

BPL Card : ರಾಜ್ಯ ಸರಕಾರ ಹಸಿವು ನೀಗಿಸಲು ಅನ್ನಭಾಗ್ಯ ಯೋಜನೆ (Anna Bhagya Yojana)ಜಾರಿಗೆ ತಂದಿದ್ದು, ಸರಕಾರದ ಗ್ಯಾರಂಟಿ ಯೋಜನೆಗಳ ಜಾರಿ ಬಳಿಕ ಜನರು ಮುಗಿಬಿದ್ದು ಪಡಿತರ ಚೀಟಿ(BPL Card) ಪಡೆಯಲು ದುಂಬಾಲು ಬೀಳುತ್ತಿದ್ದಾರೆ. ಇದರ ನಡುವೆ ಮಂಡ್ಯ ಜಿಲ್ಲೆಯಲ್ಲಿ 6331 ಕಾರ್ಡ್‌ದಾರರು ಕಳೆದ ಏಪ್ರಿಲ್ ತಿಂಗಳಿಂದ ಪಡಿತರ ಪದಾರ್ಥಗಳನ್ನೇ( Ration)ಪಡೆದಿಲ್ಲ ಎಂಬ ವಿಚಾರ ಬಯಲಾಗಿದೆ. ಈ ರೀತಿ, ಕಳೆದ 6 ತಿಂಗಳಿಂದ ರೇಷನ್ ಪಡೆಯದವರ ಕಾರ್ಡ್‌ಗಳು ರದ್ದಾಗುವ ಸಾಧ್ಯತೆ ಹೆಚ್ಚಿದೆ.
ಬಿಪಿಎಲ್ ಕಾರ್ಡ್( BPL Card)ಮೂಲಕ ಕೇವಲ ಸರಕಾರಿ ಸೌಲಭ್ಯ ಪಡೆಯುತ್ತಿರುವ ಜೊತೆಗೆ ಬಡವರಿಗೆ ಕೊಡುವ ಅಕ್ಕಿ, ಮೊದಲಾದ ರೇಷನ್ ಸೌಲಭ್ಯ ಪಡೆಯದವರ ಬಿಪಿಎಲ್ ಕಾರ್ಡ್ ರದ್ದು ಮಾಡುವ ಕುರಿತು ಸರಕಾರ ಈಗಾಗಲೇ ಎಚ್ಚರಿಕೆ ನೀಡಿದೆ. ಮಂಡ್ಯ ಜಿಲ್ಲೆಯಲ್ಲಿ ಈ ರೀತಿ ಏಪ್ರಿಲ್ ತಿಂಗಳಿಂದಲೂ ರೇಷನ್ ಪಡೆಯದ 6331 ಕಾರ್ಡ್‌ದಾರರನ್ನು ಆಹಾರ ಇಲಾಖೆ ಪತ್ತೆ ಹಚ್ಚಿದೆ. ಮಂಡ್ಯ ಜಿಲ್ಲೆಯಲ್ಲಿ ರೇಷನ್ ಪಡೆಯದ, ಆಧಾರ್ ಲಿಂಕ್, ಬ್ಯಾಂಕ್ ಖಾತೆ ಮಾಹಿತಿ ಹೊಂದಾಣಿಕೆಯಾಗದ ಅಕೌಂಟ್‌ಗಳು ಸೇರಿದಂತೆ 25 ಸಾವಿರಕ್ಕೂ ಹೆಚ್ಚು ಮಂದಿಗೆ ಅನ್ನಭಾಗ್ಯ ಯೋಜನೆಯ ಹಣ ಕೂಡ ಜಮೆಯಾಗಿಲ್ಲ ಎನ್ನಲಾಗಿದೆ.
ಕೇವಲ ಸರಕಾರಿ ಸೌಲಭ್ಯಗಳು, ಆರೋಗ್ಯ ಸಂಬಂಧಿ ಶಸ್ತ್ರಚಿಕಿತ್ಸೆ ಉದ್ದೇಶದ ಸಲುವಾಗಿ ಸಾವಿರಾರು ಮಂದಿ ಬಿಪಿಎಲ್ ಕಾರ್ಡ್ ಸ್ವೀಕರಿಸಿದ್ದಾರೆ. ಈ ರೀತಿ ಮಾಡುತ್ತಿರುವವರಿಗೆ ಕೊನೆಯ ಎಚ್ಚರಿಕೆ ನೀಡಲಾಗಿದೆ. ಇದೆ ರೀತಿ, ಮುಂದಿನ ತಿಂಗಳು ರೇಷನ್ ಪಡೆಯದಿದ್ದರೆ ಅವರ ಬಿಪಿಎಲ್ ಕಾರ್ಡ್ ರದ್ದುಗೊಳ್ಳಲಿದೆ. ಸತತ 6 ತಿಂಗಳ ಕಾಲ ಪಡಿತರ ಚೀಟಿ ಬಳಸಿ ಪಡಿತರ ಪದಾರ್ಥಗಳನ್ನು ಪಡೆಯದಿದ್ದರೆ ಅಂಥವರ ಕಾರ್ಡ್ ರದ್ದುಗೊಳಿಸಲಾಗುತ್ತದೆ. ಇದೀಗ ಅಂಥವರ ಮಾಹಿತಿ ಪಡೆದು ತಿಳುವಳಿಕೆ ಮೂಡಿಸುವ ಪ್ರಕ್ರಿಯೆ ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ ಕುರಿತು ಎಂ.ಪಿ.ಕೃಷ್ಣಕುಮಾರ್, ಉಪ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: UGC ಸ್ಕೇಲ್ ನಲ್ಲಿ ಪೆನ್ಶನ್ ಪಡೆಯೋರಿಗೆ ಭರ್ಜರಿ ಗುಡ್ ನ್ಯೂಸ್- ದೀಪಾವಳಿ ದಿನವೇ ಸರ್ಕಾರದಿಂದ ಹೊಸ ಘೋಷಣೆ













