂನಲ್ಲಿ ಮೀನುಗಾರಿಕಾ ಬಂದರಿನಲ್ಲಿ ಉಂಟಾದ ಭಾರೀ ಅಗ್ನಿ ಅವಘಡದ (Accidental Fire)ಪರಿಣಾಮ 40ಕ್ಕೂ ಹೆಚ್ಚು ಬೋಟ್ಗಳು(Boat)ಸಂಪೂರ್ಣವಾಗಿ ಸುಟ್ಟು ಕರಕಲು (Fire Incident) ಆಗಿರುವ ಘಟನೆ ವರದಿಯಾಗಿದೆ.

ವಿಶಾಖಪಟ್ಟಣಂನ ಮೀನುಗಾರಿಕಾ ಬಂದರಿನಲ್ಲಿ ನಿನ್ನೆ ಮಧ್ಯರಾತ್ರಿ ಸುಮಾರಿಗೆ 40 ಫೈಬರ್-ಯಾಂತ್ರೀಕೃತ ದೋಣಿಗಳಿಗೆ ಬೆಂಕಿ ವ್ಯಾಪಿಸಿದೆ ಎನ್ನಲಾಗಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣಂನ ಮೀನುಗಾರಿಕಾ ಬಂದರಿನಲ್ಲಿ ಈ ಭಾರೀ ಅಗ್ನಿ ಅವಘಡ ಸಂಭವಿಸಿದ ಪರಿಣಾಮ, ಒಂದು ದೋಣಿಯಿಂದ ಬೆಂಕಿ ಹೊತ್ತಿಕೊಂಡು 40 ದೋಣಿಗಳಿಗೆ ಬೆಂಕಿ ವ್ಯಾಪಿಸಿ ಸುಟ್ಟು ಕರಕಲಾಗಿದೆ. ಈ ಕುರಿತು ಮಾಹಿತಿ ತಿಳಿದು, ಪೊಲೀಸರು ಮತ್ತು ಅಗ್ನಿಶಾಮಕ ದಳದವರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಂಡು ಬೆಂಕಿಯನ್ನು ನಿಯಂತ್ರಿಸಲು ಕ್ರಮ ಕೈಗೊಂಡಿದ್ದಾರೆ. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಇಲ್ಲವೇ ಗಾಯದ ಬಗ್ಗೆ ಯಾವುದೇ ಇನ್ನೂ ಮಾಹಿತಿ ಲಭ್ಯವಾಗಿಲ್ಲ.

Love Affair: ಪಾಠ ಹೇಳಿಕೊಡೋ ಶಿಕ್ಷಕಿ, ವಿದ್ಯಾರ್ಥಿ ಜೊತೆಗೆ ಲವ್ ಅಫೇರ್ ಸ್ಟೋರಿ ! ಇಲ್ಲಿದೆ ಮತಾಂತರದ ಮಾಸ್ಟರ್ ಟ್ವಿಸ್ಟ್

ಬಲ್ಲ ಮೂಲಗಳ ಪ್ರಕಾರ ಕೆಲವು ಕಿಡಿಗೇಡಿಗಳು ದೋಣಿಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಮೀನುಗಾರರು ಅನುಮಾನ ವ್ಯಕ್ತಪಡಿಸಿದ್ದಾರೆ. ಬಂದರಿನಲ್ಲಿರುವ ಮೀನುಗಾರಿಕಾ ದೋಣಿಗಳಿಗೆ ಬೆಂಕಿ ಹತ್ತಿ ಉರಿಯುತ್ತಿರುವ ಆಘಾತಕಾರಿ ದೃಶ್ಯಗಳು ಮತ್ತು ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿರುವ ದೃಶ್ಯಗಳು ಮೊಬೈಲ್ನಲ್ಲಿ ಸೆರೆ ಹಿಡಿಯಲಾಗಿದ್ದು, ಈ ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಈ ಬೆಂಕಿ ಅವಘಡದ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ ಎಂದು ಡಿಸಿಪಿ ಆನಂದರೆಡ್ಡಿ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

 

ಇದನ್ನು ಓದಿ: Egg price: ಗ್ರಾಹಕರಿಗೆ ತಟ್ಟಿದ ಬೆಲೆ ಏರಿಕೆಯ ಬಿಸಿ; ಮೊಟ್ಟೆ ದರದಲ್ಲಿ ಬೆಲೆ ಏರಿಕೆ!!!

Leave A Reply