8th Pay Commission: 7 ಮಾತ್ರವಲ್ಲ 8ನೇ ವೇತನ ಆಯೋಗವೂ ಕೂಡ ಸದ್ಯದಲ್ಲೇ ಜಾರಿ ?! ಸರ್ಕಾರಿ ನೌಕರರಿಗೆ ಬಂಪರ್ ಲಾಟ್ರಿ !!

8th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಇತ್ತೀಚೆಗಷ್ಟೇ ಸಿಹಿಯ ಸುದ್ದಿ (Good News)ಹೊರಬಿದ್ದಿದೆ. ತುಟ್ಟಿಭತ್ಯೆ (DA)ಹೆಚ್ಚಳದ ಮೂಲಕ ಅವರ ವೇತನದಲ್ಲಿ ಗಮನಾರ್ಹ ಏರಿಕೆ ಮಾಡಲಾಗಿದೆ. ಇದೀಗ ಮತ್ತೆ ಉದ್ಯೋಗಿಗಳಿಗೆ ಸಂತಸದ ಸುದ್ದಿಯೊಂದು ಹೊರಬಿದ್ದಿದೆ.

ಮುಂದಿನ ವರ್ಷಾರಂಭದಲ್ಲಿ ಮುಂದಿನ ವೇತನ ಆಯೋಗ ಅಂದರೆ 8ನೇ ವೇತನ ಆಯೋಗ (8th Pay Commission)ರಚನೆ ಕುರಿತು ಘೋಷಣೆಯಾಗುವ ಸಾಧ್ಯತೆ ಹೆಚ್ಚಿದೆ. ಈ ಕುರಿತು ಸರ್ಕಾರ ಅಧಿಕೃತ ಅಧಿಸೂಚನೆ ಹೊರಡಿಸಿಲ್ಲ. ಮುಂದಿನ ವರ್ಷ ಹೊಸ ವೇತನ ಆಯೋಗದ ಕುರಿತು ಕೇಂದ್ರ ಮಹತ್ವದ ಘೋಷಣೆ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ.

8ನೇ ವೇತನ ಆಯೋಗ ಜಾರಿಯಾದರೆ ನೌಕರರಿಗೆ ಹೆಚ್ಚಿನ ನೆರವಾಗಲಿದೆ. ಕೇಂದ್ರ ಸರ್ಕಾರವು ಹತ್ತು ವರ್ಷಕ್ಕೊಮ್ಮೆ ಜಾರಿಗೊಳಿಸುವ ವೇತನ ಆಯೋಗದಲ್ಲಿ ನೌಕರರ (ಕೇಂದ್ರ ಸರ್ಕಾರಿ ನೌಕರರು) ಮೂಲ ವೇತನವನ್ನು ಹೆಚ್ಚಳ ಮಾಡಲಾಗಿದೆ. 8ನೇ ವೇತನ ಆಯೋಗ ಹತ್ತು ವರ್ಷಗಳ ನಂತರ 2026ರಲ್ಲಿ ಬರುವ ಸಂಭವವಿದೆ. ಇದರಿಂದ ಎಲ್ಲಾ ಉದ್ಯೋಗಿಗಳಿಗೆ ನೆರವಾಗಲಿದೆ. ಫಿಟ್‌ಮೆಂಟ್ ಅಂಶವನ್ನು ಸರ್ಕಾರ ನೇರವಾಗಿ 2.57 ರಿಂದ 3.0 ಪಟ್ಟು ಹೆಚ್ಚಿಸಬಹುದು ಎಂದು ಹೇಳಲಾಗಿದೆ. 8ನೇ ವೇತನ ಶ್ರೇಣಿಯಲ್ಲಿರುವ ನೌಕರರ ಫಿಟ್‌ಮೆಂಟ್ ಅಂಶವು 3.68 ಪಟ್ಟು ಏರಿಕೆಯಾಗಿದೆ. ನೌಕರರ ಕನಿಷ್ಠ ವೇತನ ಶೇ.44.44ರಷ್ಟು ಹೆಚ್ಚಾಗಲಿದೆ. 7ನೇ ವೇತನ ಶ್ರೇಣಿಯಡಿ ನೌಕರರು 2.57 (ಫಿಟ್ಮೆಂಟ್ ಫ್ಯಾಕ್ಟರ್) ಆಧಾರದ ಮೇಲೆ ಮೂಲ ವೇತನವಾಗಿ ರೂ.18 ಸಾವಿರ ಪಡೆಯಲಿದ್ದು, ಇದು 26 ಸಾವಿರಕ್ಕಿಂತ ಹೆಚ್ಚಾಗುವ ಸಾಧ್ಯತೆಯಿದೆ.

 

ಇದನ್ನು ಓದಿ: ತೆಂಗಿನ ಎಣ್ಣೆಗೆ ಇದೊಂದು ವಸ್ತುವನ್ನು ಹಾಕಿ ಮುಖಕ್ಕೆ ಹಚ್ಚಿ!

Leave A Reply

Your email address will not be published.