LIC Scheme: ನಿವೃತ್ತಿ ಬಳಿಕ 1 ವರ್ಷಕ್ಕೆ 1 ಲಕ್ಷ ಪಿಂಚಣಿ ಬೇಕಾ?! ಹಾಗಿದ್ರೆ ಇಲ್ಲಿದೆ ನೋಡಿ ಡೀಟೇಲ್ಸ್

Business news lic scheme under lic jeevan Shanti policy get rs 1lakh pension

LIC Scheme: ಎಲ್ಐಸಿಯಲ್ಲಿ ಸ್ಕೀಮ್ಗಳಲ್ಲಿ (LIC Scheme)ಜೀವನ್ ಶಾಂತಿಯೂ (LIC Jeevan Shanti) ಒಂದಾಗಿದ್ದು, ಇದು ನಿವೃತ್ತಿ ಬಳಿಕ ಪಿಂಚಣಿ (Deferred Annuity insurance scheme) ಒದಗಿಸುವ ಯೋಜನೆಯಾಗಿದೆ. ಈ ಸ್ಕೀಮ್ನಲ್ಲಿ ಎಷ್ಟು ಬೇಕಾದರೂ ಹಣ ಹೂಡಿಕೆ ಮಾಡಬಹುದು.

ಎಲ್ಐಸಿಯ ನ್ಯೂ ಜೀವನ್ ಶಾಂತಿ ಸ್ಕೀಮ್ನಲ್ಲಿ ಲಂಪ್ಸಮ್ ಆಗಿ 11 ಲಕ್ಷ ರೂ ಅನ್ನು ಹೂಡಿಕೆ ಮಾಡಿದರೆ, 5 ವರ್ಷದ ಬಳಿಕ ಪಿಂಚಣಿ ಪಡೆಯಲು ಪ್ರಾರಂಭಿಸಿದರೆ ವರ್ಷಕ್ಕೆ 1,01,880 ರೂ ಸಿಗಲಿದ್ದು, ಮಾಸಿಕ ಪಿಂಚಣಿ 8,149 ರೂ ಸಿಗಲಿದೆ. ಅಂದರೆ, ನೀವು 55ನೇ ವಯಸ್ಸಿನಲ್ಲಿ 11 ಲಕ್ಷ ರೂ ಮೊತ್ತದ ಜೀವನ್ ಶಾಂತಿ ಪಾಲಿಸಿ ಖರೀದಿ ಮಾಡಿದರೆ, 60ನೇ ವಯಸ್ಸಿನಲ್ಲಿ ನಿವೃತ್ತಿ ಬಳಿಕ ಪಿಂಚಣಿ ಸಿಗಲಿದೆ. ಒಂದು ವೇಳೆ ಪಾಲಿಸಿದಾರ ಮೃತಪಟ್ಟರೆ ನಿರ್ದಿಷ್ಟ ಮೊತ್ತವನ್ನು ನಾಮಿನಿಗೆ ಕೊಡಲಾಗುತ್ತದೆ.

ಎಲ್ಐಸಿ ಜೀವನ್ ಶಾಂತಿ ಇನ್ಷೂರೆನ್ಸ್ ಪಾಲಿಸಿಯಲ್ಲಿ ಪಾಲಿಸಿದಾರನಿಗೆ (LIC Jeevan Shanti)ಕನಿಷ್ಠ ವಯೋಮಿತಿ 30 ವರ್ಷವಾಗಿದ್ದು, ಗರಿಷ್ಠ ವಯೋಮಿತಿ 79 ವರ್ಷವಾಗಿದೆ. ಕಂತುಗಳಲ್ಲಿ ಪ್ರೀಮಿಯಮ್ ಕಟ್ಟುವಂತಿಲ್ಲ. ಇಲ್ಲಿ ಒಬ್ಬನೇ ವ್ಯಕ್ತಿ ಬೇಕಾದರೆ ಪಾಲಿಸಿ ಮಾಡಿಸಬಹುದಾಗಿದ್ದು, ಜಂಟಿಯಾಗಿ ಮಾಡಿಸಬಹುದು. ಜಂಟಿಯಾಗಿ ಮಾಡಿಸಿದಾಗ, ಒಬ್ಬ ಸದಸ್ಯ ಮೃತಪಟ್ಟರೂ ಕೂಡ ಇನ್ನೊಬ್ಬರಿಗೆ ಈ ಪಿಂಚಣಿ ದೊರೆಯಲಿದೆ. ಒಂದೇ ಸಲಕ್ಕೆ ಲಂಪ್ಸಮ್ ಆಗಿ ಹಣ ಪಾವತಿ ಮಾಡಬೇಕಾಗುತ್ತದೆ. ಪಾಲಿಸಿದಾರ ಮೃತಪಡುವವರೆಗೂ ನಿರ್ದಿಷ್ಟ ಮೊತ್ತವನ್ನು ಪಿಂಚಣಿಯಾಗಿ ನೀಡಲಾಗುತ್ತದೆ.

ಇದನ್ನೂ ಓದಿ: Shakti Scheme: ಸರ್ಕಾರಿ ಬಸ್ಸಲ್ಲಿ ಫ್ರೀ ಯಾಗಿ ಓಡಾಡೋ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್- ಸರ್ಕಾರದ ಹೊಸ ಘೋಷಣೆ !!

Leave A Reply

Your email address will not be published.