EPFO ನ ಹೊಸ ನಿರ್ಧಾರ ಪರಿಣಾಮ- ಈ ಉದ್ಯೋಗಿಗಳ ಮೊತ್ತದಲ್ಲಿ ಭಾರೀ ಕಡಿತ !!

Business news epfo new decision 13 lakh members will be affected latest news

EPFO: ಉದ್ಯೋಗಿ ಭವಿಷ್ಯ ನಿಧಿ ( EPFO) ಮಹತ್ವದ ತೀರ್ಮಾನ ಕೈಗೊಂಡಿದ್ದು, ಹೆಚ್ಚುವರಿ ಪಿಂಚಣಿಯನ್ನು ಲೆಕ್ಕಾಚಾರ ಮಾಡಲು ಅನುಪಾತ ವ್ಯವಸ್ಥೆಯನ್ನು ಜಾರಿಗೆ ತರಲು ಮುಂದಾಗಿದೆ. ಈ ನಿಲುವಿನಿಂದ ಹೆಚ್ಚುವರಿ ಪಿಂಚಣಿ ಯೋಜನೆ ಆಯ್ಕೆಯನ್ನು ಆರಿಸಿಕೊಂಡ ಪಿಂಚಣಿದಾರರ (Pension) ಮೊತ್ತದಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ಕಡಿತ ಸಂಭವಿಸಲಿದೆ ಎನ್ನಲಾಗಿದೆ.

ನಿವೃತ್ತಿಯ ಮೊದಲು 60 ತಿಂಗಳ ಸರಾಸರಿ ವೇತನವನ್ನು ಆಧರಿಸಿ ಪಿಂಚಣಿ ನೀಡಲಾಗುವ ಹಿಂದಿನ ವ್ಯವಸ್ಥೆಗಿಂತ ಈ ವ್ಯವಸ್ಥೆ ವಿಭಿನ್ನವಾಗಿದೆ. ಪ್ರೊ ರೇಟಾವನ್ನು ಅನ್ವಯಿಸಿದ ಸಂದರ್ಭ ನಿವೃತ್ತಿಯ ಸಮಯದಲ್ಲಿ ಪಡೆದ ಹೆಚ್ಚಿನ ಸಂಬಳಕ್ಕೆ ಅನುಗುಣವಾಗಿ ಪೂರ್ಣ ಪಿಂಚಣಿ ಮೊತ್ತವನ್ನು ಸದಸ್ಯರು ಪಡೆಯುವುದಿಲ್ಲ. ಪ್ರೊ ರೇಟಾ ಸಿಸ್ಟಮ್‌ನಡಿಯಲ್ಲಿ ಈ ವರ್ಗಕ್ಕೆ ಸೇರಿದ ಸದಸ್ಯರ ಪಿಂಚಣಿಯನ್ನು ಸಪ್ಟೆಂಬರ್ 2014 ರ ಬಳಿಕ ಮತ್ತು ಇದಕ್ಕಿಂತ ಮೊದಲು ಸೇವೆ ಸಲ್ಲಿಸಿದವರಿಗೆ ಎಂದು ಪ್ರತ್ಯೇಕ ವಿಭಾಗಗಳಲ್ಲಿ ಲೆಕ್ಕಚಾರ ಮಾಡಲಾಗುತ್ತದೆ.ಅನುಪಾತ ವ್ಯವಸ್ಥೆ ಅಥವಾ ಪ್ರೊ ರೇಟಾ ಲೆಕ್ಕಾಚಾರ ಆದಾಯದ ಸಮಾನ ಭಾಗಗಳಲ್ಲಿ ಹಂಚಿಕೆಯನ್ನು ಸೂಚಿಸುತ್ತದೆ. ಈ ಲೆಕ್ಕಾಚಾರದ ಅನುಸಾರ, ಸುಮಾರು 13 ಲಕ್ಷ ಇಪಿಎಫ್‌ಒ ಸದಸ್ಯರ ಮೇಲೆ ಪರಿಣಾಮ (Effects) ಬೀರಲಿದೆ. ಸೆಪ್ಟಂಬರ್ 1, 2014 ರ ನಂತರ ನಿವೃತ್ತರಾಗುವವರು ಹಾಗೂ ಯೋಜನೆಯನ್ನು ಆಯ್ದುಕೊಂಡಿರುವ ಪ್ರಸ್ತುತ ಉದ್ಯೋಗಿಗಳ ಮೇಲೆ ಕೂಡ ಪರಿಣಾಮ ಬೀರಲಿದೆ ಎನ್ನಲಾಗಿದೆ.

ಇದನ್ನೂ ಓದಿ: Krishi Bhagya Scheme: ಕೃಷಿ ಭಾಗ್ಯ ಜಾರಿ- ರೈತರಿಗೆ ಉಚಿತವಾಗಿ ಸಿಗಲಿದೆ ಈ ಸೌಲಭ್ಯ

Leave A Reply

Your email address will not be published.