Gold ETF: ದೀಪಾವಳಿಗೆ ಚಿನ್ನ ಖರೀದಿಸೋ ಪ್ಲಾನ್ ಉಂಟಾ ?! ಹಾಗಿದ್ರೆ ಇಲ್ಲಿದೆ ನೋಡಿ ಅತ್ಯುತ್ತಮ ಲಾಭ ತರುವ 10 ಗೋಲ್ಡ್ ETF ಗಳು

Business News Stock Exchange Top 10 profitable Gold Etf complete information

Gold ETF: ನಮ್ಮ ಭವಿಷ್ಯಕ್ಕಾಗಿ ಅಥವಾ ಮಕ್ಕಳ ಭವಿಷ್ಯಕ್ಕಾಗಿ ಹೂಡಿಕೆ ಮಾಡುವಾಗ ಆ ಹೂಡಿಕೆ ಆದಷ್ಟು ಸುರಕ್ಷಿತವಾಗಿರಬೇಕು ಎಂದು ಹೆಚ್ಚಿನವರು ಬಯಸುವುದು ಸಹಜ. ಷೇರು ಮಾರುಕಟ್ಟೆಯ ಏರಿಳಿತದಿಂದ ತಮ್ಮ ಹೂಡಿಕೆ ಮೇಲೆ ಬರುವ ಆದಾಯ ಎಲ್ಲಿ ಮೊಟಕುಗೊಳ್ಳುವುದೋ ಎನ್ನುವ ಆತಂಕ ಎದುರಿಸಲು ಹೆಚ್ಚಿನ ಮಂದಿ ಸಿದ್ಧರಿರುವುದಿಲ್ಲ. ಈ ನಿಟ್ಟಿನಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ.

ಬೆಳಕಿನ ಹಬ್ಬ ದೀಪಾವಳಿ ಹಬ್ಬದ (Deepavli Festival)ಸಂಭ್ರಮ ಎಲ್ಲೆಡೆ ಕಳೆ ಕಟ್ಟಿದ್ದು, ಈ ನಡುವೆ ಚಿನ್ನದ ಮೇಲೆ ಹೂಡಿಕೆ (Gold Investment)ಮಾಡುವವರ ಸಂಖ್ಯೆ ಕೂಡ ಹೆಚ್ಚುತ್ತಿದೆ. ಸ್ಟಾಕ್‌ ಎಕ್ಸ್‌ಚೇಂಜ್‌ನಲ್ಲಿ (Stock Exchange)ಷೇರುಗಳಂತೆ ಚಿನ್ನದ ಮೇಲೂ ಹೂಡಿಕೆ (Investment)ಮಾಡಿ ಮಾರಾಟ ಮಾಡುವ ವ್ಯವಸ್ಥೆಯಿದ್ದು, ಸ್ಟಾಕ್‌ ಎಕ್ಸ್‌ಚೇಂಜ್‌ಗಳಲ್ಲಿ ಮಾರಾಟ ಮಾಡುವ ಇಟಿಎಫ್‌ಗಳು ಇತ್ತೀಚೆಗೆ ಹೆಚ್ಚು ಪ್ರಸಿದ್ಧಿ ಪಡೆದುಕೊಂಡಿವೆ. ದೀಪಾವಳಿಯ ಧನ್‌ತೇರಸ್‌ ಎಂಬ ಆಚರಣೆ ದೀಪಾವಳಿಯು 5 ದಿನಗಳವರೆಗೆ ಇರಲಿದ್ದು, ಈ ದಿನದಂದು ಚಿನ್ನದ ಮೇಲೆ ಹೂಡಿಕೆ ಮಾಡುವುದರಿಂದ ಹೆಚ್ಚು ಶುಭ ಫಲಗಳು ದೊರೆಯುತ್ತವೆ ಎಂಬ ನಂಬಿಕೆಯಿದೆ. ಈ ನಡುವೆ 2023ರ ಜುಲೈ ಹಾಗೂ ಸೆಪ್ಟೆಂಬರ್‌ ಅವಧಿಯಲ್ಲಿ ಚಿನ್ನದ ಇಟಿಎಫ್‌ಗಳು (Gold ETF)1660 ಕೋಟಿ ರೂಪಾಯಿಗಳಷ್ಟು ನಿವ್ವಳ ಒಳಹರಿವು ಹೆಚ್ಚಳವಾಗಿರುವುದು ಡೇಟಾದ ಮಾಹಿತಿಯಿಂದ ತಿಳಿಯಬಹುದು.

ಅಸೋಸಿಯೇಷನ್ ಆಫ್ ಮ್ಯೂಚುವಲ್ ಫಂಡ್ಸ್ ಇನ್ ಇಂಡಿಯಾ (AMFI) ವೆಬ್‌ಸೈಟ್‌ನಲ್ಲಿನ ಮಾಹಿತಿಯ ಅನುಸಾರ ಕಳೆದ 5 ವರ್ಷಗಳಲ್ಲಿ ಹಲವಾರು ಚಿನ್ನದ ಇಟಿಎಫ್‌ಗಳು ಶೇ 12 ವಾರ್ಷಿಕ ಆದಾಯವನ್ನು ನೀಡಿದ್ದು, ಇದರ ಜೊತೆಗೆ ಡಿಜಿಟಲ್‌ ರೂಪದಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡುವುದರಿಂದ ಯಾವುದೇ ರೀತಿಯ ವಂಚನೆಗೆ ಅವಕಾಶವಿಲ್ಲ ಎನ್ನಬಹುದು.

