BPL Card: ಹೊಸದಾಗಿ BPL ಕಾರ್ಡ್’ಗೆ ಅರ್ಜಿ ಹಾಕೋರಿಗೆ ಬಂತು ಹೊಸ ರೂಲ್ಸ್- ಈ 4 ಮಾನದಂಡಗಳು ಕಡ್ಡಾಯ !!

New Rules for Applying for New BPL Card

BPL Card: ಸರ್ಕಾರವು ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಅವಕಾಶ ಮಾಡಿಕೊಟ್ಟಿದೆ. ಆದರೆ ಇನ್ಮುಂದೆ BPL ಕಾರ್ಡ್(BPL Card) ಗಾಗಿ ಅರ್ಜಿ ಹಾಕುವವರಿಗೆ ಈ 4 ಮಾನದಂಡಗಳನ್ನು ಫಿಕ್ಸ್ ಮಾಡಿ ಹೊಸ ನಿಯಮವನ್ನು ಜಾರಿಗೊಳಿಸಿದೆ.

 

ಹೌದು, ಇಂದಿನ ದಿನಗಳಲ್ಲಿ ರೇಷನ್ ಕಾರ್ಡ್ ಕೇವಲ ಪಡಿತರವನ್ನು ಅಥವಾ ರೇಷನ್ ಅನ್ನು ಪಡೆಯಲು ಮಾತ್ರ ಉಪಯುಕ್ತವಾಗುವುದಿಲ್ಲ. ಸರ್ಕಾರದ ಅನೇಕ ಯೋಜನೆಗಳನ್ನು ಪಡೆಯಲು ರೇಷನ್ ಕಾರ್ಡ್ ತುಂಬಾ ಅಗತ್ಯವಾಗಿದೆ. ಅದರಲ್ಲೂ ಕೂಡ ಬಿಪಿಎಲ್ ಕಾರ್ಡ್ ದಾರರಿಗೆ ಸಾಕಷ್ಟು ಸರ್ಕಾರದ ಸವಲತ್ತುಗಳು ಸಿಗುವುದರಿಂದ ಅನೇಕರು ಈಗ ಹೊಸದಾಗಿ ಅರ್ಜಿಯನ್ನು ಹಾಕಲು ಮುಂದಾಗಿದ್ದಾರೆ. ಆದರೆ ಸರ್ಕಾರ ಅವರಿಗೆ 4 ಮಾನದಂಡಗಳನ್ನು ವಿಧಿಸಿದ್ದು, ತಪ್ಪದೆ ಅವುಗಳ ಪಾಲನೆಯಾಗಿದ್ದರೆ ಮಾತ್ರ ಅಂತವರು BPL ಕಾರ್ಡ್ ಗೆ ಅರ್ಜಿಯನ್ನು ಹಾಕಬಹುದಾಗಿದೆ. ಹಾಗಿದ್ರೆ ಯಾವುವು ಆ ಮಾನದಂಡಗಳೆಂದು ತಿಳಿಯೋಣ ಬನ್ನಿ

ಸರ್ಕಾರ ವಿಧಿಸಿದ ಮಾನದಂಡಗಳು :
• ನೂರು ಚದರ ಮೀಟರ್ ಗಿಂತಲೂ ದೊಡ್ಡ ಸ್ವಂತ ಮನೆಯನ್ನು (own house) ಹೊಂದಿರಬಾರದು.
• ಸ್ವಂತ 4 ಚಕ್ರದ ವಾಹನ (Own Car or Four Wheeler) ಅಥವಾ ಟ್ರ್ಯಾಕ್ಟರ್ ಹೊಂದಿರಬಾರದು
• ಯಾವುದೇ ಶಸ್ತ್ರಾಸ್ತ್ರ ಪರವಾನಿಗೆ ಪಡೆದುಕೊಂಡಿರಬಾರದು.
• ಹಳ್ಳಿಯಲ್ಲಿ ವಾರ್ಷಿಕ ಆದಾಯ ಎರಡು ಲಕ್ಷ ಹಾಗೂ ನಗರದಲ್ಲಿ ವಾರ್ಷಿಕ ಆದಾಯ 3 ಲಕ್ಷ ಮೀರಿರಬಾರದು.
ಈ ನಾಲ್ಕು ನಿಯಮಗಳನ್ನು ಯಾರು ಮೀರುವುದಿಲ್ಲವೋ ಅಂತವರಿಗೆ ಮಾತ್ರ BPL ಕಾರ್ಡ್ ಪಡೆಯಲು ಅರ್ಜಿ ಹಾಕಲು ಅವಕಾಶ ಮಾಡಿಕೊಟ್ಟಿದೆ.

ಇಷ್ಟೇ ಅಲ್ಲದೆ ಕೇವಲ ಹೊಸದಾಗಿ ಅರ್ಜಿ ಹಾಕುವರಿಗೆ ಮಾತ್ರ ಈ ನಿಯಮಗಳು ಅಪ್ಲೆಯಾಗುವುದಲ್ಲ. ಈಗಾಗಲೇ ಸುಳ್ಳು ದಾಖಲೆಗಳನ್ನು ತೋರಿಸಿ ಯಾರಿಲ್ಲ ಬಿಪಿಎಲ್ ಕಾರ್ಡ್ ಅನ್ನು ಹೊಂದಿದ್ದೀರಾ ಅಂತವರಿಗೂ ಕೂಡ ಈ ಮಾನದಂಡಗಳು ಅಪ್ಲೈ ಆಗುತ್ತದೆ. ಹಾಗಾಗಿ ಈಗಲೇ ಈ ರೀತಿಯ ನಕಲಿಯಾಗಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಕ್ಕೆ ವಂಚಿಸಿ ಯಾರೆಲ್ಲ ಬಿಪಿಎಲ್ ಕಾರ್ಡ್ ಅನ್ನು ಹೊಂದಿದ್ದೀರಾ ಅವರು ಈಗಲೇ ಹಿಂದಿರುಗಿಸಬೇಕು. ನೀವು ಹಿಂತಿರುಗಿಸದಿದ್ದರೂ ಕೂಡ ಸರ್ಕಾರ ಈಗಾಗಲೇ ಇದರ ಕುರಿತು ಸಮೀಕ್ಷೆ ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ಸೂಕ್ತ ಕ್ರಮವನ್ನು ಕೈಗೊಳ್ಳುತ್ತದೆ.

 

ಇದನ್ನು ಓದಿ: ಮೊಬೈಲ್ ಬಳಕೆದಾರರೇ ಹುಷಾರ್- ತಪ್ಪಿಯೂ ಈ App ಅನ್ನು ಡೌನ್ಲೋಡ್ ಕೊಡ್ಬೇಡಿ – ಕೊಟ್ರೆ ನಿಮ್ಮ ಬ್ಯಾಂಕ್ ಅಕೌಂಟ್ ಖಾಲಿ ಖಾಲಿ

Leave A Reply

Your email address will not be published.