Deepavali Special Trains:ಪ್ರಯಾಣಿಕರೆ ಗಮನಿಸಿ : ಇಲ್ಲಿದೆ ಮೈಸೂರು-ಬೆಂಗಳೂರು-ಮಂಗಳೂರು ವಿಶೇಷ ರೈಲಿನ ವೇಳಾಪಟ್ಟಿ!!

Karnataka news Mysuru Bengaluru mangaluru Deepavali special train schedule is here

Deepavali Special Trains: ದೀಪಾವಳಿ ಹಬ್ಬದ(Deepvali)ಸಂದರ್ಭದಲ್ಲಿ ತಮ್ಮ ಊರಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವುದು ಮಾಮೂಲಿ. ಇದೇ ರೀತಿ, ರೈಲಿನಲ್ಲಿ ದೀಪಾವಳಿ ಹಬ್ಬದ ಸಮಯದಲ್ಲಿ ಪ್ರಯಾಣಿಕರ ದಟ್ಟಣೆ ತಪ್ಪಿಸುವ ನಿಟ್ಟಿನಲ್ಲಿ ನೈಋತ್ಯ ರೈಲ್ವೆ ಹಲವು ಮಾರ್ಗದಲ್ಲಿ(Deepavali Special Trains) ವಿಶೇಷ ರೈಲು ಸೇವೆಯ ವ್ಯವಸ್ಥೆ ಮಾಡಿದೆ.

ಮೈಸೂರು-ಮಂಗಳೂರು ಜಂಕ್ಷನ್ ನಡುವೆ ರೈಲು ನಂಬರ್ 07303 ಸಂಚರಿಸಲಿದ್ದು, ಮೈಸೂರಿನಿಂದ ನವೆಂಬರ್ 10ರಂದು ರಾತ್ರಿ 8.30ಕ್ಕೆ ಹೊರಡುವ ರೈಲು ರಾತ್ರಿ 11:25ಕ್ಕೆ ಕೆಎಸ್ಆರ್‌ ಬೆಂಗಳೂರು ನಿಲ್ದಾಣ ತಲುಪಲಿದೆ. ರಾತ್ರಿ 11.30ಕ್ಕೆ ಹೊರಟು ಮರುದಿನ ಬೆಳಗ್ಗೆ 9.40ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.
ಬೆಂಗಳೂರು-ಮಂಗಳೂರು (Bangalore – Mangalore)ಮಾರ್ಗದಲ್ಲಿ ಕೂಡ ವಿಶೇಷ ರೈಲು ಘೋಷಣೆ ಮಾಡಿದ್ದು, ರೈಲಿನ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ. ನೈಋತ್ಯ ರೈಲ್ವೆ ಮೈಸೂರು-ಬೆಂಗಳೂರು- ಮಂಗಳೂರು ನಡುವೆ ಒಂದು ಬಾರಿ ಸಂಚಾರ ನಡೆಸುವ ದೀಪಾವಳಿ ವಿಶೇಷ ರೈಲು ಘೋಷಣೆ ಮಾಡಿದೆ. ಬೆಂಗಳೂರು ಮತ್ತು ಕರಾವಳಿ ಕರ್ನಾಟಕ ಭಾಗಕ್ಕೆ ಸಂಚಾರ ನಡೆಸುವ ಜನರು ರೈಲು ಸೇವೆ ಪ್ರಯೋಜನ ಪಡೆಯಬಹುದು.

ಈ ವಿಶೇಷ ರೈಲುಗಳಲ್ಲಿ ಜನರಲ್, ಸ್ಲೀಪರ್ ಕ್ಲಾಸ್, 3 ಟೈರ್ ಎಸಿ, 2 ಟೈರ್ ಎಸಿ ಹಾಗೂ ಪ್ರಥಮ ದರ್ಜೆಯ ಕ್ಯಾಬಿಪ್ ಕೋಚುಗಳನ್ನು ಒಳಗೊಂಡಿರುತ್ತದೆ. ಇದು ವಿಶೇಷ ರೈಲು ಸೇವೆ ಆಗಿರುವ ಹಿನ್ನೆಲೆ ರೈಲಿನಲ್ಲಿ ಬೆಡ್ ಶೀಟ್ ನೀಡುವುದಿಲ್ಲ ಎಂಬುದನ್ನು ಗಮನಿಸಬೇಕು. ಮಂಗಳೂರು ಜಂಕ್ಷನ್-ಮೈಸೂರು ನಡುವೆ ರೈಲು ನಂಬರ್ 07304 ಸಂಚಾರ ನಡೆಸಲಿದ್ದು, ಮಂಗಳೂರಿನಿಂದ ನವೆಂಬರ್ 14ರಂದು 5.15ಕ್ಕೆ ಹೊರಡಲಿದ್ದು, ಮರುದಿನ ಬೆಳಗ್ಗೆ 7.30ಕ್ಕೆ ಮೈಸೂರು ನಗರವನ್ನು ತಲುಪುತ್ತದೆ.

ಮೈಸೂರು-ಮಂಗಳೂರು ಜಂಕ್ಷನ್-ಮೈಸೂರು ನಡುವೆ ರೈಲು ನಂಬರ್ 07303/ 07304 ಸಂಚರಿಸಲಿದೆ. ಮೈಸೂರಿನಿಂದ ಹೊರಡುವ ರೈಲು ಕೆಎಸ್ಆರ್ ಬೆಂಗಳೂರು, ಕುಣಿಗಲ್, ಹಾಸನ ಮಾರ್ಗವಾಗಿ ಸಂಚರಿಸಲಿದೆ.

ದೀಪಾವಳಿ ವಿಶೇಷ ರೈಲು ಎರಡೂ ಮಾರ್ಗದಲ್ಲಿ ಮಂಡ್ಯ, ಕೆಂಗೇರಿ, ಕೆಎಸ್ಆರ್ ಬೆಂಗಳೂರು (ಮೆಜೆಸ್ಟಿಕ್), ಯಶವಂತಪುರ, ನೆಲಮಂಗಲ, ಕುಣಿಗಲ್, ಶ್ರವಣಬೆಳಗೊಳ, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಮಣ್ಯ ರೋಡ್, ಕಬಕ ಪುತ್ತೂರು ಮತ್ತು ಬಂಟ್ವಾಳ ನಿಲ್ದಾಣದಲ್ಲಿ ತಂಗಲಿದೆ.ನೈಋತ್ಯ ರೈಲ್ವೆ ಈಗಾಗಲೇ ಬೆಂಗಳೂರು-ಹುಬ್ಬಳ್ಳಿ-ಬೀದರ್, ಬೆಂಗಳೂರು-ವಿಜಯಪುರ ನಡುವೆ ಸಹ ಒಂದು ಬಾರಿ ಸಂಚಾರ ನಡೆಸುವ ವಿಶೇಷ ರೈಲು ವ್ಯವಸ್ಥೆ ಕಲ್ಪಿಸಿದೆ.

ಇದನ್ನೂ ಓದಿ:  Subsidy Loan For Home: ಕಾಂಗ್ರೆಸ್ ಸರ್ಕಾರದಿಂದ 6ನೇ ಗ್ಯಾರಂಟಿ ಘೋಷಣೆ- ಇಂತವರಿಗಿನ್ನು ಉಚಿತವಾಗಿ ಸಿಗಲಿದೆ ಈ ಬಂಪರ್ ಸೌಲಭ್ಯ!!

Leave A Reply

Your email address will not be published.