Shivamurthy Murugha Sharanaru: 14 ತಿಂಗಳು ಜೈಲಿನಲ್ಲಿದ್ದ ಮುರುಘಾ ಶ್ರೀ ಬಿಡುಗಡೆ !!

Karnataka district Chitradurga news Murugha seer released from jail after 14 months latest news

Murugha seer released :ಪೋಕ್ಸೋ(pocso) ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಚಿತ್ರದುರ್ಗದ ಡಾ.ಶಿವಮೂರ್ತಿ ಮುರುಘರಾಜೇಂದ್ರ ಶರಣರು(chitradurga swamiji released)ಗುರುವಾರ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

 

14 ತಿಂಗಳ ಹಿಂದೆ ಬಂಧನಕ್ಕೆ ಒಳಗಾಗಿದ್ದ ಸ್ವಾಮೀಜಿ ಅವರಿಗೆ ಕಳೆದ ವಾರವೇ ಹೈಕೋರ್ಟ್‌ ಜಾಮೀನು (Murugha seer released) ನೀಡಿದ್ದರು ಕೂಡ ಮತ್ತೊಂದು ಪ್ರಕರಣದಲ್ಲಿ ಚಿತ್ರದುರ್ಗದಲ್ಲಿ ವಿಚಾರಣೆ ನಡೆದು ಅಲ್ಲಿಯೂ ಜಾಮೀನು ಸಿಕ್ಕಿತ್ತು. ಆದಾಗ್ಯೂ, ಷರತ್ತು ಬದ್ದ ಜಾಮೀನಿನ ಆದೇಶ ಪ್ರತಿಗಳು ಚಿತ್ರದುರ್ಗ ಜೈಲಿನ ಅಧಿಕಾರಿಗಳಿಗೆ ಸಿಕ್ಕಲಿಲ್ಲ. ಗುರುವಾರ ಬೆಳಿಗ್ಗೆ ಮುರುಘರಾಜೇಂದ್ರ ಶರಣರ ಪರವಾದ ವಕೀಲರು ಹಸ್ತಾಂತರಿಸಿದ ಬಳಿಕ ಸ್ವಾಮೀಜಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಕಳೆದ ವರ್ಷದ ಆಗಸ್ಟ್‌ 22ರಂದು ಶರಣರು ಹಾಗೂ ಐದು ಮಂದಿ ವಿರುದ್ದ ಮಠದ ವಿದ್ಯಾರ್ಥಿನಿಯೊಬ್ಬರು ಲೈಂಗಿಕ ದೌರ್ಜನ್ಯದ ಪ್ರಕರಣವನ್ನು ಮೈಸೂರಿನ ನಜರ್‌ಬಾದ್‌ ಠಾಣೆಯಲ್ಲಿ ದಾಖಲಿಸಲಾಗಿತ್ತು. ಇದನ್ನು ಚಿತ್ರದುರ್ಗಕ್ಕೆ ವರ್ಗಾಯಿಸಲಾಗಿ ಆ ಬಳಿಕ ಶರಣರನ್ನು ಬಂಧಿಸಲಾಗಿತ್ತು.

ಒಂದನೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಷರತ್ತುಬದ್ದ ಜಾಮೀನು ನೀಡಿದ್ದು, ಈ ಪ್ರಕಾರ ವಿಚಾರಣೆ ಮುಗಿಯುವವರೆಗೂ ಮುರುಘಾಶ್ರೀ ಚಿತ್ರದುರ್ಗ ಪ್ರವೇಶಿಸಲು ಅವಕಾಶವಿಲ್ಲ. ಇಬ್ಬರು ಶ್ಯೂರಿಟಿ ಒದಗಿಸಬೇಕು. ಇದರ ಜೊತೆಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ಕೋರ್ಟ್ ವಿಚಾರಣೆಗೆ ಹಾಜರಾಗಬೇಕು. ಎರಡು ಲಕ್ಷ ರೂ. ಬಾಂಡ್ ಶ್ಯೂರಿಟಿ ನೀಡಬೇಕೆಂದು ಸೂಚನೆ ನೀಡಲಾಗಿದೆ. ಪಾಸ್‌ಪೋರ್ಟ್‌ ಅನ್ನು ಕೋರ್ಟ್‌ ವಶಕ್ಕೆ ಒಪ್ಪಿಸಬೇಕು.

ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು. ಇಂತಹ ಕೃತ್ಯ ಪುನರಾವರ್ತನೆಯಾಗಬಾರದು ಸೇರಿದಂತೆ ಹಲವಾರು ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ. ಇವುಗಳನ್ನು ಪಾಲಿಸುವುದಾಗಿ ಮುರುಘಾ ಶರಣರ ಪರ ವಕೀಲರು ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ. ಜಾಮೀನು ಆದೇಶ ನೀಡುವವರೆಗೆ ಚಿತ್ರದುರ್ಗದಲ್ಲಿ ನೆಲೆಸುವಂತಿಲ್ಲ ಎಂದು ಕೋರ್ಟ್‌ ಷರತ್ತು ವಿಧಿಸಿದ ಹಿನ್ನಲೆಯಲ್ಲಿ ಶ್ರೀಗಳು ಜೈಲಿನಿಂದ ಬಿಡುಗಡೆಯಾದ ಬಳಿಕ ದಾವಣಗೆರೆಯತ್ತ ಹೊರಟಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:PM Kisan 15th Installment: PM ಕಿಸಾನ್ 15ನೇ ಕಂತಿನ ಹಣ ಜಮಾ !! ಹಣ ಬಾರದ ರೈತರು ತಕ್ಷಣ ಈ ಕೆಲಸ ಮಾಡಿ

Leave A Reply

Your email address will not be published.