Pension Scheme: ಪಿಂಚಣಿ ಪಡೆಯುವವರೇ ಇತ್ತ ಗಮನಿಸಿ- ಇನ್ನು NPCI ಲಿಂಕ್ ಕಡ್ಡಾಯ, ಮಾಡಿಲ್ಲ ಅಂದ್ರೆ ಸಿಗಲ್ಲ ಪೆನ್ಶನ್ !!

Important update for pension scheme holders if you are not getting money if you don't do this work

Pension Scheme: ಸಾಮಾಜಿಕ ಭದ್ರತಾ ಯೋಜನೆಯ ಪಿಂಚಣಿಗಳನ್ನು(Pension Scheme) ಫಲಾನುಭವಿಗಳಿಗೆ ಆಧಾರ್ ಆಧಾರಿತ ನೇರ ಹಣ ಸಂದಾಯ(DBT)ಯೋಜನೆ ಮೂಲಕ ಪಾವತಿ ಮಾಡಲು ಕಡ್ಡಾಯವಾಗಿ ಫಲಾನುಭವಿಗಳ ಬ್ಯಾಂಕ್/ಅಂಚೆ ಇಲಾಖೆಯ ಉಳಿತಾಯ ಖಾತೆಗೆ ಎನ್‍ಪಿಸಿಐ ಲಿಂಕ್(NPCI Link)ಮಾಡಬೇಕಾಗುತ್ತದೆ.

ಸರ್ಕಾರ ಸಾಮಾಜಿಕ ಭದ್ರತಾ ಯೋಜನೆಯ ಪಿಂಚಣಿಗಳಾದ ವೃದ್ದಾಪ್ಯ ಯೋಜನೆ(Old Age Pension), ವಿಧವಾ ಯೋಜನೆ, ಅಂಗವಿಕಲ ಯೋಜನೆ, ಸಂಧ್ಯಾ ಸುರಕ್ಷಾ ಯೋಜನೆ, ಮನಸ್ವಿನಿ ಯೋಜನೆ, ಮೈತ್ರಿ ಯೋಜನೆಗಳ ಮಾಸಿಕ ಪಿಂಚಣಿಯನ್ನು ಡಿಬಿಟಿ (DBT)ಮೂಲಕ ಪಾವತಿ ಮಾಡಲು ತೀರ್ಮಾನ ಕೈಗೊಂಡಿದೆ.ಒಂದು ವೇಳೆ ನಿಮ್ಮ ಖಾತೆಯು ಎನ್‍ಪಿಸಿಐ ಲಿಂಕ್ ( NPCI Link) ಆಗದೆ ಇದ್ದಲ್ಲಿ ತಮ್ಮ ಆಧಾರ್ ಕಾರ್ಡ್, ಪಾನ್ ಕಾರ್ಡ್ ಮತ್ತು ಪಾಸ್ ಪುಸ್ತಕದೊಂದಿಗೆ ಸಂಬಂಧಿಸಿದ ಬ್ಯಾಂಕ್/ಅಂಚೆ ಇಲಾಖೆಗೆ ನವೆಂಬರ್ ಮಾಹೆಯ ಅಂತ್ಯದೊಳಗೆ ಭೇಟಿ ನೀಡಿ ಎನ್‍ಪಿಸಿಐ ಮ್ಯಾಪಿಂಗ್ ಮಾಡಿಸಿಕೊಳ್ಳಲು ಕ್ರಮ ವಹಿಸಲು ಸೂಚಿಸಲಾಗಿದೆ.

ಎನ್‍ಪಿಸಿಐ ಲಿಂಕ್ ನವೆಂಬರ್ ಅಂತ್ಯದೊಳಗೆ ಮಾಡದಿದ್ದಲ್ಲಿ ಪಿಂಚಣಿಯನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಇಲಾಖೆ ಎಚ್ಚರಿಕೆ ನೀಡಿದೆ. ಈ ನಿಟ್ಟಿನಲ್ಲಿ ಬ್ಯಾಂಕ್/ಅಂಚೆ ಖಾತೆಗೆ ಎನ್‍ಪಿಸಿಐ ಲಿಂಕ್ ಆಗದ ಫಲಾನುಭವಿಗಳ ಪಟ್ಟಿಯು ಆಧಾರ್ ಗ್ರಾಮ ಆಡಳಿತಾಧಿಕಾರಿ(ವಿಎ) ಕಚೇರಿಯಲ್ಲಿರಲಿದೆ. ಫಲಾನುಭವಿಗಳು ವಿಎ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲು ಸೂಚಿಸಲಾಗಿದೆ.

 

ಇದನ್ನು ಓದಿ: Puttur: ಕಲ್ಲೇಗ ಟೈಗರ್ ಅಕ್ಷಯ್ ಕೊಲೆ ಪ್ರಕರಣ : ಗಾಂಜಾ ಘಾಟು ಸಂಶಯ ಬಗ್ಗೆ ಎಸ್ಪಿ ಹೇಳಿದ್ದೇನು?

Leave A Reply

Your email address will not be published.