Chanakya Niti: ಚಾಣಕ್ಯ ಹೇಳಿದ ಈ 7 ನೀತಿಪಾಠಗಳನ್ನು ಅರಿತು ನಡೆದರೆ ನಿಮ್ಮ ಲೈಫ್ 100% ಸಕ್ಸಸ್ !!

Chanakya Niti: ಆಚಾರ್ಯ ಚಾಣಕ್ಯರ ನೀತಿ (Chanakya Niti) ಶಾಸ್ತ್ರ ಸುಂದರ ಬದುಕು ಮತ್ತು ಯಶಸ್ಸಿಗೆ ನಮಗೆ ದಾರಿ ತೋರಿಸುತ್ತದೆ. ಚಾಣಕ್ಯ ದೇಶ ಕಂಡ ಮಹಾನ್ ವಿದ್ವಾಂಸರಾಗಿದ್ದು, ಅವರ ನೀತಿ-ನಿಯಮಗಳು ನಮ್ಮ ಬದುಕಿಗೆ ಬೇಕಾದ ಎಲ್ಲಾ ಮೌಲ್ಯಗಳನ್ನು ಒದಗಿಸುತ್ತವೆ. ನೀವು ಸಹ ಜೀವನದಲ್ಲಿ ಯಶಸ್ಸು ಬೇಕು ಅಂತಾ ಬಯಸುತ್ತಿದ್ದರೆ, ಚಾಣಕ್ಯ ಅವರ ನೀತಿ-ನಿಯಮಗಳನ್ನು, ಅವರು ಬದುಕಿಗೆ ಕೊಟ್ಟಿರುವ ಸಲಹೆಗಳನ್ನು ಒಮ್ಮೆ ನೋಡಿ.

ವಿನಮ್ರರಾಗಿರುವುದು:
ಜೀವನದಲ್ಲಿ ನಾವು ಕಲಿಯಬೇಕಾದ ಅತ್ಯುತ್ತಮ ಪಾಠ ಎಂದರೆ ವಿನ್ರಮರಾಗಿರುವುದನ್ನು ಕಲಿಯುವುದು. ವಿನಮ್ರತೆಯು ನಮ್ಮನ್ನು ಬಹಳ ಎತ್ತರಕ್ಕೆ ಕೊಂಡ್ಯೊಯುತ್ತದೆ.

ಶಿಕ್ಷಣವೇ ನಿಮ್ಮ ಅತ್ಯುತ್ತಮ ಸ್ನೇಹಿತ: ವಿದ್ಯಾವಂತ ವ್ಯಕ್ತಿಗೆ ಎಲ್ಲಿ ಹೋದರೂ ಬೆಲೆ ಇರುತ್ತದೆ. ಚಾಣಕ್ಯರ ಪ್ರಕಾರ ಶಿಕ್ಷಿತರನ್ನು ಎಲ್ಲಿ ಹೋದರು ಗೌರವಿಸುತ್ತಾರೆ. ಅವರ ಬುದ್ಧಿವಂತಿಕೆಯನ್ನು ಪ್ರಶಂಸಿಸುತ್ತಾರೆ. ಆ ಕಾರಣಕ್ಕೆ ಮನುಷ್ಯನಿಗೆ ಶಿಕ್ಷಣ ಬಹಳ ಮುಖ್ಯ.

ಇತರರ ತಪ್ಪುಗಳಿಂದ ಕಲಿಯುವುದು:
ವ್ಯಕ್ತಿಗಳು ಇತರರನ್ನು, ಸಮಾಜವನ್ನು, ನಮ್ಮ ಸುತ್ತಲೂ ನಡೆಯುತ್ತಿರುವ ಘಟನೆಗಳನ್ನು ಗಮನಿಸುತ್ತಲೇ ಇರಬೇಕು. ಅವುಗಳಿಂದ ಮಾಹಿತಿಯನ್ನು ಪಡೆಯಬೇಕು. ಇತರರ ತಪ್ಪುಗಳನ್ನು ನೋಡಿ ನಾವು ಪಾಠ ಕಲಿಯಬೇಕು. ತಪ್ಪುಗಳಿಂದ ಕಲಿತ ಪಾಠದ ಪರಿಣಾಮ ಜಾಸ್ತಿ. ಇದು ಮನುಷ್ಯ ಬದುಕನ್ನು ಎತ್ತರಕ್ಕೆ ಕೊಂಡ್ಯೊಯುತ್ತದೆ.

