BBK 10: ಮುಂಡಾಮೋಚ್ತು, ಪುಟುಗೋಸಿ, ಪಿಂಡ ಎನ್ನುತ್ತಲೇ ಬಲಗಾಲಿಟ್ಟು ದೊಡ್ಮನೆಗೆ ಬಂದ ಬ್ರಹ್ಮಾಂಡ ಗುರೂಜಿ! ಯಾರಿಗೆ ಕಾದಿದೆ ಗಂಡಾಂತರ???
BBK 10: ಕಲರ್ಸ್ ಕನ್ನಡ ವಾಹಿನಿ ಮನರಂಜನೆಯ ರಸದೌತಣ ಬಡಿಸುವ ಕಾರ್ಯಕ್ರಮಗಳ ಮೂಲಕ ಜನಮಾನಸದಲ್ಲಿ ವಿಶೇಷ ಸ್ಥಾನ ಪಡೆದಿದೆ. ಕರ್ನಾಟಕದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 10 (Bigg Boss Kannada season 10)ಈಗಾಗಲೇ ಆರಂಭವಾಗಿ ತಿಂಗಳುಗಳೇ ಕಳೆದಿವೆ. ಸ್ಪರ್ಧಿಗಳ ನಡುವೆ ಜಗಳ , ಗಲಾಟೆ, ಮಾತಿನ ಚಕಮಕಿ ನಡುವೆ ಆಟಗಳು ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಈ ನಡುವೆ, ‘ಬಿಗ್ ಬಾಸ್ ಕನ್ನಡ’ ರಿಯಾಲಿಟಿ ಶೋಗೆ ಗೆಸ್ಟ್ ಒಬ್ಬರು ಎಂಟ್ರಿ ಕೊಟ್ಟು ಸ್ಪರ್ಧಿಗಳಿಗೆ ಶಾಕ್ ನೀಡಿದ್ದಾರೆ.
ಬಿಗ್ ಬಾಸ್ ಮನೆಗೆ ನಟಿ ತಾರಾ, ನಿರೂಪಕಿ ಸುಷ್ಮಾ ಸೇರಿದಂತೆ ಈಗಾಗಲೇ ಅನೇಕ ಅತಿಥಿಗಳು ಆಗಮಿಸಿದ್ದಾರೆ. ಇದೀಗ, ಬಿಗ್ ಬಾಸ್ (BBK 10) ಮನೆಗೆ ಬ್ರಹ್ಮಾಂಡ ಗುರೂಜಿ (Brahmanda Guruji) ಎಂದೇ ಪ್ರಖ್ಯಾತಿ ಪಡೆದಿರುವ ನರೇಂದ್ರ ಬಾಬು ಶರ್ಮಾ ಅವರು ಎಂಟ್ರಿ ನೀಡಿದ್ದಾರೆ. ಅಷ್ಟಕ್ಕೂ ಬ್ರಹ್ಮಾಂಡ ಗುರೂಜಿ ದೊಡ್ಮನೆಗೆ (Bigg Boss Kannada)ಫಸ್ಟ್ ಟೈಮ್ ಹೋಗುತ್ತಿರುವುದಲ್ಲ.ಮೊದಲ ಸೀಸನ್ ನಲ್ಲಿ ಇವರು ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಯಲ್ಲಿ ಭಾಗಿಯಾಗಿ ಮೂರನೇ ರನ್ನರ್ಅಪ್ ಆಗಿದ್ದು ನೆನಪಿರಬಹುದು.
ಏಕಏಕಿ ಬ್ರಹ್ಮಾಂಡ ಗುರೂಜಿ ದೊಡ್ಮನೆಗೆ ಎಂಟ್ರಿ ನೀಡಿದ್ದು ನೋಡಿ ಸ್ಪರ್ಧಿಗಳು ಶಾಕ್ ಆಗಿದ್ದಾರೆ. ‘ಕಲರ್ಸ್ ಕನ್ನಡ’ ವಾಹಿನಿ ಪ್ರೋಮೋ ಹಂಚಿಕೊಂಡಿದ್ದು, ಗುರೂಜಿ ಮನೆಯ ಸದಸ್ಯರ ಜೊತೆಗೆ ಸಂಭಾಷಣೆಯಲ್ಲಿ ತೊಡಗಿದ್ದು, ಅದರಲ್ಲಿಯು ‘ಮುಂಡಾಮುಚ್ತು’ ಎಂಬ ಅವರ ಫೇಮಸ್ ಡೈಲಾಗ್ ಕೂಡ ಕೇಳಿಬಂದಿದೆ.
ಇದನ್ನು ಓದಿ: Crime News: ಹಸೆಮಣೆ ಏರಬೇಕಿದ್ದ ಯುವತಿ, ಆತ್ಮಹತ್ಯೆಗೆ ಶರಣು! 10 ವರ್ಷದ ಪ್ರೀತಿ, ಮದುವೆಗೆ ಎರಡು ದಿನ ಇರುವಾಗ ದುರಂತ ಅಂತ್ಯ!