Fried Rice Syndrome: ಪಾಸ್ತಾ ತಿಂದ 20ರ ಯುವಕನ ಸಾವು- ಜೊತೆ ಜೊತೆಗೇ ವೈರಲ್ ಆಯ್ತು ಪ್ರೈಡ್ ರೈಸ್ ಸಿಂಡ್ರೋಮ್ ವಿಡಿಯೋ !!
fried rice syndrome and tiktok viral video latest updates
Fried Rice Syndrome: ಐದು ದಿನದ ಹಿಂದೆ ಹಾಳಾದ ಪಾಸ್ತವನ್ನು ಸೇವಿಸಿದ 20 ವರ್ಷದ ಯುವಕ ಮೃತಪಟ್ಟ ಘಟನೆ ವರದಿಯಾಗಿತ್ತು. ಇದೀಗ, ಫ್ರೈಡ್ ರೈಸ್ ಸಿಂಡ್ರೋಮ್(Fried Rice Syndrome) ಕುರಿತ ವಿಡಿಯೋವೊಂದು ವೈರಲ್ (Viral Video)ಆಗಿದೆ.
ಫ್ರೈಡ್ ರೈಸ್ ಸಿಂಡ್ರೋಮ್( Fried Rice Syndrome)ಕುರಿತ ವಿಡಿಯೋ ಟಿಕ್‌ಟಾಕ್‌ನಲ್ಲಿ (TIKTOK)ಇತ್ತೀಚೆಗೆ ವೈರಲ್ ಆಗಿದ್ದು, 2008ರಲ್ಲಿ 20 ವರ್ಷದ ವಿದ್ಯಾರ್ಥಿಯೊಬ್ಬ ಮೃತಪಟ್ಟ ಬೆನ್ನಿಗೆ ಈ ವಿಡಿಯೋ ಮೊದಲ ಸಲ ವೈರಲ್ ಆಗಿತ್ತಂತೆ. ರೆಫ್ರಿಜರೇಟರ್‌ನಲ್ಲಿ ಇರಿಸದೇ ಇದ್ದ 5 ದಿನ ಹಳೆಯ ಪಾಸ್ತವನ್ನು ಸೇವಿಸಿದ ವ್ಯಕ್ತಿಯೊಬ್ಬ ಮೃತಪಟ್ಟ ನಂತರ ಟಿಕ್‌ಟಾಕರ್ ಒಬ್ಬ ಇತ್ತೀಚೆಗೆ ಶೇರ್ ಮಾಡಿದ ವಿಡಿಯೋ ಎಲ್ಲರ ಗಮನ ಸೆಳೆಯುತ್ತಿದೆ.
ಈಗ ವೈರಲ್ ಆಗಿರುವ ವೀಡಿಯೊ ನೆಟ್ಟಿಗರಲ್ಲಿ ಭಯವನ್ನು ಹುಟ್ಟುಹಾಕಿದೆ. ಸಾಮಾನ್ಯವಾಗಿ ರಾತ್ರಿ ಉಳಿದ ಆಹಾರವನ್ನು ಅಥವ ತಂಗಳನ್ನು ಸೇವಿಸುವುದು ಸಾಮಾನ್ಯ. ರೆಫ್ರಿಜರೇಟ್ ಮಾಡದ ಅಥವಾ ಫ್ರಿಜ್‌ನಲ್ಲಿ ಇಡದ ತಂಗಳನ್ನವನ್ನು ರೆಸ್ಟೋರೆಂಟ್‌ಗಳಲ್ಲಿ ಫ್ರೈಡ್ ರೈಸ್ ಖಾದ್ಯಗಳಿಗೆ ಬಳಕೆ ಮಾಡಲಾಗುತ್ತದೆ. ಇದನ್ನು ತಿಂದು ಹೊಟ್ಟೆ ಸಮಸ್ಯೆ ಎದುರಾದಾಗ ಆ ಸಮಸ್ಯೆಗೆ ಫ್ರೈಡ್ ರೈಸ್ ಸಿಂಡ್ರೋಮ್ ಎಂದು ಹೆಸರಿಡಲಾಗಿದೆ.
ಫ್ರೈಡ್ ರೈಸ್ ಸಿಂಡ್ರೋಮ್ ಎಂಬುದು ಬ್ಯಾಸಿಲಸ್ ಸೆರಿಯಸ್ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುವ ಒಂದು ರೀತಿಯ ಫುಡ್ ಪಾಯ್ಸನ್. ಈ ಸಾಮಾನ್ಯ ಬ್ಯಾಕ್ಟೀರಿಯ ಕೆಲವು ಆಹಾರ ಪದಾರ್ಥಗಳನ್ನು ಸೇರಿದರೆ ಅದು ಶರೀರದಲ್ಲಿ ಆಹಾರ ಸಮಸ್ಯೆ ಉಂಟುಮಾಡುತ್ತದೆ. ಆದರೆ ಫ್ರಿಜ್‌ನಲ್ಲಿ ಇಡದೇ ಹೋದರೆ ಇಟ್ಟ ಆಹಾರಕ್ಕೆ ಈ ಬ್ಯಾಕ್ಟೀರಿಯಾ ಸೇರಿದರೆ ಆಗ ಅದು ಆಹಾರ ವಿಷಕ್ಕೆ ಕಾರಣವಾಗುವ ಸಾಧ್ಯತೆ ಹೆಚ್ಚಿದೆ. ವಿಶೇಷವಾಗಿ ಪಾಸ್ತಾ, ಅನ್ನ, ಬ್ರೆಡ್ ಮುಂತಾದ ಪಿಷ್ಟ, ಕಾರ್ಬೋಹೈಡ್ರೇಟ್ ಭರಿತ ಆಹಾರದಲ್ಲಿ ಈ ಬ್ಯಾಕ್ಟೀರಿಯಾ ಬಹುಬೇಗ ತನ್ನ ಕೆಲಸ ಮಾಡುತ್ತದೆ. ಈ ರೀತಿಯ ಆಹಾರ ವಿಷದಿಂದ ಬಳಲುತ್ತಿರುವ ಮಕ್ಕಳು ಮತ್ತು ಅನಾರೋಗ್ಯ ಪೀಡಿತರಿಗೆ ಗಂಭೀರ ವೈದ್ಯಕೀಯ ಆರೈಕೆಯ ಅವಶ್ಯಕತೆ ಇರುತ್ತದೆ. ಹೆಚ್ಚಿನ ಪ್ರಕರಣಗಳಲ್ಲಿ, ಈ ಬ್ಯಾಕ್ಟೀರಿಯಾವು ಕರುಳಿನ ಸೋಂಕನ್ನು ಉಂಟುಮಾಡಬಹುದು. ಇದು ತೀವ್ರವಾದ ಪಿತ್ತಜನಕಾಂಗದ ವೈಫಲ್ಯ ಮಾತ್ರವಲ್ಲದೇ ಸಾವಿನ ದವಡೆಗೆ ಕೂಡ ಸಿಲುಕಿಸಬಹುದು.
ಇದನ್ನು ಓದಿ: Hasanamba temple: ಹಾಸನಾಂಬ ದೇವಾಲಯದಲ್ಲಿ ನಡೆದೇಹೋಯ್ತು ಮಹಾನ್ ಪವಾಡ – ಹಾಸನಕ್ಕೆ ದೌಡಾಯಿಸುತ್ತಿದೆ ಭಕ್ತರ ದಂಡು !!