Mansoor Ali Khan: ಲಿಯೋದಲ್ಲಿ ರೇಪ್ ಸೀನ್ ಇರಬೇಕಿತ್ತು’ ಎಂದ ಮನ್ಸೂರ್ ಅಲಿ ಖಾನ್: ತಮಿಳು ನಟನ ಹೇಳಿಕೆಗೆ ತ್ರಿಷಾ ಗರಂ!

Actress Trisha Krishnan slams actor Mansoor Ali Khan for vulgar comments

Mansoor Ali Khan: ದಳಪತಿ ವಿಜಯ್ ನಟಿಸಿರುವ ಮತ್ತು ಲೋಕೇಶ್ ಕನಕರಾಜ್ ನಿರ್ದೇಶನದ ತಮಿಳಿನ ಆಕ್ಷನ್-ಪ್ಯಾಕ್ಡ್ ಥ್ರಿಲ್ಲರ್ ಲಿಯೋ ಬಾಕ್ಸ್ ಆಫೀಸ್‌ನಲ್ಲಿ ಹಲವು ದಾಖಲೆಗಳನ್ನು ಸೃಷ್ಟಿ ಮಾಡಿದೆ. ತಮಿಳು ಚಿತ್ರ ‘ಲಿಯೋ’ ಸದ್ಯ ಬಾಕ್ಸಾಫೀಸಿನಲ್ಲಿ ಕೋಟಿ ಕೋಟಿ ಗಳಿಕೆ ಮಾಡುತ್ತಿದ್ದು, ನಟ ವಿಜಯ್‌ ಹೀರೋ ಆಗಿ ನಟಿಸಿರುವ ಚಿತ್ರದಲ್ಲಿ ತ್ರಿಶಾ ಹೀರೋಯಿನ್ ಆಗಿದ್ದಾರೆ. ತಮಿಳು ಚಿತ್ರರಂಗದ ವಿವಾದಾತ್ಮಕ ನಟ ಮನ್ಸೂರ್ ಅಲಿ ಖಾನ್ ಸದ್ಯ ನಟಿ ತ್ರಿಶಾ (Actress Trisha Krishnan)ಬಗ್ಗೆ ಆಡಿರುವ ಮಾತು ಎಲ್ಲೆಡೆ ವೈರಲ್ ಆಗಿದೆ.

 

ಇತ್ತೀಚೆಗೆ ಮಾಧ್ಯಮಗಳಿಗೆ ತ್ರಿಶಾ ಮತ್ತು ಮನ್ಸೂರ್ (Mansoor Ali Khan)ಅವರು ಲೋಕೇಶ್ ಕನಕರಾಜ್ ಅವರ ಇತ್ತೀಚಿನ ಹಿಟ್ ಸಿನಿಮಾ ಲಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ತ್ರಿಶಾ ಹೀರೋಯಿನ್ ಆಗಿ ನಟಿಸಿದ್ದು, ಮನ್ಸೂರ್ ಆಲಿ ಖಾನ್ ವಿಲನ್ ಆಗಿ ನಟಿಸಿದ್ದಾರೆ. ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮನ್ಸೂರ್ ಆಲಿ ಖಾನ್‌, ‘ನಾನು ತ್ರಿಶಾ ಜೊತೆ ಅವರೊಂದಿಗೆ ನಟಿಸುತ್ತೇನೆ ಎಂದು ತಿಳಿದಾಗ ಆ ಸಿನಿಮಾದಲ್ಲಿ ಬೆಡ್‌ ರೂಮ್ ಸೀನ್ ಇರುತ್ತೆ ಎಂದು ನಾನು ಭಾವಿಸಿದ್ದೆ ಎಂದುಕೊಂಡಿದ್ದೆ. ಆಕೆಯನ್ನು ಎತ್ತಿಕೊಂಡು ಬೆಡ್ ರೂಮ್ ಒಳಗೆ ಹೋಗುತ್ತೇನೆ ಎಂದು ಕೂಡ ಅಂದುಕೊಂಡಿದ್ದೆ.

