Crime News: ಹಸೆಮಣೆ ಏರಬೇಕಿದ್ದ ಯುವತಿ, ಆತ್ಮಹತ್ಯೆಗೆ ಶರಣು! 10 ವರ್ಷದ ಪ್ರೀತಿ, ಮದುವೆಗೆ ಎರಡು ದಿನ ಇರುವಾಗ ದುರಂತ ಅಂತ್ಯ!

Share the Article

ಕಳೆದ ಹತ್ತು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದ ಜೋಡಿಯೊಂದಕ್ಕೆ ಕಂಕಣ ಭಾಗ್ಯ ಕೂಡಿ ಬಂದಿದ್ದು, ಇನ್ನೇನು ಮದುವೆಯಾಗಬೇಕು ಎನ್ನುವಷ್ಟರಲ್ಲಿ ದುರಂತವೊಂದು ನಡೆದಿದೆ. ಮದುವೆಗೆ ಎರಡೇ ದಿನ ಇದೆ ಎನ್ನುವಾಗ ವಧು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆಯೊಂದು ವಿಜಯನಗರ ಟಿವಿ ಕಾಲೊನಿಯಲ್ಲಿ ನಡೆದಿದೆ.

ಐಶ್ವರ್ಯ ಎಂಬ ಯುವತಿಯೇ ಆತ್ಮಹತ್ಯೆಗೆ ಶರಣಾದಾಕೆ. ಐಶ್ವರ್ಯ ಹಾಗೂ ಅಶೋಕ್‌ ಅವರು ಹತ್ತು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಅಂತರ್ಜಾತಿ ವಿವಾಹವಾದರೂ ಹತ್ತು ವರ್ಷಗಳಿಂದ ಪ್ರೀತಿಸುತ್ತಿದ್ದ ಕಾರಣಕ್ಕೆ ಮನೆಯಲ್ಲಿ ವಿವಾಹಕ್ಕೆ ಒಪ್ಪಿಗೆ ನೀಡಿದ್ದರು. ಮದುವೆ ಶಾಸ್ತ್ರಕ್ಕೆಂದು ವರನ ಮನೆಗೆ ಹೋದ ವಧು ನೇಣಿಗೆ ಶರಣಾಗಿದ್ದಾಳೆ ಎನ್ನಲಾಗಿದೆ.

ನಮ್ಮ ಸಂಪ್ರದಾಯಕ್ಕೆ ಹೊಂದುವುದಿಲ್ಲ ಎಂದು ನಾನೇ ಮಗಳಿಗೆ ಹೇಳಿದ್ದೆ. ಆದರೆ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರೆಂಬ ಕಾರಣಕ್ಕೆ ಒಪ್ಪಿಗೆ ನೀಡಿದ್ದೆವು. ವರನ ಕಡೆಯವರು ನಾವೇ ಮದುವೆ ಮಾಡುತ್ತೇವೆ, ವಧುವಿನ ಕಡೆಯವರು ಬರುವುದು ಬೇಡ ಎಂದು ಕಂಡಿಷನ್‌ ಹಾಕಿದ್ದರು. ಈಗ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಎರಡು ಮೂರು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಬದುಕಿಲ್ಲ ಎನ್ನುತ್ತಿದ್ದಾರೆ. ಮಗಳು ತುಂಬಾ ಧೈರ್ಯವಂತೆ, ಆದರೆ ಈ ಸಾವು ಹಲವು ಅನುಮಾನ ತಂದಿದೆ. ಮಗಳ ಸಾವಿನ ಕುರಿತು ಸೂಕ್ತ ತನಿಖೆಯಾಗಬೇಕು ಎಂದು ಐಶ್ವರ್ಯ ತಂದೆ ದೂರು ನೀಡಿದ್ದಾರೆ.

Leave A Reply