UT Khader: ಮಂಗಳೂರಿಗರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಯು ಟಿ ಖಾದರ್ !!

Karnataka news UT Khader give good news to mangaloreans Olympics grade swimming pool at yemmekere

UT Khader: ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಅಡಿಯಲ್ಲಿ ಒಟ್ಟು 24.94 ಕೋಟಿ ರು. ಯೋಜನಾ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗಿದೆ. ಮಂಗಳೂರು (Mangalore) ನಗರದ ಎಮ್ಮೆಕೆರೆಯಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಗುಣಮಟ್ಟದ ಈಜುಕೊಳ ಕಾಮಗಾರಿ ಸಂಪೂರ್ಣಗೊಂಡಿದ್ದು, ನ.24ರಿಂದ ನಡೆಯಲಿರುವ 19ನೇ ರಾಷ್ಟ್ರೀಯ ಮಾಸ್ಟರ್ಸ್ ಈಜು ಚಾಂಪಿಯನ್‌ಶಿಪ್‌ಗೆ ಸಿದ್ಧಗೊಂಡಿದೆ.

ಈಜುಕೊಳ ನಿರ್ವಹಣೆಗೆ 2 ಕೋಟಿ ರು. ಮೀಸಲಿಡಲಾಗಿದೆ ಎಂದು ಖಾದರ್ (UT Khader)ತಿಳಿಸಿದ್ದಾರೆ. ತೆರೆದ ಈಜುಕೊಳವು 400 ಜನರ ಸಾಮರ್ಥ್ಯದ ವೀಕ್ಷಕರ ಆಸನ ಹೊಂದಿದ್ದು, ಎದುರುಗಡೆಯ ಭಾಗವನ್ನು ಈಜುಗಾರರು ಅಧಿಕಾರಿಗಳು, ತರಬೇತುದಾರರಿಗೆ ಮೀಸಲಿರಿಸಲಾಗಿದೆ. ಈಜುಕೊಳ ನಿರ್ಮಿಸುವ ಕುರಿತು ಸ್ಥಳೀಯ ನಿವಾಸಿಗಳಿಗೆ ಆಶ್ವಾಸನೆ ನೀಡಿದ ಅನುಸಾರ 2 ಕೋಟಿ ರು. ವೆಚ್ಚದಲ್ಲಿ ಈಜುಕೊಳದ (Swimming Pool)ಮುಂಭಾಗದಲ್ಲಿ ಆಟದ ಮೈದಾನ ಅಭಿವೃದ್ಧಿ ಮಾಡಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು(CM Siddarmaiah)ಈ ಚಾಂಪಿಯನ್‌ಶಿಪ್‌ ಉದ್ಘಾಟನೆ ಮಾಡುವ ಮೂಲಕ ಈಜುಕೊಳವನ್ನು ಲೋಕಾರ್ಪಣೆ ಮಾಡಿದ್ದಾರೆ. ಇದೇ ವೇಳೆ ಎಮ್ಮೆಕೆರೆ ಆಟದ ಮೈದಾನಕ್ಕೂ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಕುರಿತು ಮಾಹಿತಿ ನೀಡಿದ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್‌, ಇಂಟರ್‌ ನ್ಯಾಷನಲ್ ಈಜು ಫೆಡರೇಶನ್ ನಿಗದಿಪಡಿಸಿದ ಮಾನದಂಡದಲ್ಲಿ ಈಜುಕೊಳವನ್ನು ನಿರ್ಮಿಸಲಾಗಿದೆ. 19ನೇ ರಾಷ್ಟ್ರೀಯ ಮಾಸ್ಟರ್ಸ್ ಈಜು ಚಾಂಪಿಯನ್‌ಶಿಪ್‌ನಲ್ಲಿ 850 ಈಜುಗಾರರು, ಈಜು ಫೆಡರೇಶನ್ ಆಫ್ ಇಂಡಿಯಾದ 150 ಅಧಿಕಾರಿಗಳು ಮತ್ತು ಸ್ವಯಂ ಸೇವಕರು ಭಾಗಿಯಾಗಲಿದ್ದಾರೆ.

ಈಜುಕೊಳವು 50 ಮೀ. ಉದ್ದ, 25 ಮೀ. ಅಗಲ ಮತ್ತು 2.2 ಮೀ.ನಿಂದ 1.4 ಮೀ.ವರೆಗಿನ ಆಳವನ್ನು ಒಳಗೊಂಡಿದೆ. ಸ್ಪರ್ಧೆಯ ಪೂಲ್ ಜತೆಗೆ 25 ಮೀ. ಉದ್ದ- 10 ಮೀಟರ್ ಅಗಲ, 2.2 ಮೀ. ಆಳದ ಅಭ್ಯಾಸ ಪೂಲ್‌ ಅನ್ನು ನಿರ್ಮಿಸಲಾಗಿದೆ. ಸ್ಪರ್ಧಾತ್ಮಕ ಈಜು ಸ್ಪರ್ಧೆಗೆ ಮಕ್ಕಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ 13.8 ಮೀ. ಉದ್ದ- 10 ಮೀ. ಅಗಲ, 1.2 ಮೀಟರ್ ಆಳದ ಕಿಡ್ ಪೂಲ್‌ ಅಭಿವೃದ್ದಿ ಮಾಡಲಾಗಿದೆ.

ಕಾರುಗಳು ಮತ್ತು ದ್ವಿಚಕ್ರ ವಾಹನಗಳನ್ನು ನೆಲಮಾಳಿಗೆಯಲ್ಲಿ ಪಾರ್ಕಿಂಗ್ ಮಾಡಲು ಅವಕಾಶವಿದ್ದು, ಕೆಳಭಾಗದಲ್ಲಿ ಫಿಲ್ಟರೇಶನ್ ಘಟಕ ಮಾಡಲಾಗಿದೆ. ಪುರುಷ ಮತ್ತು ಮಹಿಳಾ ಸ್ಪರ್ಧಿಗಳಿಗೆ ವಸತಿ ನಿಲಯಗಳು, ಜಿಮ್ನಾಷಿಯಂ, ಬಟ್ಟೆ ಬದಲಾಯಿಸುವ ಕೊಠಡಿಗಳು, ಶೌಚಾಲಯಗಳು, ಲಾಕರ್‌ಗಳು, ಆಡಳಿತ ಕಚೇರಿ ಮತ್ತು ಕ್ರೀಡಾ ಔಷಧಕ್ಕಾಗಿ ಸ್ಥಳ, ಫಿಸಿಯೋಥೆರಪಿ, ಡೋಪಿಂಗ್ ಕೊಠಡಿ ಮತ್ತು ಅಂತಾರಾಷ್ಟ್ರೀಯ ಕಾರ್ಯಕ್ರಮಗಳನ್ನು ನಡೆಸಲು ಇತರ ಅಗತ್ಯ ಸೌಲಭ್ಯಗಳನ್ನು ಒಳಗೊಂಡಿದೆ ಖಾದರ್ ವಿವರ ನೀಡಿದ್ದಾರೆ.

ಇದನ್ನೂ ಓದಿ: Electricity Bill: ಫ್ರೀ ಕರೆಂಟ್ ಕೊಟ್ರೂ ಜನತೆಗೆ ಶಾಕ್ ಕೊಟ್ಟ ಸರ್ಕಾರ – ಇಂದಿನಿಂದ ಪ್ರತೀ ಯೂನಿಟ್ ಮೇಲೂ ದರ ಹೆಚ್ಚಿಸಿ ಆದೇಶ

Leave A Reply

Your email address will not be published.