ಗೋಲ್ಡ್‌ ಇಟಿಎಫ್‌ಗಳಲ್ಲಿ ಹೂಡಿಕೆ ಮಾಡಲು ಮೊದಲು ಸೆಬಿ ನೋಂದಾಯಿತ ಹಣಕಾಸು ಸಲಹೆಗಾರರನ್ನು ಸಂಪರ್ಕಿಸುವ ಮೂಲಕ ಈ ಕುರಿತು ಪೂರ್ಣ ಮಾಹಿತಿ ಪಡೆಯಬೇಕು. ಮುಚ್ಯುವಲ್‌ ಫಂಡ್‌ ಗಳಲ್ಲಿ ಹೂಡಿಕೆ ಮಾಡುವಾಗ ಹೆಚ್ಚು ಎಚ್ಚರ ವಹಿಸ ಬೇಕು.ಏಕೆಂದರೆ, ಹೂಡಿಕೆಯ ಲಾಭ -ನಷ್ಟ ಸಂಪೂರ್ಣ ಮಾರುಕಟ್ಟೆಯ ಮೇಲೆ ಅವಲಂಬಿತವಾಗಿರುತ್ತದೆ. ಹೀಗಾಗಿ, ಹೂಡಿಕೆದಾರರು ಹೂಡಿಕೆ ಮಾಡುವ ಮುನ್ನ ಹೆಚ್ಚಿನ ಮಾಹಿತಿಗಾಗಿ ಆರ್ಥಿಕ ಸಲಹೆಗಾರರು ಭೇಟಿ ಮಾಡಿ ಚರ್ಚಿಸಿದರೆ ಒಳ್ಳೆಯದು.

ಚಿನ್ನದ ಮೇಲೆ ಹೂಡಿಕೆ ಮಾಡಲು ಬಯಸುವವರು ಭಾರತದ 10 ಟಾಪ್‌ ಪರ್ಫಾರ್ಮಿಂಗ್‌ ಗೋಲ್ಡ್‌ ಇಟಿಎಫ್‌ಗಳನ್ನು ಗಮನಿಸಬಹುದು.

* ಎಲ್‌ಐಸಿ ಎಂಎಫ್‌ ಗೋಲ್ಡ್‌ ಇಟಿಎಫ್‌:
ಇದರಲ್ಲಿ ಮೊದಲ ವರ್ಷದ ಹೂಡಿಕೆಗೆ ಶೇ 21.005 ಆದಾಯ ನೀಡಿದ್ದು, 5 ವರ್ಷದ ಹೂಡಿಕೆಗೆ ಶೇ 13.19 ಹಾಗೂ 10 ವರ್ಷಗಳಲ್ಲಿ ಶೇ 6.93ರಷ್ಟು ವಾರ್ಷಿಕ ಆದಾಯವನ್ನು ನೀಡಿದೆ.

* ಎಸ್‌ಬಿಐ ಗೋಲ್ಟ್‌ ಇಟಿಎಫ್‌:
ಇದರಲ್ಲಿ ಮೊದಲ ವರ್ಷದ ಹೂಡಿಕೆಗೆ ಶೇ 20.20 ವಾರ್ಷಿಕ ಆದಾಯ ನೀಡಲಾಗಿದೆ. ಅದೇ ರೀತಿ 5 ವರ್ಷಕ್ಕೆ ಶೇ 13.00 ಮತ್ತು 10 ವರ್ಷಕ್ಕೆ ಶೇ 6.66 ವಾರ್ಷಿಕ ಆದಾಯವನ್ನು ನೀಡಿದೆ.

* ಆದಿತ್ಯ ಬಿರ್ಲಾ ಸನ್‌ ಲೈಫ್‌ ಗೋಲ್ಡ್‌ ಇಟಿಎಫ್‌:
ಇದರಲ್ಲಿ 1, 5 ಮತ್ತು 10 ವರ್ಷಗಳಲ್ಲಿ ಕ್ರಮವಾಗಿ ಶೇ 19.74, ಸೇ 12.97 ಮತ್ತು ಶೇ 6.15 ವಾರ್ಷಿಕ ಆದಾಯವನ್ನೂ ನೀಡಲಾಗಿದೆ.

* ಆಕ್ಸಿಸ್ ಗೋಲ್ಡ್ ಇಟಿಎಫ್:
ಆಕ್ಸಿಸ್ ಗೋಲ್ಡ್ ಇಟಿಎಫ್ ಹೂಡಿಕೆ ಮಾಡಿದವರಿಗೆ 1, 5 ಮತ್ತು 10 ವರ್ಷಗಳಲ್ಲಿ ಕ್ರಮವಾಗಿ ಶೇ 20.17, ಶೇ 13.08 ಮತ್ತು ಶೇ 6.42 ವಾರ್ಷಿಕ ಆದಾಯ ನೀಡಿದೆ.

