Indian Railway: ರೈಲ್ವೆ ನಿಯಮದಲ್ಲಿ ಮಹತ್ವದ ಬದಲಾವಣೆ- ಇದನ್ನು ಪಾಲಿಸ್ಲಿಲ್ಲ ಅಂದ್ರೆ ಟಿಕೆಟ್ ಕ್ಯಾನ್ಸಲ್ !!
National news Indian Railway rules TTE will cancel ticket if this work is not done
Indian Railway: ಭಾರತೀಯ ರೈಲ್ವೆ ಇಲಾಖೆ ಬಗ್ಗೆ ಎಲ್ಲರಿಗೂ ತಿಳಿದಿದೆ. ವಿಶ್ವದಾದ್ಯಂತ ನಾಲ್ಕನೇ ಅತಿ ದೊಡ್ಡ ರೈಲ್ವೆ ಪ್ಲಾಟ್ಫಾರ್ಮ್ ನಮ್ಮ ದೇಶದ್ದು ಎಂಬುದು ಎಲ್ಲರಿಗೂ ಹೆಮ್ಮೆಯ ಸಂಗತಿ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ರೈಲ್ವೆ ಇಲಾಖೆಯು ಬಹಳಷ್ಟು ಮಹತ್ತರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿದೆ. ಹೈಟೆಕ್ ವ್ಯವಸ್ಥೆಗಳನ್ನು ಕಲ್ಪಿಸಿ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲಗಳನ್ನು ಮಾಡಿ ಕೊಡುತ್ತಿದೆ. ಇದರೊಂದಿಗೆ ಹಲ-ಕೆಲವು ನಿಯಮಗಳನ್ನು ಜಾರಿಗೊಳಿಸುತ್ತದೆ.
ಹೌದು, ಭಾರತೀಯ ರೈಲ್ವೆ(Indian Railway) ಇಲಾಖೆಯು ತನ್ನ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಲೆಂದು ಹಲವು ಉಪಯುಕ್ತ ಯೋಜನೆಗಳನ್ನು ಜಾರಿಗೊಳಿಸುತ್ತದೆ. ಉಚಿತ ಟಿಕೆಟ್, ರಿಯಾಯಿತಿ ಟಿಕೆಟ್, ಉಚಿತ ವಿಶ್ರಾಂತಿ ಕೊಠಡಿ ವ್ಯವಸ್ಥೆ, ಸೂಕ್ತ ಆಸನ ವ್ಯವಸ್ಥೆ ಹೀಗೆ ಅನೇಕ. ಇದರೊಂದಿಗೆ ಕೆಲವು ನಿಯಮಗಳನ್ನೂ ಜಾರಿಗೊಳಿಸುವುದುಂಟು. ಅಂತೆಯೇ ಇದೀಗ ಹೊಸದಾದ ನಿಯಮವೊಂದನ್ನು ಇಲಾಖೆಯು ಜಾರಿಗೊಳಿಸಿದ್ದು, ಒಂದು ವೇಳೆ ನೀವು ರೈಲು ಹರಾಟ 10 ನಿಮಿಷದ ಒಳಗಾಗಿ ನೀವು ನಿಮ್ಮ ನಿಗದಿತ ಸೀಟ್ ಬಳಿ ಇಲ್ಲ ಎಂದಾದಲ್ಲಿ TTE ನಿಮ್ಮ ಟಿಕೆಟ್ ಅನ್ನು ಸುಲಭವಾಗಿ ಕ್ಯಾನ್ಸಲ್ ಮಾಡಿಬಿಡುತ್ತಾರೆ.
ಅಂದಹಾಗೆ ಈ ನಿಯಮವನ್ನು ಜಾರಿಗೆ ತರಲು ಒಂದು ಬಲವಾದ ಕಾರಣ ಉಂಟು. ಅದೇನೆಂದರೆ ಟಿಕೆಟ್ ಅನ್ನು ಮುಂಚಿತವಾಗಿ ಬುಕ್ ಮಾಡುವವರು 10 ನಿಮಿಷವಲ್ಲ ಮುಂದಿನ ಸ್ಟೇಷನ್ ಬಂದರೂ ಕೂಡ ಪತ್ತೆಯಾಗುವುದಿಲ್ಲ. ಇದು ಟಿಕೆಟ್ ಚೆಕ್ಕಿಂಗ್ ಬರುವ TTE ಅವರಿಗೆ ಅವರಿಗೆ ದೊಡ್ಡ ತಲೆನೋವಾಗಿತ್ತು. ಯಾವ ಸೀಟ್ ಖಾಲಿ ಇದೆ, ಯಾವುದು ಬುಕ್ ಆಗಿದೆ ಎಂಬುದು ತಿಳಿಯುತ್ತಲೇ ಇರಲಿಲ್ಲ. ಹೀಗಾಗಿ ಇಲಾಖೆಯು ಮಹತ್ವದ ನಿರ್ಧಾರ ಕೈಗೊಂಡಿದ್ದು ರೈಲು ಹೊರಟು 10ನಿಮಿಷವಾದರೂ ಬುಕ್ ಮಾಡಿದ ಸೀಟಿಗೆ ಪ್ರಯಾಣಿಕರು ಬರಲಿಲ್ಲವೆಂದರೆ ಅದನ್ನು Absent ಎಂದು ಹಾಕಿಕೊಂಡು ಬೇರೆ ಪ್ರಯಾಣಿಕರಿಗೆ ಆ ಸೀಟನ್ನು ನೀಡುತ್ತಾರೆ.
ಹೀಗಾಗಿ ರೈಲ್ವೆ ಪ್ರಯಾಣಿಕರು ರೈಲು ಬರುವ 10 ನಿಮಿಷ ಮುಂಚಿತವಾಗಿ ಅಥವಾ ಸ್ವಲ್ಪ ಮುಂಗಡವಾಗಿ ರೈಲ್ವೆ ನಿಲ್ದಾಣಕ್ಕೆ ಬಂದರೆ ಉಚಿತವೆನಿಸುತ್ತದೆ. ಇಲ್ಲವಾದರೆ ಇಲಾಖೆಯ ನಿಯಮದಂತೆ ನಿಮ್ಮ ಟಿಕೆಟ್ ಕ್ಯಾನ್ಸಲ್ ಆಗೋದು ಪಕ್ಕಾ!!
ಇದನ್ನೂ ಓದಿ: Adhar card: ಆಧಾರ್ ಕಾರ್ಡ್ ನಲ್ಲಿ ನಿಮ್ಮ ಫೋಟೋ ಚೆನ್ನಾಗಿಲ್ವಾ ?! ಜಸ್ಟ್ ಹೀಗ್ ಮಾಡಿ ಕುಳಿತಲ್ಲೇ ಹೊಸ ಫೋಟೋ ಹಾಕಿ !!