Cricketer Shakib: ಬಾಂಗ್ಲಾ ಕ್ರಿಕೆಟಿಗ ಶಕೀಬ್‌ಗೆ ಐಸಿಸಿ ಎರಡು ವರ್ಷ ನಿಷೇಧ
ICC bans Bangladesh cricketer Shakib for two years
ಬಾಂಗ್ಲಾ ಕ್ರಿಕೆಟ್ಟಿಗನಿಗೆ ಐಸಿಸಿ 2 ವರ್ಷ ನಿಷೇಧ ವಿಧಿಸಿದೆ.
ನೆಗ್ಲಿಜೆನ್ಸಿ ಇಷ್ಟು ದೊಡ್ಡ ಮಟ್ಟದ ತೊಂದರೆ ಕೊಡಬಹುದೆಂದು ಬಹುಶ: ಬಾಂಗಾದೇಶದ ಕ್ರಿಕೆಟಿಗ ಶಕೀಬ್ ನಿಗೆ ಗೊತ್ತಿರಲಿಲ್ಲ. ತನ್ನ ಮೊಬೈಲ್ ಗೆ ಬುಕ್ಕಿ ದೀಪಕ್ ಅಗರವಾಲ್ ವಾಟ್ಸ್ಆಪ್ ಸಂದೇಶವನ್ನು ಆತ ನೆಗ್ಲೆಕ್ಟ್ ಮಾಡಿದ ಪರಿಣಾಮವನ್ನು ಆತ ಈಗ ಅನುಭವಿಸುತ್ತಿದ್ದಾನೆ.
ಅಗರವಾಲ್ ನಿಂದ ಶಕೀಬ್ ಗೆ ಮೂರು ಸಲ, ತಂಡದ ಆಂತರಿಕ ವಿಚಾರವನ್ನು ಹೇಳುವಂತೆ ಕೇಳಿಕೊಂಡಿದ್ದರೂ, ಆತ ಆ ವಿಷಯವನ್ನು ಯಾರಿಗೂ ಮತ್ತು ಐಸಿಸಿಗೂ ತಿಳಿಸಿರಲಿಲ್ಲ. ಇದರ ಉಸಾಬರಿ ನಮಗ್ಯಾಕೆ ಅಂತ ಅಂದು ಸುಮ್ನೆ ತನ್ನ ಪಾಡಿಗೆ ಇದ್ದಿರಬಹುದು. ಏನಕ್ಕೆ ವಿನಾ ಯಾರನ್ನಾದರೂ ಎದುರು ಹಾಕಿಕೊಳ್ಳಬೇಕು ಎನ್ನುವುದು ಆತನ ಮನಸ್ಥಿತಿಯಾಗಿದ್ದಿರಬಹುದು. ಆದರೆ ಐಸಿಸಿ ನಿಯಮಗಳ ಪ್ರಕಾರ ಅದು ಶಿಕ್ಷಾರ್ಹ ಅಪರಾಧ. ಆಟಗಾರ, ತನಗೆ ಬರುವ ಇಂತಹ ‘ಆಫರ್’ ಗಳನ್ನು ತಕ್ಷಣ ರಿವೀಲ್ ಮಾಡಿಕೊಳ್ಳಬೇಕು. ನೆಗ್ಲಿಗೆನ್ಸಿಯ ಜತೆಗೆ ignorance ಕೂಡ ಆತನ ವಿರುದ್ಧವಾಗಿ ಕೆಲಸ ಮಾಡಿದೆ. ನನಗೆ ಅದು ತಪ್ಪು ಅಂತ ಗೊತ್ತಿರಲಿಲ್ಲ, ಸಾರೀ ಅಂದ ಕೂಡಲೇ ಶಿಕ್ಷೆಯಿಂದ ಬಚಾವಾಗಲಿಕ್ಕಾಗುವುದಿಲ್ಲ. ಕ್ರಿಕೆಟ್ ಮಾತ್ರವಲ್ಲ, ಜೀವನದ ಅನ್ಯ ಸನ್ನಿವೇಶಗಳಲ್ಲೂ ಕೂಡ.
ಒಂದು ಒಳ್ಳೆಯ ಸಂಗತಿಯೆಂದರೆ ಆತ ಅದನ್ನು ಒಪ್ಪಿಕೊಂಡು, ತನ್ನಿಂದ ತಪ್ಪಾಗಿದೆಯೆಂದದ್ದು.
ನಿಷ್ಠೆಯಿಂದಿದ್ದರೆ ಒಂದು ವರ್ಷ ವಿನಾಯಿತಿ ಅಂತಂದಿದೆ ಐಸಿಸಿ. ‘ನಿಷ್ಠೆ’ ಅಂದರೆ ಇಲ್ಲಿ ಏನು ಅನ್ನೋದು ನಮಗರ್ಥವಾಗುತ್ತಿಲ್ಲ.