ಈ ಹಿಂದಿನ ಸಿನಿಮಾಗಳಲ್ಲಿ ಬೇರೆ ನಟಿಯರನ್ನು ಎತ್ತಿಕೊಂಡು ಬೆಡ್‌ ರೂಮ್‌ ಒಳಗೆ ಹೋಗುವ ದೃಶ್ಯವಿತ್ತು. ನಾನು ಬೇಕಾದಷ್ಟು ರೇಪ್ ಸೀನ್‌ಗಳಲ್ಲಿ ನಟಿಸಿದ್ದೇನೆ. ಇದು ನನಗೆ ಹೊಸದೇನು ಆಗಿರಲಿಲ್ಲ. ಆದರೆ ಈ ಸಿನಿಮಾದಲ್ಲಿ ಆ ರೀತಿಯ ದೃಶ್ಯವಿರಲಿಲ್ಲ. ಇವರು ಕಾಶ್ಮೀರದಲ್ಲಿ ಶೂಟ್ ಮಾಡುವಾಗ ಆಕೆಯನ್ನು ತೋರಿಸಲಿಲ್ಲ’ ಎಂದು ನಟ ಮನ್ಸೂರ್ ಅಲಿ ಖಾನ್ ಹೇಳಿಕೊಂಡಿದ್ದಾರೆ.ಮನ್ಸೂರ್ ಅಲಿ ಖಾನ್ ಕೊಟ್ಟ ಈ ಹೇಳಿಕೆ ಸದ್ಯ, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ಹೇಳಿಕೆಯ ಕುರಿತಂತೆ ನಟಿ ತ್ರಿಶಾ, ಲಿಯೋ ನಿರ್ದೇಶಕ ಲೋಕೇಶ್ ಕನಗರಾಜ್ ಖಂಡಿಸಿದ್ದಾರೆ. ಮನ್ಸೂರ್‌ ಆಲಿ ಖಾನ್‌ರವರನ್ನು ತ್ರಿಷಾ ಅವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಇತ್ತೀಚಿಗೆ ವೈರಲ್ ಆದ ವೀಡಿಯೋವೊಂದು ವೈರಲ್ ಆಗಿದೆ. ಮನ್ಸೂರ್ ಅಲಿ ಖಾನ್ ಅವರು ನನ್ನ ಬಗ್ಗೆ ಅಸಹ್ಯಕರವಾಗಿ ಮಾತನಾಡಿದ್ದು, ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಇದರ ಬಗ್ಗೆ ಲೈಂಗಿಕತೆ, ಅಗೌರವ, ಸ್ತ್ರೀದ್ವೇಷ, ವಿಕರ್ಷಣ ಮತ್ತು ಕೆಟ್ಟ ಅಭಿರುಚಿಯಾಗಿದೆ. ಇವರ ರೀತಿಯ ವ್ಯಕ್ತಿಯ ಜೊತೆಗೆ ನಟಿಸದೆ ಇದ್ದುದ್ದಕ್ಕೆ ನಾನು ಕೃತಜ್ಞಳಾಗಿದ್ದೇನೆ. ಭವಿಷ್ಯದಲ್ಲಿಯೂ ಕೂಡ ನಾನು ಇಂಥವರ ಜೊತೆಗೆ ನಟಿಸದಂತೆ ಎಚ್ಚರ ವಹಿಸುತ್ತೇನೆ. ಈ ರೀತಿಯ ಜನರು ಮನುಕುಲಕ್ಕೆ ಕೆಟ್ಟ ಹೆಸರು ತರುತ್ತಾರೆ’ ಎಂದು ತ್ರಿಷಾ ಅವರು ಬರೆದುಕೊಂಡಿದ್ದಾರೆ.

 

ಇದನ್ನು ಓದಿ: Water To Tulsi: ಈ ದಿನ ತುಳಸಿ ಗಿಡಕ್ಕೆ ನೀರನ್ನು ನೀಡದಿರಿ! ಯಾಕೆ ಗೊತ್ತಾ?

Leave A Reply

Your email address will not be published.