Small Savings Schemes: ಸರ್ಕಾರದ ಈ ಸಣ್ಣ ಉಳಿತಾಯ ಯೋಜನೆಗಳ ನಿಯಮದಲ್ಲಿ ಬದಲಾವಣೆ!!
Rules changes in small Saving schemes latest updates
Small Savings Schemes: ಸಾಮಾನ್ಯವಾಗಿ ಪ್ರತಿಯೊಬ್ಬರು ಯಾವುದಾದರೂ ಒಂದು ಕ್ಷೇತ್ರದಲ್ಲಿ ಹೂಡಿಕೆ ಮಾಡೋದು ಸಹಜ. ಈ ನಡುವೆ ಸರ್ಕಾರ ವಿವಿಧ ಸಣ್ಣ ಉಳಿತಾಯ ಯೋಜನೆಗಳ (small savings schemes) ಮೂಲಕ ನೆರವಾಗುತ್ತಿದೆ. ಹಣಕಾಸು ಸಚಿವಾಲಯದಡಿಗೆ ಬರುವ ಆರ್ಥಿಕ ವ್ಯವಹಾರಗಳ ಇಲಾಖೆ ಈ ಸಣ್ಣ ಉಳಿತಾಯ ಯೋಜನೆಗಳನ್ನು ನಿರ್ವಹಣೆ ಮಾಡಲಾಗುತ್ತದೆ. ಸಣ್ಣ ಉಳಿತಾಯ ಯೋಜನೆಗಳಲ್ಲಿ ಮೂರು ಯೋಜನೆಗಳಲ್ಲಿ ನಿಯಮಗಳನ್ನು ಸಡಿಲಿಸಲಾಗಿದೆ. ನವೆಂಬರ್ 9ರಂದು ಹೊರಡಿಸಲಾದ ಅಧಿಸೂಚನೆಯಲ್ಲಿ ಈ ಸ್ಕೀಮ್ಗಳಿಗೆ ಬದಲಾವಣೆ (rules changes) ತರಲಾಗಿದೆ.
# ಪೋಸ್ಟ್ ಆಫೀಸ್ ಸೇವಿಂಗ್ಸ್ ಅಕೌಂಟ್ನಲ್ಲಿ ನಿಯಮ ಬದಲಾವಣೆ
ಅಂಚೆ ಕಚೇರಿ ಉಳಿತಾಯ ಖಾತೆಗಳು ಒಂದರಿಂದ ಐದು ವರ್ಷದವರೆಗಿನ ವಿವಿಧ ಅವದಿ ಠೇವಣಿಯ ಆಯ್ಕೆಗಳಿದೆ. ಹೊಸ ನಿಯಮದ ಪ್ರಕಾರ ಐದು ವರ್ಷದ ಯೋಜನೆಗೆ ಇರುವ ಬಡ್ಡಿಯೇ ಈ ಪ್ರೀಮೆಚ್ಯೂರ್ ವಿತ್ಡ್ರಾಯಲ್ ಮೊತ್ತಕ್ಕೆ ಅನ್ವಯವಾಗಲಿದೆ.
# ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ನಿಯಮ ಬದಲಾವಣೆ
ನಿವೃತ್ತಿ ಹೊಂದಿದ ಬಳಿಕ ಹಣವನ್ನು ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್ನಲ್ಲಿ ಒಂದು ತಿಂಗಳೊಳಗೆ ಹೂಡಿಕೆ ಮಾಡಿ ಖಾತೆ ತೆರೆಯಬೇಕೆಂಬ ನಿಯಮವನ್ನು ಸಡಿಲಿಸಲಾಗಿದೆ. ಈಗ ರಿಟೈರ್ಮೆಂಟ್ ಹಣ ಬಂದ 3 ತಿಂಗಳವರೆಗೂ ಎಸ್ಸಿಎಸ್ಎಸ್ ಖಾತೆ ತೆರೆಯಲು ಅನುವು ಮಾಡಿಕೊಡಲಾಗಿದೆ.
# ಖಾತೆದಾರ ಅಥವಾ ಅವಲಂಬಿತರಿಗೆ ಮಾರಕ ಕಾಯಿಲೆ ಬಂದಿದ್ದರೆ
ಖಾತೆದಾರ ಅಥವಾ ಅವಲಂಬಿತರಿಗೆ ಮಾರಕ ಕಾಯಿಲೆ ಬಂದಿದ್ದರೆ ಪಿಪಿಎಫ್ ಹಣವನ್ನು ಮೆಚ್ಯೂರಿಟಿಗೆ ಮುನ್ನ ವಿತ್ ಡ್ರಾ ಮಾಡಿಕೊಳ್ಳಬಹುದು. ಆದರೆ, ಆ ಕಾರಣಗಳಿಗೆ ಸೂಕ್ತವಾದ ದಾಖಲೆಗಳನ್ನು ನೀಡಬೇಕಾಗುತ್ತದೆ.
# ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಸ್ಕೀಮ್ನಲ್ಲಿ ನಿಯಮ ಬದಲಾವಣೆ
ಪಬ್ಲಿಕ್ ಪ್ರಾವಿಡೆಂಟ್ ಫಂಡ್ನ ಅವಧಿ ಮುಂಚಿನ ಹಣ ಹಿಂಪಡೆಯುವಿಕೆಯ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ. ಪಿಪಿಎಫ್ ಮೆಚ್ಯೂರಿಟಿ ಅವಧಿಗೆ ಮೊದಲು ಒಬ್ಬ ಖಾತೆದಾರ ಮೂರು ಕಾರಣಗಳಿಗೆ ಹಣ ವಿತ್ಡ್ರಾ ಮಾಡಲು ಅವಕಾಶವಿದೆ.
ಇದನ್ನು ಓದಿ: Destroyed Pomegranate Trees: ರಾತ್ರೋ ರಾತ್ರಿ 200ಕ್ಕೂ ಹೆಚ್ಚು ದಾಳಿಂಬೆ ಗಿಡ ಧ್ವಂಸ ಮಾಡಿದ ಕಿಡಿಗೇಡಿಗಳು!