Subsidy Loan For Home: ಕಾಂಗ್ರೆಸ್ ಸರ್ಕಾರದಿಂದ 6ನೇ ಗ್ಯಾರಂಟಿ ಘೋಷಣೆ- ಇಂತವರಿಗಿನ್ನು ಉಚಿತವಾಗಿ ಸಿಗಲಿದೆ ಈ ಬಂಪರ್ ಸೌಲಭ್ಯ!!
State government announced 6th guarantee of subsidy loan for house under free housing scheme
Subsidy Loan for Home : ಗ್ಯಾರಂಟೀ ಯೋಜನೆಗಳ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಸರ್ಕಾರ (state government) ಸದ್ಯ, ಗ್ಯಾರಂಟೀ ಯೋಜನೆಗಳ (guarantee schemes) ಅನುಷ್ಠಾನಗೊಳಿಸುವಲ್ಲಿ ನಿರತವಾಗಿದೆ. ಈ ನಡುವೆ, ಆರನೇ ಗ್ಯಾರಂಟಿ ಯೋಜನೆ ಘೋಷಿಸಿದ್ದು ವಸತಿ ನಿರ್ಮಾಣದ (housing scheme) ಕೊಳಗೇರಿಕೊಳಗೇರಿ ಅಭಿವೃದ್ಧಿ ಮಂಡಳಿ ಅಡಿಯಲ್ಲಿ ಮನೆ ನಿರ್ಮಾಣ (Free housing scheme) ಮಾಡುವ ಹೊಣೆ ರಾಜ್ಯ ಸರ್ಕಾರದ ಮೇಲಿದೆ.
ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ (Zameer Ahmed Khan) ಖಾನ್ ಅವರು ರಾಜ್ಯದ ಜನತೆಗೆ ಉಚಿತ ಮನೆ ನೀಡುವ ಕುರಿತು ಮಾಹಿತಿ ನೀಡಿದ್ದಾರೆ.ಬಡವರಿಗೆ ಸೂರು ನಿರ್ಮಿಸಿ (House For Poor People) ಕೊಡುವ ಜವಾಬ್ದಾರಿಯನ್ನ ಕೊಳಗೇರಿ ಅಭಿವೃದ್ಧಿ ಮಂಡಳಿ ಹಾಗೂ ರಾಜೀವ್ ಗಾಂಧಿ ವಸತಿ ನಿಗಮ (Rajiv Gandhi vasati Yojana)ಒಪ್ಪಿಕೊಂಡಿದ್ದು, ಆದರೆ ಜನರಿಗೆ ಕೊಡಬೇಕಾಗಿರುವ ಹಣ ಇನ್ನು ಬಾಕಿ ಉಳಿದಿದೆ. ಈ ನಿಟ್ಟಿನಲ್ಲಿ ಸರ್ಕಾರವೇ ಸಂಪೂರ್ಣ ವೆಚ್ಚ ಭರಿಸಬೇಕಾಗುತ್ತದೆ. ಆದಾಗ್ಯೂ, ಸರ್ಕಾರ ಮುಂದಿನ ವರ್ಷದ ಅಂತ್ಯದ ಒಳಗೆ ರಾಜ್ಯದ್ಯಂತ ಎರಡುವರೆ ಲಕ್ಷದಷ್ಟು ಮನೆ ನಿರ್ಮಾಣ (Subsidy Loan For Home)ಮಾಡುವ ಭರವಸೆ ನೀಡಿದೆ.
ಈ ನಡುವೆ, ಹಂಪಿಯಲ್ಲಿ ನಡೆದ ಕರ್ನಾಟಕ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯನವರು(CM Siddaramaiah) 2.32 ಲಕ್ಷ ಉಚಿತ ಮನೆಯನ್ನು ನೀಡುವ ಅಭಯ ನೀಡಿದ್ದಾರೆ.ಹಣಕಾಸು ಇಲಾಖೆ (financer department) ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, 8,000 ಕೋಟಿ ರೂಪಾಯಿಗಳನ್ನು ಸರ್ಕಾರ ಹಂತ ಹಂತವಾಗಿ ಉಚಿತ ಮನೆ ನಿರ್ಮಾಣ ಮಾಡಿಕೊಡಲು ಬಿಡುಗಡೆ ಮಾಡಲಿರುವ ಕುರಿತು ಮುಖ್ಯಮಂತ್ರಿಗಳು ಮಾಹಿತಿ ನೀಡಿದ್ದಾರೆ.
ಕೊಳಗೇರಿ ಅಭಿವೃದ್ಧಿ ಮಂಡಳಿ ಹಾಗೂ ರಾಜೀವ್ ಗಾಂಧಿ ಅಭಿವೃದ್ಧಿ ಮಂಡಳಿ ಬಡವರಿಗೆ ನಿರ್ಮಿಸಿ ಕೊಡಲು ಹೊರಟಿರುವ ಮನೆಯ ವೆಚ್ಚ 7 ಲಕ್ಷ ರೂಪಾಯಿಯಾಗಿದ್ದು, ಇದಕ್ಕೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಎರಡೂ ಕಡೆಯಿಂದ ಮೂರು ಲಕ್ಷ ರೂಪಾಯಿಗಳವರೆಗೆ ಸಬ್ಸಿಡಿ (Subsidy Loan) ದೊರೆಯಲಿದೆ. ಇದರಲ್ಲಿ ನಾಲ್ಕು ಲಕ್ಷ ರೂಪಾಯಿಗಳನ್ನು ಫಲಾನುಭವಿಗಳು ಭರಿಸಬೇಕಾಗುತ್ತದೆ.
ಇದನ್ನೂ ಓದಿ: LPG Ujwala Scheme: ‘ಉಜ್ವಲ ಯೋಜನಾ’ ಅಡಿ ಉಚಿತವಾಗಿ ಸಿಗೋ LPG ಸಿಲಿಂಡರ್ ಪಡೆಯಲು ಇನ್ನು ಈ ದಾಖಲೆ ಬೇಕಿಲ್ಲ !!