Great Khali: ಎರಡನೇ ಮಗುವಿಗೆ ಜನ್ಮ ನೀಡಿದ ಗ್ರೇಟ್ ಖಲಿ ದಂಪತಿ !! ಗಂಡು ಮಗುವಿಗೆ ತಂದೆಯಾದ WWE ಸ್ಟಾರ್ !!
Sports news Great Khali Welcomes Second Child Wrestling Legend Celebrates Arrival Of Baby Boy


Great Khali: ಭಾರತದ ದೈತ್ಯ, ಅಜಾನುಬಾಹು ಖಾಲಿ(Great Khali)ಬಗ್ಗೆ ತಿಳಿಯದೇ ಇರುವವರು ವಿರಳ.ಡಬ್ಲ್ಯೂಡಬ್ಲ್ಯೂಇ(WWE ) ಪಂದ್ಯಾಟಗಳಲ್ಲಿ ಖ್ಯಾತಿ ಪಡೆದಿರುವ ಈ ವಿಶ್ವವಿಖ್ಯಾತ ರೆಸ್ಟ್ಲರ್ ದಲೀಪ್ ಸಿಂಗ್ ರಾಣಾ ತಮ್ಮ ಅಸಾಧಾರಣ ಎತ್ತರ, ಅದ್ಭುತ ಮೈಕಟ್ಟಿಗಾಗಿ ವಿಶ್ವಪ್ರಸಿದ್ಧಿ ಪಡೆದಿದ್ದಾರೆ.

ದಲೀಪ ಸಿಂಗ್ ರಾಣಾ ಅಲಿಯಾಸ್ ದಿ ಗ್ರೇಟ್ ಖಾಲಿ ವಿಶ್ವಪ್ರಸಿದ್ಧ WWE ಸ್ಪರ್ಧೆಯಲ್ಲಿ ಅದರ ಪ್ರತಿಷ್ಠಿತ ಹೆವಿವೇಟ್ ಚಾಂಪಿಯನ್ ಶಿಪ್ ಗೆದ್ದ ಮೊಟ್ಟ ಮೊದಲ ಭಾರತೀಯ ಎಂಬ ಮನ್ನಣೆಗೆ ಭಾಜನರಾದವರು. ಖಲಿ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಹೌದು!! ಖಲಿ ಎರಡನೇ ಬಾರಿಗೆ ಮಗುವಿನ ತಂದೆಯಾಗಿದ್ದಾರೆ. ಖಲಿ ಅವರು ತಮ್ಮ ಎರಡನೆ ಮಗುವಾದ ಗಂಡು ಮಗುವನ್ನು ಬರ ಮಾಡಿಕೊಂಡಿದ್ದಾರೆ. ಖಲಿ ಅವರಿಗೆ ಈಗಾಗಲೇ ಅವ್ಲೀನ್ ಕೌರ್ ಎಂಬ ಪುತ್ರಿಯಿದ್ದು, ಇದೀಗ ದಂಪತಿಗಳು ಪುತ್ರನನ್ನು ಬರಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಖಾಲಿ ಮನೆಯಲ್ಲಿ ಸಂತಸದ ವಾತಾವರಣ ಸೃಷ್ಟಿಯಾಗಿದೆ.
ಇದನ್ನೂ ಓದಿ:RD ಖಾತೆ ಮಾಡಿಸೋ ಯೋಚನೆ ಉಂಟಾ ? ‘ಪೋಸ್ಟ್ ಆಫೀಸ್’ನಲ್ಲಿ ಸಿಗೋ ಬಡ್ಡಿ ಎಷ್ಟು ಗೊತ್ತಾ?
