Home News ಉಡುಪಿ Udupi murder case: ಕೊಲೆಗೆ ಕಾರಣ ಕೊನೆಗೂ ಬಾಯ್ಬಿಟ್ಟ ನರಹಂತಕ ಪ್ರವೀಣ್ ಚೌಗುಲೆ!

Udupi murder case: ಕೊಲೆಗೆ ಕಾರಣ ಕೊನೆಗೂ ಬಾಯ್ಬಿಟ್ಟ ನರಹಂತಕ ಪ್ರವೀಣ್ ಚೌಗುಲೆ!

Hindu neighbor gifts plot of land

Hindu neighbour gifts land to Muslim journalist

Udupi murder case: ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣ(Udupi murder case)  ಕುರಿತಂತೆ ಪೊಲೀಸ್‌ (Police) ವಿಚಾರಣೆಯ ಸಂದರ್ಭ ಕೊಲೆ ಮಾಡಲು ಕಾರಣ ಏನು ಎಂಬುವುದನ್ನು ಆರೋಪಿ ಪ್ರವೀಣ್‌ ಚೌಗುಲೆ ಬಾಯಿ ಬಿಟ್ಟಿದ್ದಾನೆ ಎಂದು ಟಿವಿ 9 ವರದಿ ಮಾಡಿದೆ.

ಮೃತ ಅಯ್ನಾಹ್‌ ವಿಚಾರದಲ್ಲಿ ಆರೋಪಿ ಪ್ರವೀಣ್‌ ಚೌಗುಲೆ ಬಹಳ ಪಾಸೆಸಿವ್‌ ಆಗಿದ್ದನು. ಅಯ್ನಾಝ್‌ ನನ್ನ ನಿಯಂತ್ರಣದಲ್ಲಿರಬೇಕು ಎಂಬ ವಿಚಿತ್ರ ಮನಸ್ಥಿತಿ ಹೊಂದಿದ್ದನು. ಅಷ್ಟು ಮಾತ್ರವಲ್ಲದೇ, ಆಕೆಯನ್ನು ಅತಿಯಾಗಿ ಹಚ್ಚಿಕೊಂಡಿದ್ದನು. ಅಯ್ನಾಜ್‌ ನನ್ನ ಜೊತೆ ಮಾತ್ರ ಮಾತಾಡಬೇಕು ಎಂಬ ನಿಯಮ ಹಾಕುತ್ತಿದ್ದನು. ನನ್ನ ಜೊತೆ ಮಾತ್ರ ಬೆರೆಯಬೇಕು, ಹೀಗಾಗಿ ಅಸೂಯೆ ಮತ್ತು ದ್ವೇಷದಿಂದ ಅಯ್ನಾಝ್‌ಳನ್ನು ಕೊಲೆ ಮಾಡಲು ನಿರ್ಧರಿಸಿದ್ದನು ಎಂದು ಟಿವಿ9 ಕನ್ನಡ ಪ್ರಕಟಿಸಿದೆ.

ಇನ್ನು ಮೃತ ಕುಟುಂಬದ ಯಜಮಾನ ನೂರ್‌ ಮೊಹಮ್ಮದ್‌ ಅವರು ಉಸ್ತುವಾರಿ ಸಚಿವರು ನಮ್ಮ ಮನವಿ ಸ್ವೀಕಾರ ಮಾಡಿದ್ದಾರೆ. ಬೇಗ ನ್ಯಾಯ ಕೊಡಿಸುವ ವಿಶ್ವಾಸ ನೀಡಿದ್ದಾರೆ. ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲು ಒತ್ತಾಯಿಸಿದ್ದು, ಅಡ್ವಕೇಟ್‌ ಶಿವಪ್ರಸಾದ್‌ ಆಳ್ವ ಅವರನ್ನು ನೇಮಕ ಮಾಡಲು ಒತ್ತಾಯ ಮಾಡಿದ್ದೇವೆ. ಸಹಕಾರ ನೀಡುವ ಕುರಿತು ಆಶ್ವಾಸನೆ ನೀಡಿದ್ದಾರೆ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಕೊಲೆ ಮಾಡಿದ ಕಾರಣವ ಬಿಟ್ಟುಕೊಡದ ನರಹಂತಕ : ತನಿಖೆಯ ಹಾದಿ ತಪ್ಪಿಸುತ್ತಿದ್ದಾನೆ ಪ್ರವೀಣ್ ಚೌಗಲೆ