Elephant Attack : ಹಾಸನದ ಬೇಲೂರಲ್ಲಿ 20ಕ್ಕು ಅಧಿಕ ಗಜಪಡೆಗಳ ಜಾಲಿ ರೈಡ್! ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ!!

Hassan news elephant attack into coffee plant and drinks water at pond in beluru latest news

Hassan Elephant Attack : ಹಾಸನದ ಬೇಲೂರು ಬಳಿ ಆನೆಗಳ ದೊಡ್ಡ ಹಿಂಡು ಕಾಫಿ ತೋಟಕ್ಕೆ ಲಗ್ಗೆ ಇಟ್ಟಿದ್ದು, ಒಮ್ಮೆಲೇ 20ಕ್ಕೂ ಅಧಿಕ ಆನೆಗಳು ಒಂದು ತೋಟಕ್ಕೆ ದಾಳಿ(Hassan Elephant Attack) ನಡೆಸಿವೆ.

ರಾಜ್ಯದಲ್ಲಿ ಆನೆಗಳ ಹಾವಳಿ (Elephant Menace) ಎಲ್ಲೇ ಮೀರಿದ್ದು, ಈ ನಡುವೆ, ಹಾಸನ ಜಿಲ್ಲೆಯ ಒಂದು ಕಡೆ ಆನೆಗಳ ದೊಡ್ಡ ಹಿಂಡೇ ಕಾಫಿ ತೋಟಕ್ಕೆ ದಾಳಿ ನಡೆಸಿದೆ. ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಬಿಕ್ಕೋಡು ಗ್ರಾಮದ ಕಾಫಿ ತೋಟದಲ್ಲಿ ಜಾಲಿಯಾಗಿ ಕಾಫಿ ತೋಟದಲ್ಲಿರುವ ನೀರಿನ‌ ಹೊಂಡದಲ್ಲಿ ನೀರು ಕುಡಿದು ದಣಿವಾರಿಸುತ್ತಿರುವ ಕಾಡಾನೆಗಳ ದಂಡಿನ ವಿಡಿಯೊ ವೈರಲ್ ಆಗಿದೆ.

ಹಾಡುಹಗಲೇ ರಸ್ತೆಗಳಲ್ಲಿ ದರ್ಶನ ನೀಡುತ್ತಿರುವ ಆನೆಗಳ ಹಿಂಡು ಕಂಡು ಗ್ರಾಮಸ್ಥರು ಗಾಬರಿಗೊಂಡಿದ್ದಾರೆ. ಈ ಆನೆಗಳ ಗುಂಪಿನಲ್ಲಿ 20ಕ್ಕೂ ಹೆಚ್ಚು ಆನೆಗಳಿದ್ದು, ಅದರಲ್ಲಿ ಹತ್ತಕ್ಕೂ ಹೆಚ್ಚು ಮರಿಯಾನೆಗಳು ಅವೆಲ್ಲವೂ ಕೆರೆಯ ಒಂದು ಬದಿಯಲ್ಲಿ ಸಾಲಾಗಿ ನಿಂತು ಸೊಂಡಿಲಿನಿಂದ ನೀರೆತ್ತಿ ಕುಡಿಯುವ ದೃಶ್ಯ ನೋಡುಗರ ಗಮನ ಸೆಳೆದಿದೆ. ಇದೆಲ್ಲದರ ನಡುವೆ, ತಂಡೋಪ ತಂಡವಾಗಿ ದರ್ಶನ ನೀಡುತ್ತಿರುವ ಗಜಪಡೆ ಏನೆಲ್ಲ ರಾದ್ದಂತ ಮಾಡಲಿದೆಯೋ ಎಂದು ಗ್ರಾಮಸ್ಥರಿಗೆ ಆತಂಕ ಮೂಡಿಸಿದೆ.

ಇದನ್ನೂ ಓದಿ: Rajasthan Accident: ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಐವರು ಪೊಲೀಸ್ ಅಧಿಕಾರಿಗಳು ಮೃತ್ಯು!

Leave A Reply

Your email address will not be published.