Udupi Crime News: ನೇಜಾರಿನಲ್ಲಿ ಒಂದೇ ಕುಟುಂಬದ ಹತ್ಯೆ ಪ್ರಕರಣ; ಕೊಲೆಗೆ ವೃತ್ತಿ ತರಬೇತಿಯನ್ನು ಬಳಸಿದ ನರಹಂತಕ ಪ್ರವೀಣ್ ಚೌಗಲೆ !
Udupi 4 members in same family murder case accused Praveen Chowgale used training for murder
Udupi Crime News: ಒಂದೇ ಕುಟುಂಬದ ಹತ್ಯೆ ಪ್ರಕರಣಕ್ಕೆ (Udupi Crime News) ಸಂಬಂಧ ಪಟ್ಟಂತೆ ಈಗ ಹೊಸದೊಂದು ಮಾಹಿತಿ ಬೆಳಕಿಗೆ ಬಂದಿದೆ. ಏರ್‌ಇಂಡಿಯಾದಲ್ಲಿ ಪ್ರಯಾಣಿಕರಿಗೆ ಸುರಕ್ಷತೆಯ ಪಾಠ ಹೇಳುತ್ತಿದ್ದವ, ಮಹಾರಾಷ್ಟ್ರ ಪೊಲೀಸ್ ಇಲಾಖೆ ಸಹಿತ ವಿವಿಧೆಡೆ ವೃತ್ತಿ ಮಾಡುತ್ತಿದ್ದ ಸಂದರ್ಭ ಈತ ಹಲವು ರೀತಿಯ ತರಬೇತಿ ಪಡೆದಿದ್ದ. ಇಲ್ಲಿ ಚಾಕು ಪ್ರಯೋಗವೂ ಒಂದು.
ಈ ಹತ್ಯೆಯಲ್ಲಿ ಈತ ಎಲ್ಲರಿಗೂ ಎದೆ ಹಾಗೂ ಹೊಟ್ಟೆಗೆ ಇರಿದಿದ್ದಾನೆ. ದೇಹದಲ್ಲಿ ಹೆಚ್ಚು ರಕ್ತಸ್ರಾವವಾಗುವ ಶರೀರದ ಭಾಗಗಳ ಗುಟ್ಟನ್ನು ಅರಿತು ಈತ ಚಾಕುವಿನಿಂದ ಇರಿದಿದ್ದಾನೆ.
ಈಶ್ವರ ಮಲ್ಪೆ ಅವರು ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮನೆಯೊಳಗೆ ಕಾಲಿಟ್ಟಾಗ ಭಯಭೀತಿ ಉಂಟು ಮಾಡುವ ವಾತಾವರಣವಿತ್ತು. ಇಂತಹ ಘಟನೆ ಎಲ್ಲೂ ನೊಡಿಲ್ಲ ಎಂದು ಹೇಳಿದ್ದಾರೆ. ಅಷ್ಟು ಮಾತ್ರವಲ್ಲದೇ ತುರ್ತು ಸಂದರ್ಭದಲ್ಲಿ ಮನೆಯಲ್ಲಿ ಗೋಡೆಯಲ್ಲಿ ತುರ್ತು ಕರೆಯ ಸಂಖ್ಯೆಗಳನ್ನು ಬರೆದಿಡಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಒಂದೇ ಕುಟುಂಬದ ನಾಲ್ವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡುವ ಸಂದರ್ಭ ಪ್ರವೀಣ್ ಅರುಣ್ ಚೌಗುಲೆಯ ಬಲಗೈಯ ಎರಡು ಬೆರಳುಗಳಿಗೆ ಗಾಯವಾಗಿದೆ. ನಾಲ್ವರಿಗೂ ಚಾಕು ಇರಿದು, ಬಿದ್ದಲ್ಲೇ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ. ಬೊಬ್ಬೆ ಹಾಕಿದರೂ ಹೊರಜಗತ್ತಿಗೆ ಕೇಳಿಸಿಲ್ಲ. ನೆರವಿಗೆ ಯಾರೂ ಬಂದಿರಲಿಲ್ಲ.
ಗಗನಸಖಿಯಾಗಿ ಏರ್‌ಇಂಡಿಯಾ ಎಕ್ಸ್‌ಪ್ರೆಸ್ ಉದ್ಯೋಗಿಯಾಗಿದ್ದ ಅಯ್ನಾಜ್ ಸಹಿತ ನಾಲ್ವರ ಹತ್ಯೆಗೆ ಸಂಬಂಧ ಪಟ್ಟಂತೆ ಸಂಸ್ಥೆಯ ವತಿಯಿಂದ ಯಾರೂ ಸಂಪರ್ಕಿಸಿಲ್ಲ. ಒಂದು ಸಾಂತ್ವನದ ಮಾತನ್ನು ಹೇಳಿಲ್ಲ. ಇಂತಹ ಕ್ರಿಮಿನಲ್ ಮನಸ್ಥಿತಿಯುಳ್ಳವರಿಗೆ ಸಂಸ್ಥೆಗಳು ಕೆಲಸ ಕೊಡಬಾರದು ಎನ್ನುವ ಆಗ್ರಹವನ್ನು ಮೃತ ಅಯ್ನಾಜ್‌ಳ ತಂದೆ ನೂರು ಮಹಮ್ಮದ್ ಹೇಳಿದ್ದಾರೆ.
ಪ್ರವೀಣ್ ಚೌಗುಲೆಗೆ ಮದುವೆಯಾಗಿ ಎರಡು ಮಕ್ಕಳಿದ್ದರೂ ಆತ ತನಗಿಂತ ಕಿರಿಯವಳಾದ ಅಯ್ನಾಜ್ ಗೆ ಕಿರುಕುಳ ಕೊಟ್ಟಿದ್ದರಿಂದಲೇ ಆಕೆ ಮೊಬೈಲ್ ನಂಬರ್ ಬ್ಲಾಕ್ ಮಾಡಿರಬಹುದೆಂದು ಸಹೋದ್ ಅಸಾದ್ ಹೇಳಿಕೆ. ಅಸಾದ್ ಪ್ರಕಾರ ಹೆಣ್ಮಕ್ಕಳು ತಾವಿರು ಕೆಲಸದ ಸ್ಥಳದಲ್ಲಿ ಎದುರಾಗುವ ದೌರ್ಜನ್ಯವನ್ನು ಧೈರ್ಯವಾಗಿ ವಿರೋಧಿಸಬೇಕು. ಹೆಲ್ಪ್‌ಲೈನಿಗೆ ದೂರು ನೀಡಬೇಕು. ದೌರ್ಜಯವನ್ನು ಮೆಟ್ಟಿ ನಿಂತು ಉದ್ಯೋಗ ನಿರ್ವಹಿಸಬೇಕಾದ ಸವಾಲು ಎಲ್ಲ ಮನೆಯ ಹೆಣ್ಮಕ್ಕಳಿಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೊಲೆಗೆ ಕಾರಣ ಕೊನೆಗೂ ಬಾಯ್ಬಿಟ್ಟ ನರಹಂತಕ ಪ್ರವೀಣ್ ಚೌಗುಲೆ!