Fireworks Ban: ಪಟಾಕಿ ನಿಷೇಧದ ಕುರಿತು ಬಂತು ಮತ್ತೊಂದು ಹೊಸ ರೂಲ್ಸ್ – ಸಾರಿಗೆ ಇಲಾಖೆಯಿಂದ ಖಡಕ್ ಆದೇಶ
Fireworks ban transport department of Karnataka order prohibition of firecrackers in public vehicles
Fireworks Ban: ರಾಜಧಾನಿ ಬೆಂಗಳೂರು ಅತ್ತಿಬೆಲೆಯಲ್ಲಿ ಇತ್ತೀಚೆಗೆ ನಡೆದ ಪಟಾಕಿ ದುರಂತಕ್ಕೆ ಇಡೀ ರಾಜ್ಯವೇ ಮರುಗಿದೆ. ಘೋರ ದುರಂತದಲ್ಲಿ 14 ಮಂದಿ ಸುಟ್ಟು ಕರಕಲಾಗಿದ್ದು, ಈ ಹಿನ್ನೆಲೆಯಲ್ಲಿ ದೀಪಾವಳಿ ಹಬ್ಬಕ್ಕೆ ಸಾರ್ವಜನಿಕ ಸಾರಿಗೆ ವಾಹನದಲ್ಲಿ ಪಟಾಕಿ ಸಾಗಾಟವನ್ನು ನಿಷೇಧಗೊಳಿಸಿ (Fireworks Ban) ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.
ಹೌದು, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಯಾವುದೇ ದುರ್ಘಟನೆಗಳು ಸಂಭವಿಸದಂತೆ ತಡೆಗಟ್ಟಲು ಸಾರ್ವಜನಿಕ ಸಾರಿಗೆ ವಾಹನದಲ್ಲಿ ಪಟಾಕಿ ಸಾಗಾಟವನ್ನು ನಿಷೇಧ ಮಾಡಿ ಆದೇಶ ಹೊರಡಿಸಿದೆ. ಬಸ್, ಟ್ಯಾಕ್ಸಿ ಸೇರಿದಂತೆ ಸಾರ್ವಜನಿಕ ಸಾರ್ವಜನಿಕ ಸಾರಿಗೆ ವಾಹನದಲ್ಲಿ ಪಟಾಕಿ ಸಾಗಾಟವನ್ನು ನಿಷೇಧ ಆಜ್ಞೆ ಹೊರಡಿಸಲಾಗಿದ್ದು, ಪ್ರಯಾಣಿಕರು ಖಾಸಗಿ ಬಸ್ ಗಳಲ್ಲಿ ಪಟಾಕಿ ಸಾಗಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಖಾಸಗಿ ಬಸ್ ಮಾಲೀಕರಿಗೆ ಸಾರಿಗೆ ಇಲಾಖೆ ಮುನ್ಸೂಚನೆ ನೀಡಿದೆ.
ಒಂದು ವೇಳೆ ಯಾವುದೇ ಸಾರ್ವಜನಿಕ ವಾಹನಗಳಲ್ಲಿ ಪಟಾಕಿ ತೆಗೆದುಕೊಂಡು ಹೋಗುತ್ತಿರುವುದು ಪತ್ತೆ ಆದಲ್ಲಿ, ಪಟಾಕಿ ಸಾಗಿಸುವ ಪ್ರಯಾಣಿಕರು ಹಾಗೂ ಬಸ್ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕ ವಾಹನಗಳಲ್ಲಿ ಹೊರತುಪಡಿಸಿ ಗೂಡ್ಸ್ ವಾಹನಗಳಲ್ಲಿ ಮಾತ್ರ ಪಟಾಕಿ ಸಾಗಾಣೆಗೆ ಅವಕಾಶ ನೀಡಲಾಗುವುದು ಎಂದು ಸಾರಿಗೆ ಇಲಾಖೆ ತಿಳಿಸಿದೆ.
ಇನ್ನು, ಡಿಸಿ ಗೂಡ್ಸ್ ವಾಹನಗಳಲ್ಲಿನ ಸಾಗಾಟಕ್ಕೂ ಸಾರಿಗೆ ಇಲಾಖೆಯಿಂದ ಅನುಮತಿ ಕಡ್ಡಾಯ ಎಂದು ಆದೇಶದಲ್ಲಿ ಹೇಳಲಾಗಿದ್ದು, ಅನುಮತಿ ಇಲ್ಲದೆ ಪಟಾಕಿ ಸಾಗಾಟ ಮಾಡಿದರೆ ವಾಹನಗಳ ಪರ್ಮಿಟ್ ರದ್ದು ಮಾಡಿ ಸಾರಿಗೆ ಇಲಾಖೆ ವಾಹನವನ್ನು ವಶಕ್ಕೆ ಪಡೆಯಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.
ಅದಲ್ಲದೆ ದೀಪಾವಳಿ ಹಬ್ಬಕ್ಕೆ ಸಾರ್ವಜನಿಕ ಸಾರಿಗೆ ವಾಹನದಲ್ಲಿ ಪಟಾಕಿ ಸಾಗಾಟವನ್ನು ನಿಷೇಧಗೊಳಿಸಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದ ಬೆನ್ನಲ್ಲೇ, ಪಟಾಕಿ ಸಾಗಾಟದಲ್ಲಿ ಲೋಪಗಳನ್ನು ಪತ್ತೆ ಹಚ್ಚಲು ಸಾರಿಗೆ ಇಲಾಖೆ ಅಧಿಕಾರಿಗಳು ತಪಾಸಣೆ ಆರಂಭ ಮಾಡಿದ್ದಾರೆ.
ಇದನ್ನೂ ಓದಿ: ರೇಷನ್ ಕಾರ್ಡ್ ದಾರರಿಗೆ ಕೇಂದ್ರ ದಿಂದಲೂ ಭರ್ಜರಿ ಗುಡ್ ನ್ಯೂಸ್ – ಪ್ರಮುಖ ನಿರ್ಧಾರ ಘೋಷಣೆ !!