ನಿಮ್ಮೊಳಗಿನ ರಹಸ್ಯವನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ: ನಿಮ್ಮ ಕುರಿತಾದ ಯಾವುದೇ ರಹಸ್ಯವನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಯಾಕೆಂದರೆ ಯಾರು ಯಾವಾಗ ತಿರುಗಿ ಬೀಳುತ್ತಾರೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಆ ಕಾರಣಕ್ಕೆ ಚಾಣಕ್ಯರು ನಿಮ್ಮ ಬಲ ಹಾಗೂ ನಿಮ್ಮ ಬಲಹೀನತೆ ಈ ಎರಡರ ಬಗ್ಗೆಯೂ ಯಾರೊಂದಿಗೂ ಚರ್ಚಿಸಬೇಡಿ ಎಂದು ಸಲಹೆ ನೀಡಿದ್ದಾರೆ.

ಕಲಿಕೆಯನ್ನು ನಿಲ್ಲಿಸಬೇಡಿ: ಜೀವನದಲ್ಲಿ ಕಲಿಕೆ ಎನ್ನುವುದು ನಿರಂತರವಾಗಿರಬೇಕು. ಕಲಿಕೆಗೆ ಅಂತ್ಯವೆಂಬುದೇ ಇಲ್ಲ. ನಿಮ್ಮ ಕಲಿಕೆಯು ನಿಮ್ಮ ಜೀವನದ ಭಾಗವಾಗಿರಬೇಕು.

ನಿಮ್ಮೊಳಗಿನ ಒಳ್ಳೆಯತನವನ್ನು ಹುಡುಕಿ:
ಚಾಣಕ್ಯರು ದೇವರು ವಿಚಾರದಲ್ಲಿ ತಮ್ಮದೇ ಆದ ನಿಲುವು ಹೊಂದಿದ್ದರು, ಅವರ ಪ್ರಕಾರ ದೇವರು ನಮ್ಮೊಳಗೆ ಇದ್ದಾನೆ. ನಮ್ಮೊಳಗಿನ ಒಳ್ಳೆಯತನದಲ್ಲಿ ದೇವರು ಅಡಗಿದ್ದಾನೆ.

ಪ್ರಾಯೋಗಿಕ ಅನುಭವಗಳು ಅವಶ್ಯ: ನಿಜವಾದ ಜ್ಞಾನ ಹಾಗೂ ಬುದ್ಧಿವಂತಿಕೆಯು ಪುಸ್ತಕದಲ್ಲಿ ಅಡಕವಾಗಿಲ್ಲ. ನೀವು ಪ್ರತಿದಿನದ ಕೆಲಸ ಕಾರ್ಯಗಳು, ಸಮಾಜದಿಂದ ಪ್ರಾಯೋಗಿಕ ಪಾಠಗಳನ್ನು ಕಲಿತಾಗಲಷ್ಟೇ ಯಶಸ್ಸು ಗಳಿಸಲು ಸಾಧ್ಯ.

 

ಇದನ್ನು ಓದಿ: Fried Rice Syndrome: ಪಾಸ್ತಾ ತಿಂದ 20ರ ಯುವಕನ ಸಾವು- ಜೊತೆ ಜೊತೆಗೇ ವೈರಲ್ ಆಯ್ತು ಪ್ರೈಡ್ ರೈಸ್ ಸಿಂಡ್ರೋಮ್ ವಿಡಿಯೋ !!

Leave A Reply

Your email address will not be published.