Flight Delayed: ತಮಾಷೆಗೆಂದು ವಿಮಾನವನ್ನೇ ತಡೆದು ನಿಲ್ಲಿಸಿದ್ರು ಈ ಟೆಕ್ಕಿ ಜೋಡಿ- ಕೊನೆಗೆ ತಗಲಾಕೊಂಡು ಜೈಲು ಪಾಲಾದ್ರು ನೋಡಿ !!

National news Techie couple arrested for bomb hoax at Goa airport indigo flight delayed

Flight Delayed: ಟೆಕ್ಕಿ ಜೋಡಿಯೊಂದು ತಮಾಷೆ ಮಾಡಲು ಹೋಗಿ ಜೈಲು ಪಾಲಾಗಿರುವ ಘಟನೆ ನಡೆದಿದೆ. ಹೌದು, ಗೋವಾದ ಪಣಜಿ ಬಳಿ ಇರುವ ಡಬೊಲಿಮ್‌ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ನಲ್ಲಿ ಭದ್ರತಾ ತಪಾಸಣೆ ವೇಳೆ ತಮ್ಮ ಬ್ಯಾಗ್‌ನಲ್ಲಿ ಬಾಂಬ್ ಇರುವುದಾಗಿ ಜೋಡಿ ಹೇಳಿದ್ದು, ಆದರೆ ತಪಾಸಣೆ ಮಾಡಿದಾಗ ಇದು ಸುಳ್ಳು ಎಂಬುದು ಗೊತ್ತಾಗಿದ್ದು, ಜೋಡಿ ತಮಾಷೆಗಾಗಿ ಹೀಗೆ ಮಾಡಿದ್ದಾಗಿ ಪೊಲೀಸರ ಮುಂದೆ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಜೋಡಿಯನ್ನು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗಳು ಬಂದಿಸಿ ಜೈಲಿಗೆ ಕಳಿಸಿದ್ದಾರೆ.

 

ಮಧ್ಯಪ್ರದೇಶದ 29 ವರ್ಷದ ಅತುಲ್ ಕುಮಾರ್ ಕೆವಟ್ ಹಾಗೂ ಕೋಲ್ಕತ್ತಾ ಮೂಲದ 29 ವರ್ಷದ ತೃತೀಯ ಎಂಬ ಇಬ್ಬರು, ಏರ್‌ಪೋರ್ಟ್‌ನಲ್ಲಿ ಗೋವಾದಿಂದ ಬೆಂಗಳೂರಿಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಭದ್ರತಾ ತಪಾಸಣೆ ವೇಳೆ ಇವರು ಸಿಬ್ಬಂದಿಗೆ ತಮ್ಮ ಬ್ಯಾಗ್‌ನಲ್ಲಿ ಬಾಂಬ್ ಇರುವುದಾಗಿ ಸುಳ್ಳು ಹೇಳಿ ಆತಂಕ ಸೃಷ್ಟಿಸಿದ್ದು ಅಲ್ಲದೇ, ಈ ಕುಚೇಷ್ಟೆಯಿಂದ ವಿಮಾನ ಸುಮಾರು 90 ನಿಮಿಷ ವಿಳಂಬವಾಗಿ (Flight Delayed) ಹೊರಟಿದೆ ಎಂದು ವಾಸ್ಕೋದ ಉಪ ಪೊಲೀಸ್ ವರಿಷ್ಠಾಧಿಕಾರಿ ಸಲೀಂ ಶೇಖ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮಂಗಳವಾರ ರಾತ್ರಿ 11.42 ರ ಸಮಯದಲ್ಲಿ ಈ ಘಟನೆ ನಡೆದಿದ್ದು, ಈ ಜೋಡಿ ವಿಮಾನ ಹತ್ತಲು ಸೆಕ್ಯೂರಿಟಿ ಚೆಕ್‌ ಬಳಿ ನಿಂತಿದ್ದರು. ಕ್ಯೂನಲ್ಲಿ ನಿಂತಿದ್ದ ವೇಳೆ ಅವರಲ್ಲೊಬ್ಬರು ಬ್ಯಾಗ್‌ನಲ್ಲಿ ಬಾಂಬ್ ಇದೆ ಎಂದು ಹೇಳಿದ್ದು, ಜೊತೆಯಲ್ಲಿದ್ದ ಪ್ಯಾಸೆಂಜರೊಬ್ಬರು ಕೂಡಲೇ ಈ ವಿಚಾರವನ್ನು ಭದ್ರತಾ ಸಿಬ್ಬಂದಿಗೆ ತಿಳಿಸಿದ್ದಾರೆ. ನಂತರ ಭದ್ರತಾ ಸಿಬ್ಬಂದಿ ಅವರ ಬ್ಯಾಗನ್ನು ಸಂಪೂರ್ಣವಾಗಿ ಪರೀಕ್ಷಿಸಿದ್ದಾರೆ. ಆದರೆ ಅಲ್ಲಿ ಸಂಶಯ ಆಸ್ಪದವಾಗಿ ಯಾವುದೇ ವಸ್ತುಗಳು ಸಿಕ್ಕಿಲ್ಲ.

ಘಟನೆಗೆ ಸಂಬಂಧಿಸಿದಂತೆ ಈ ಜೋಡಿ ವಿರುದ್ಧ ಪ್ರಕರಣ ದಾಖಲಾಗಿದ್ದು ಏರ್ಪೋರ್ಟ್ ಭದ್ರತಾ ಸಿಬ್ಬಂದಿ ಈ ಜೋಡಿಯನ್ನು ಬಂಧಿಸಿದ್ದಾರೆ. ಅಲ್ಲದೇ ಈ ಜೋಡಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 506ರ ಅಡಿ (ಸಾರ್ವಜನಿಕ ಕುಚೇಷ್ಟೆ) ಪ್ರಕರಣ ದಾಖಲಾಗಿದೆ ಹಾಗೂ ಪೊಲೀಸರಿಂದ ಹೆಚ್ಚಿನ ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ .

ಇದನ್ನೂ ಓದಿ: ತಾಜ್ ಮಹಲ್ ಒಳಗೆ ತಂದೆಗೆ ಹೃದಯಾಘಾತ – ಸ್ಥಳದಲ್ಲೇ ಮರು ಜೀವ ನೀಡಿದ ಮಗ !!

Leave A Reply

Your email address will not be published.