* ಐಸಿಐಸಿಐ ಪ್ರುಡೆನ್ಶಿಯಲ್ ಗೋಲ್ಡ್ ಇಟಿಎಫ್:
ಐಸಿಐಸಿಐ ಪ್ರುಡೆನ್ಶಿಯಲ್ ಗೋಲ್ಡ್ ಇಟಿಎಫ್ ನಲ್ಲಿ ಮೊದಲ ವರ್ಷದ ಹೂಡಿಕೆಗೆ ಶೇ 19.80 ಅದೇ ರೀತಿ 5ನೆ ವರ್ಷದ ಹೂಡಿಕೆಗೆ ಶೇ 12.80 ಮತ್ತು10 ವರ್ಷದ ಚಿನ್ನದ ಹೂಡಿಕೆಗೆ ಶೇ 6.5 ವಾರ್ಷಿಕ ಆದಾಯ ನೀಡಿದೆ.

* ಎಚ್‌ಡಿಎಫ್‌ಸಿ ಗೋಲ್ಡ್ ಇಟಿಎಫ್:
ಎಚ್‌ಡಿಎಫ್‌ಸಿ ಗೋಲ್ಡ್ ಇಟಿಎಫ್ ನಲ್ಲಿ 1, 5 ಮತ್ತು 10 ವರ್ಷಗಳಲ್ಲಿ ಕ್ರಮವಾಗಿ ಶೇ 19.77, ಶೇ 12.75 ಮತ್ತು ಶೇ 6.64 ವಾರ್ಷಿಕ ಆದಾಯವನ್ನು ನೀಡಿದೆ.

* ಇನ್ವೆಸ್ಕೊ ಇಂಡಿಯಾ ಗೋಲ್ಡ್ ಇಟಿಎಫ್:
ಇನ್ವೆಸ್ಕೊ ಇಂಡಿಯಾ ಗೋಲ್ಡ್ ಇಟಿಎಫ್ ನಲ್ಲಿ ಮೊದಲ ವರ್ಷದ ಚಿನ್ನದ ಹೂಡಿಕೆಗೆ ಶೇ 20.39 ಅದೇ ರೀತಿ, 5ವರ್ಷದ ಚಿನ್ನದ ಹೂಡಿಕೆಗೆ ಶೇ 13.12 ಮತ್ತು 10 ವರ್ಷಕ್ಕೆ ಶೇ 6.72 ವಾರ್ಷಿಕ ಆದಾಯವನ್ನು ನೀಡಿದೆ.

* ಕೋಟಾಕ್ ಗೋಲ್ಡ್ ಇಟಿಎಫ್:
ಕೋಟಾಕ್ ಗೋಲ್ಡ್ ಇಟಿಎಫ್ 1, 5 ಮತ್ತು 10 ವರ್ಷಗಳಲ್ಲಿ ಕ್ರಮವಾಗಿ ಶೇ 19.76, ಶೇ 12.91 ಮತ್ತು ಶೇ 6.60 ವಾರ್ಷಿಕ ಆದಾಯ ನೀಡಿದೆ.

* ನಿಪ್ಪಾನ್ ಇಂಡಿಯಾ ಇಟಿಎಫ್ ಗೋಲ್ಡ್ ಬೀಸ್:
ನಿಪ್ಪಾನ್ ಇಂಡಿಯಾ ಇಟಿಎಫ್ ಗೋಲ್ಡ್ ಬೀಸ್ ನಲ್ಲಿ ಮೊದಲ ವರ್ಷದ ಹೂಡಿಕೆಗೆ ಶೇ 19.51, 5 ವರ್ಷದ ಹೂಡಿಕೆಗೆ ಶೇ 12.71 ಮತ್ತು 10 ವರ್ಷದ ಹೂಡಿಕೆಗೆ ಶೇ 6.58 ವಾರ್ಷಿಕ ಆದಾಯವನ್ನು ನೀಡಿದೆ.

* ಯುಟಿಐ ಗೋಲ್ಡ್ ಇಟಿಎಫ್:
ಯುಟಿಐ ಗೋಲ್ಡ್ ಇಟಿಎಫ್ ನಲ್ಲಿ 1, 5 ಮತ್ತು 10 ವರ್ಷಗಳಲ್ಲಿ ಕ್ರಮವಾಗಿ ಶೇ 20.63, ಶೇ 12.74 ಮತ್ತು ಶೇ 6.62 ವಾರ್ಷಿಕ ಆದಾಯವನ್ನು ನೀಡಿದೆ.

ಇದನ್ನೂ ಓದಿ :LPG Gas Cylinder: ಇನ್ಮುಂದೆ 450 ರೂ.ಗೆ ಮನೆಗೆ ಬರುತ್ತೆ LPG ಸಿಲಿಂಡರ್ – ಯಾರಿಗೆ ಸಿಗುತ್ತೆ ಈ ಬಂಪರ್ ಆಫರ್ ?!

Leave A Reply

Your email address will not be published.